ಗದಗ, 17 ಆಗಸ್ಟ್ (ಹಿ.ಸ.) :
ಆ್ಯಂಕರ್ : ದತ್ತಾ ಪ್ರೈಮ್ ಬಿಜಿನೆಸ್ ಸೆಂಟರ್ ಡಿಸೈನು, ಅದಕ್ಕೆ ಬಂದಂತಹ ಬ್ರ್ಯಾಂಡ್ ನೇಮ್ ನೋಡಿದಾಗ ಗದಗ ಟೈಯರ್ ಥ್ರಿ ಸಿಟಿಯಿಂದ ಟೈಯರ್ ಟು ಸಿಟಿಗೆ ದಾಪುಗಾಲು ಇಡುತ್ತಿರುವ ಸಂಕೇತ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.
ಗದಗನಲ್ಲಿ ದತ್ತಾ ಪ್ರೈಮ್ ಬಿಸಿನೆಸ್ ಸೆಂಟರ್ ಉದ್ಘಾಟನೆಯನ್ನು ನೇರವೇರಿಸಿ ಬೆಂಗಳೂರಿನಲ್ಲಿ ಅಚ್ಚುಕಟ್ಟಾದ ಮಾಲಿದೆ ಅದೇ ರೀತಿ ಗದಗಿನಲ್ಲಿ ಮಾಡಿರುವುದು ಹೆಮ್ಮೆಯ ವಿಷಯ. ಕಿರಣ ಪ್ರಕಾಶ ಮಿತ್ರರೆಲ್ಲಾ ಸೇರಿ ಸಾಹಸ ಮಾಡಿದ್ದಾರೆ. ಗದಗನಲ್ಲಿ ಮಾಲ್ ಕಟ್ಟಿ ಹೈ ಸ್ಟ್ಯಾಂಡರ್ಡ್ ಸೇವೆ ಕೊಟ್ಟಿದ್ದಾರೆ. ಇದರ ಆರ್ಕಿಟೆಕ್ಚರ್ ದೀಪಾ ಕುಲಕರ್ಣಿ ಅವರಿಗೆ ಅಭಿನಂದನೆಗಳು. ನಾವು ಯೋಚನೆ ಮಾಡುವುದು ಮತ್ತು ಕಾರ್ಯಗತ ಮಾಡುವುದರಲ್ಲಿ ಬಹಳ ಅಂತರ ಇರುತ್ತದೆ. ಆದರೆ ನೀವು ಅಂದುಕೊಂಡಿದ್ದನ್ನು ಮಾಡಿದ್ದೀರಿ ಯಾವುದೂ ಸ್ಯಾಡೊ ಬಿಟ್ಟಿಲ್ಲ. ನಿಮಗೆ ಅಭಿನಂದನೆ. ಇಲ್ಲಿ ಬಂಡವಾಳ ಹೂಡಿರುವ ಎಲ್ಲರಿಗೂ ಅಭಿನಂದನೆಗಳು. ಅವರಿಗೊಂದು ಕಿವಿ ಮಾತು ಹೇಳಿದ್ದೇನೆ ಅದರಂತೆ ನಡೆದರೆ ಅವರಿಗೆ ಒಳ್ಳೆಯದಾಗುತ್ತದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಶ್ರೀ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ತೋಂಟದಾರ್ಯ ಮಠ ಡಂಬಳ - ಗದಗ ಪೂಜ್ಯರು ಸಾನಿಧ್ಯ ವಹಿಸಿದ್ದರು, ಸಚಿವರಾದ ಎಚ್.ಕೆ.ಪಾಟೀಲ್, ಶಾಸಕರಾದ ಸಿ.ಸಿ ಪಾಟೀಲ್, ಕೆ.ಎಲ್.ಇ ಸಂಸ್ಥೆಯ ನಿರ್ದೇಶಕರುಗಳಾದ ಶಂಕ್ರಣ್ಣ ಮುನವಳ್ಳಿ, ಮಹಾಂತೇಶ ಕವಟಗಿಮಠ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರಸಾಬ್ ಬಬರ್ಚಿ, ಬಿ.ಎಸ್.ಚನ್ನಬಸಪ್ಪ,&ಸನ್ಸ್ ಮಾಲಕರಾದ ಬಿ.ಸಿ. ಉಮಾಪತಿ, ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷರಾದ ರಾಜು ಕುರಡಗಿ, ದತ್ತಾ ಗ್ರುಪ್ ನ ವ್ಯವಸ್ಥಾಪಕ ನಿರ್ದೇಶಕರಾದ ಕಿರಣ ಭೂಮಾ , ಎಸ್.ಎಚ್ ಶಿವನಗೌಡರ ಸೇರಿದಂತೆ ದತ್ತಾ ಗ್ರುಪ್ ನ ನಿರ್ದೇಶಕರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP