ವಿಜಯಪುರ, 17 ಆಗಸ್ಟ್ (ಹಿ.ಸ.) :
ಆ್ಯಂಕರ್ : ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಯುವಕನೋರ್ವ ಮುಖ್ಯಮಂತ್ರಿಗೆ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಪಡೆದಿದ್ದಾನೆ.
ವಿಜಯಪುರ ತಾಲ್ಲೂಕಿನ ಐನಾಪುರ ಗ್ರಾಮದ ಯುವಕ ದೇವೇಂದ್ರ ಹಡ್ಲಗಿ ಪತ್ರ ಬರೆದಿದ್ದಾನೆ.
ಮುಖ್ಯಮಂತ್ರಿಯವರೇಮುಖ್ಯಮಂತ್ರಿಗೆ ಕಳೆದ 40 ವರ್ಷದ ನಮ್ಮ ಸಮುದಾಯದ ಒಳ ಮೀಸಲಾತಿ ಹೋರಾಟದ ಬೇಡಿಕೆಯನ್ನು ಶೀಘ್ರವೇ ತಾವು ಇತಿಹಾಸ ನಿರ್ಮಿಸುತ್ತೀರಿ ಎಂಬ ನಂಬಿಕೆಯಿಂದ ನನ್ನ ರಕ್ತದ ಮೂಲಕ ಮನವಿ ಮಾಡುತ್ತೇನೆ ಎಂದು ಪತ್ರ ಬರೆದಿದ್ದಾನೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಮಹಾನ್ ರಕ್ತದ ಮನವಿ.. ಒಳ ಮೀಸಲಾತಿ ಜಾರಿ ಮಾಡಿ.. ನೊಂದ ಮಾದಿಗರಿಗೆ ಸಾಮಾಜಿಕ ನ್ಯಾಯ ಕೊಡಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಿಕೊಂಡಿದ್ದಾನೆ.
ಹಿಂದೂಸ್ತಾನ್ ಸಮಾಚಾರ್ / jyothi deshpande