ನಾನು ಹಿಂದುತ್ವ ಬಿಡುವುದಿಲ್ಲ : ಯತ್ನಾಳ
ವಿಜಯಪುರ, 17 ಆಗಸ್ಟ್ (ಹಿ.ಸ.) : ಆ್ಯಂಕರ್ : ನನ್ನ ಮೇಲ್ ಕೇಸ್ ಹಾಕೋರಿದ್ದರೇ ಹಾಕಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಮುಸ್ಲಿಂ ಯುವತಿಯರನ್ನು ಹಿಂದೂ ಯುವಕರು ಲವ್ ಮಾಡಿ ಮದುವೆಯಾದ್ರೆ 5 ಲಕ್ಷ ಘೋಷಣೆ ವಿಚಾರದಲ್ಲಿ ಯತ್ನಾಳ್ ವಿರುದ್ಧ ಕ್ರಮದ ಬಗ್ಗ
ಹಿಂದುತ್ವ


ವಿಜಯಪುರ, 17 ಆಗಸ್ಟ್ (ಹಿ.ಸ.) :

ಆ್ಯಂಕರ್ : ನನ್ನ ಮೇಲ್ ಕೇಸ್ ಹಾಕೋರಿದ್ದರೇ ಹಾಕಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಮುಸ್ಲಿಂ ಯುವತಿಯರನ್ನು ಹಿಂದೂ ಯುವಕರು ಲವ್ ಮಾಡಿ ಮದುವೆಯಾದ್ರೆ 5 ಲಕ್ಷ ಘೋಷಣೆ ವಿಚಾರದಲ್ಲಿ ಯತ್ನಾಳ್ ವಿರುದ್ಧ ಕ್ರಮದ ಬಗ್ಗೆ ನಿರ್ಧಾರ ಎಂದಿದ್ದ ಸಚಿವ ಎಂ. ಬಿ. ಪಾಟೀಲ್ ಹೇಳಿಕೆ ಪ್ರತಿಕ್ರಿಯೆ ನೀಡಿದರು.

ಹಿಂದೆ ಸಚಿವರಿದ್ದಾಗಲೂ ಎಂ. ಬಿ. ಪಾಟೀಲ್ ಕೇಸ್ ಹಾಕಿದ್ದಾರೆ. ನಾವು ಹಿಂದೂ ಪರ ಇರೋರೆ.

ಎಂ. ಬಿ. ಪಾಟೀಲ್ ಹೆದರಿಕೆ ಹಾಕಿದ್ರೆ ನಾವು ಹಿಂದೂತ್ವ ಬಿಡಲ್ಲ. ಹಿಂದೆ ಮಂತ್ರಿ ಇದ್ದಾಗಲು 26 ಕೇಸ್ ಹಾಕಿಸಿದ್ದಾರೆ. ಈಗ ಎಂ. ಬಿ. ಪಾಟೀಲ್ ವಿರುದ್ಧ ಯುದ್ಧಕ್ಕೆ ಸಿದ್ಧ ಎಂದರು.

ಇನ್ನು ಧಮ್ಕಿಗೆ ಹೆದರೋ ಮಗಾ ನಾ ಅಲ್ಲ.. ಹೆದರಿ ಮನೆಯಲ್ಲಿ ಕೂರಲ್ಲ. ನಾನು ಹಿಂದುಪರವಾಗಿ ಮಾತನಾಡೋನೆ.

ನಿಮ್ಮದೆ ಸರ್ಕಾರ ಇದೆ. ಜೈಲಿಗೆ ಹಾಕ್ತಿರಿ ಎಂದು ಹೆದರಿ ಮನೆಯಲ್ಲಿ ಕೂರಲ್ಲ. ನಿಮ್ಮ ಹಿಂದೆ ಇರೋರ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಕಿವಿಮಾತು ಹೇಳಿದರು.

ಅಲ್ಲದೇ, ಕ್ರಿಮಿನಲ್ ಕೇಸ್ ಇರೋನು ಬೆಳಿಗ್ಗೆ ನಿಮ್ಮ ಮನೆಯಲ್ಲೆ ಬಂದು ಕೂರ್ತಾನೆ. ಹಿಂದೆ ಅವನ ವಿರುದ್ಧವೇ ನೀವು ಐದು ಸಾವಿರ ಜನರೊಂದಿಗೆ ಹೋರಾಟ ಮಾಡಿದ್ರಿ ಎಂದರು. ಅರೆಸ್ಟ್ ಮಾಡೋರಿದ್ರೆ ಮಾಡಿ, ನಮಗೂ ಕಾಲ ಬರುತ್ತದೆ. ಮುಂದೆ ಬರೋದು ನಮ್ದೆ ಅಧಿಕಾರ. ನೀವು ಸಪೋರ್ಟ್ ಮಾಡೊ ಗೂಂಡಾಗಳಿಗೆ ಏನು ಅಂತ ತೋರಿಸೋ ಸಮಯ ಬರುತ್ತದೆ. 2028 ಕ್ಕೆ ನಿಮ್ಮ ಸರ್ಕಾರ ಹೋಗತ್ತದೆ, ನಮ್ಮ ಸರ್ಕಾರ ಬರುತ್ತದೆ ಎಂದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande