ಮೃತರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 2 ಲಕ್ಷ ಪರಿಹಾರ
ಗದಗ, 16 ಆಗಸ್ಟ್ (ಹಿ.ಸ.) ಆ್ಯಂಕರ್: ಮೊದಲಗಟ್ಟಿ ಗ್ರಾಮದ ತುಂಗಭದ್ರಾ ನದಿ ತೀರದಲ್ಲಿ ಸ್ನಾನಕ್ಕೆಂದು ತೆರಳಿದಾಗ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ನಿವಾಸಿಗಳಾದ ಮಹೇಶ ಈಶ್ವರಪ್ಪ ಬಡಿಗೇರ, ಗುರುನಾಥ ನೀಲಪ್ಪ ಬಡಿಗೇರ ಹಾಗೂ ಶರಣಪ್ಪ ಸುಭಾಷ ಬಡಿಗೇರ ಇವರುಗಳು ದಿ: 8-3-2025 ರಂದು ಮೃತರಾಗಿದ್ದರು.
ಪೋಟೋ


ಗದಗ, 16 ಆಗಸ್ಟ್ (ಹಿ.ಸ.)

ಆ್ಯಂಕರ್:

ಮೊದಲಗಟ್ಟಿ ಗ್ರಾಮದ ತುಂಗಭದ್ರಾ ನದಿ ತೀರದಲ್ಲಿ ಸ್ನಾನಕ್ಕೆಂದು ತೆರಳಿದಾಗ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ನಿವಾಸಿಗಳಾದ ಮಹೇಶ ಈಶ್ವರಪ್ಪ ಬಡಿಗೇರ, ಗುರುನಾಥ ನೀಲಪ್ಪ ಬಡಿಗೇರ ಹಾಗೂ ಶರಣಪ್ಪ ಸುಭಾಷ ಬಡಿಗೇರ ಇವರುಗಳು ದಿ: 8-3-2025 ರಂದು ಮೃತರಾಗಿದ್ದರು.

ಮೃತರ ಕುಟುಂಬದ ಸದಸ್ಯರುಗಳಿಗೆ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ.ಗಳ ಪರಿಹಾರ ನೀಡುವ ಬಗ್ಗೆ ಮಂಜೂರಾತಿ ಆದೇಶ ಪ್ರತಿಯನ್ನು ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ವಿತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ರೋಹನ್ ಜಗದೀಶ್ , ಶಿರಹಟ್ಟಿ ತಹಶೀಲ್ದಾರರು ಹಾಜರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande