ಅಲಾಸ್ಕಾದಲ್ಲಿ ಟ್ರಂಪ್–ಪುಟಿನ್ ಮಾತುಕತೆ
ವಾಷಿಂಗ್ಟನ್, 16 ಆಗಸ್ಟ್ (ಹಿ.ಸ.) : ಆ್ಯಂಕರ್ : ಉಕ್ರೇನ್‌ ಯುದ್ಧ ಅಂತ್ಯಗೊಳಿಸುವ ಕುರಿತಂತೆ ಅಲಾಸ್ಕಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ನಡೆದ ಶೃಂಗಸಭೆಯಲ್ಲಿ ನಿರ್ಣಾಯಕ ಒಪ್ಪಂದ ತಲುಪದಿದ್ದರೂ ಮಾತುಕತೆಯಲ್ಲಿ ಪ್ರಗತಿ ಕಂಡುಬಂದಿದೆ. ಎಲ್ಮ
Meeting


ವಾಷಿಂಗ್ಟನ್, 16 ಆಗಸ್ಟ್ (ಹಿ.ಸ.) :

ಆ್ಯಂಕರ್ : ಉಕ್ರೇನ್‌ ಯುದ್ಧ ಅಂತ್ಯಗೊಳಿಸುವ ಕುರಿತಂತೆ ಅಲಾಸ್ಕಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ನಡೆದ ಶೃಂಗಸಭೆಯಲ್ಲಿ ನಿರ್ಣಾಯಕ ಒಪ್ಪಂದ ತಲುಪದಿದ್ದರೂ ಮಾತುಕತೆಯಲ್ಲಿ ಪ್ರಗತಿ ಕಂಡುಬಂದಿದೆ.

ಎಲ್ಮೆಂಡಾರ್ಫ್-ರಿಚರ್ಡ್ಸನ್ ಮಿಲಿಟರಿ ನೆಲೆಯಲ್ಲಿ ನಡೆದ ಈ ಮುಚ್ಚಿದ ಬಾಗಿಲಿನ ಸಭೆ ಸುಮಾರು 2 ಗಂಟೆ 45 ನಿಮಿಷ ನಡೆಯಿತು. ಸಭೆಯ ನಂತರ ಟ್ರಂಪ್ “ಮಾತುಕತೆ ಫಲಪ್ರದ, ಕೆಲವು ಅಡೆತಡೆಗಳಿದ್ದರೂ ಶಾಂತಿಯತ್ತ ಹೆಜ್ಜೆಯಾಗಿದೆ” ಎಂದು ಹೇಳಿದರು. ಅವರು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹಾಗೂ ನ್ಯಾಟೋ ಪಾಲುದಾರರೊಂದಿಗೆ ವಿವರ ಹಂಚಿಕೊಳ್ಳುವುದಾಗಿ ತಿಳಿಸಿದರು.

ಪುಟಿನ್ ಪ್ರತಿಕ್ರಿಯಿಸಿ ಉಕ್ರೇನ್‌ನ ಭೌಗೋಳಿಕ ಸ್ಥಳ ರಷ್ಯಾ ಭದ್ರತೆಗೆ ಮೂಲಭೂತ ಬೆದರಿಕೆ ಎಂದು ಪುನರುಚ್ಚರಿಸಿ, ದೀರ್ಘಕಾಲೀನ ಒಪ್ಪಂದಕ್ಕೆ ಮೂಲ ಕಾರಣಗಳನ್ನು ನಿವಾರಣೆ ಮಾಡಬೇಕೆಂದು ಹೇಳಿದರು. ಇದೇ ವೇಳೆ ಅವರು ಮುಂದಿನ ಸಭೆಗೆ ಟ್ರಂಪ್ ಅವರನ್ನು ಮಾಸ್ಕೋಗೆ ಆಹ್ವಾನಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande