ಹುಬ್ಬಳ್ಳಿ, 17 ಆಗಸ್ಟ್ (ಹಿ.ಸ.) :
ಆ್ಯಂಕರ್ : ಶಾಲೆಗಳಿಗೆ ಬಣ್ಣ ಹಚ್ಚುವ ಬಣ್ಣದರ್ಪಣೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದ 1100 ಶಾಲೆಗಳಿಗೆ ಬಣ್ಣ ಹಚ್ಚಲು ಯೋಜನೆ ರೂಪಿಸಲಾಗಿದ್ದು. ಇದಕ್ಕಾಗಿ ಸುಮಾರು ರೂ. 60 ಕೋಟಿ ಹಣ ವ್ಯಯವಾಗಲಿದೆ. ಈಗಾಗಲೇ ಸುಮಾರು 800 ಶಾಲೆಗಳಿಗೆ ಬಣ್ಣ ಹಚ್ಚಲಾಗಿದೆ ಎಂದು ಧಾರವಾಡ ಸಂಸದ ಹಾಗೂ ಕೇಂದ್ರ ಸಚಿವ
ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದ ನೂತನ ಸರಕಾರಿ ಪ್ರೌಢಶಾಲೆಯ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ ಮಾತನಾಡಿದ ಅವರು,
ಛಬ್ಬಿ ಗ್ರಾಮಕ್ಕೆ ವಿಶೇಷ ಅನುದಾನದ ಮೂಲಕ ಪ್ರೌಢಶಾಲೆಯನ್ನು ನಿರ್ಮಾಣ ಮಾಡಲಾಗಿದೆ. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಸುಮಾರು 400 ಶಾಲೆಗಳನ್ನು ಸಿಎಸ್‌ಆರ್ ಅನುದಾನದಲ್ಲಿ ನಿರ್ಮಾಣ ಮಾಡಲಾಗಿರುತ್ತದೆ.
31,600 ಡೆಸ್ಕಗಳನ್ನು ವಿತರಿಸಲಾಗಿದೆ. 106 ಅಂಗನವಾಡಿ, ಶೌಚಾಲಯ, ಭೋಜನಾಲಯಗಳನ್ನು ಕಟ್ಟಿಸಲಾಗಿದೆ. 200 ಕ್ಕೂ ಹೆಚ್ಚು ಸ್ಮಾರ್ಟ್ ಕ್ಲಾಸ್ ತೆರೆಯಲಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಬೇಕಾಗಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa