ಹುಕ್ಕೇರಿ, 17 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಅಪ್ಪಣಗೌಡ ಪಾಟೀಲ ಅವರ ದೂರದೃಷ್ಟಿಯ ಪರಿಣಾಮವಾಗಿ ಆರಂಭವಾದ ಈ ಸಹಕಾರಿ ಸಂಘವು, ರೈತರ ಹಾಗೂ ಸಾಮಾನ್ಯ ಜನರ ಬೆಳವಣಿಗೆಗಾಗಿ ಸದಾ ಶ್ರಮಿಸಿರುವ ಸಂಸ್ಥೆಯಾಗಿದೆ. ಇಂತಹ ಸಂಸ್ಥೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮುಂಬರುವ ಈ ಚುನಾವಣೆ ಆ ದಿಸೆಯಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ಎಲ್ಲರೂ ಒಗ್ಗಟ್ಟಿನಿಂದಲೇ ನಾಳೆಯಿಂದ ಪ್ರಚಾರ ಪ್ರಾರಂಭಿಸಿ ಎಂದರು.
ಈ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು, ನಿಜವಾದ ಶಕ್ತಿ ನಮ್ಮ ಒಗ್ಗಟ್ಟಿನಲ್ಲಿ ಮತ್ತು ಕಾರ್ಯಸಾಧನೆಗಳಲ್ಲಿ ಅಡಗಿದೆ. ಜನರ ಹಿತಕ್ಕಾಗಿ ಕೆಲಸ ಮಾಡಿದ ಈ ಸಹಕಾರಿ ಸಂಘವನ್ನು ಉಳಿಸಿ ಕಾಪಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa