ಬೆಳಗಾವಿಯಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಸ್ಟಾರ್ ಏರ್ ವಿಮಾನ
ಬೆಳಗಾವಿ, 16 ಆಗಸ್ಟ್ (ಹಿ.ಸ.) : ಆ್ಯಂಕರ್ : ಬೆಳಗಾವಿಯಿಂದ ಮುಂಬೈಗೆ ಹೊರಟಿದ್ದ ಸ್ಟಾರ್ ಏರ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಪರಿಣಾಮ ಇಂದು ಬೆಳಗ್ಗೆ ತುರ್ತು ಭೂ ಸ್ಪರ್ಶ ಮಾಡಿದೆ. ಬೆಳಿಗ್ಗೆ 7.50ಕ್ಕೆ ಹಾರಾಟ ಆರಂಭಿಸಿದ್ದ ವಿಮಾನವು 8.30ರ ಸುಮಾರಿಗೆ ಬೆಳಗಾವಿಗೆ ವಾಪಸ್ ಬಂದು ಸುರಕ್ಷಿತವಾಗಿ
Star air


ಬೆಳಗಾವಿ, 16 ಆಗಸ್ಟ್ (ಹಿ.ಸ.) :

ಆ್ಯಂಕರ್ : ಬೆಳಗಾವಿಯಿಂದ ಮುಂಬೈಗೆ ಹೊರಟಿದ್ದ ಸ್ಟಾರ್ ಏರ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಪರಿಣಾಮ ಇಂದು ಬೆಳಗ್ಗೆ ತುರ್ತು ಭೂ ಸ್ಪರ್ಶ ಮಾಡಿದೆ.

ಬೆಳಿಗ್ಗೆ 7.50ಕ್ಕೆ ಹಾರಾಟ ಆರಂಭಿಸಿದ್ದ ವಿಮಾನವು 8.30ರ ಸುಮಾರಿಗೆ ಬೆಳಗಾವಿಗೆ ವಾಪಸ್ ಬಂದು ಸುರಕ್ಷಿತವಾಗಿ ಇಳಿಯಿತು.

ಈ ವೇಳೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 48 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ.

ಮುಂಬೈಗೆ ತೆರಳಬೇಕಿದ್ದ ಪ್ರಯಾಣಿಕರಿಗೆ ಬೇರೊಂದು ವಿಮಾನದ ವ್ಯವಸ್ಥೆ ಮಾಡಲಾಗಿದೆ ಎಂದು ವಿಮಾನ ನಿಲ್ದಾಣ ನಿರ್ದೇಶಕ ಎಸ್. ತ್ಯಾಗರಾಜನ್ ಮಾಹಿತಿ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande