ಕಾಂಗ್ರೆಸ್ ವಿರುದ್ಧ ಸಂಸದ ಕಾರಜೋಳ ಕಿಡಿ
ವಿಜಯಪುರ, 16 ಆಗಸ್ಟ್ (ಹಿ.ಸ.) : ಆ್ಯಂಕರ್ : ಸತ್ಯ ಹೇಳಿದ್ದಕ್ಕೆ ಕೆ.ರಾಜಣ್ಣನ್ನು ವಜಾ ಮಾಡಲಾಗಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಸಂಸದ ರಾಹುಲ್ ಗಾಂಧಿ ಮೆಚ್ಚಿಸಲು ರಾಜಣ್ಣ ವಜಾ‌‌ ಮಾಡಲಾಗಿದೆ. ರಾಯರೆಡ್ಡಿ, ಬಿ ಆರ್ ಪಾಟೀಲ್ ಆಳಂದ, ಶಿವಗಂಗ
ಕಾರಜೋಳ


ವಿಜಯಪುರ, 16 ಆಗಸ್ಟ್ (ಹಿ.ಸ.) :

ಆ್ಯಂಕರ್ : ಸತ್ಯ ಹೇಳಿದ್ದಕ್ಕೆ ಕೆ.ರಾಜಣ್ಣನ್ನು ವಜಾ ಮಾಡಲಾಗಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಸಂಸದ ರಾಹುಲ್ ಗಾಂಧಿ ಮೆಚ್ಚಿಸಲು ರಾಜಣ್ಣ ವಜಾ‌‌ ಮಾಡಲಾಗಿದೆ. ರಾಯರೆಡ್ಡಿ, ಬಿ ಆರ್ ಪಾಟೀಲ್ ಆಳಂದ, ಶಿವಗಂಗ, ರಾಜು ಕಾಗೆ ಸತ್ಯ ಹೇಳಿದ್ದಾರೆ ಯಾಕೆ ವಜಾ ಮಾಡಿಲ್ಲ. ರಾಜಣ್ಣ ಮಾತ್ರ ವಜಾ ಮಾಡಿದ್ಯಾಕೆ..? ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಆದ್ರೆ ಸತ್ಯ ಹೇಳಿದ ಉಳಿದವರ ವಜಾ ಆಗಿಲ್ಲ. ಹೌಸಿಂಗ್ ಮಿನಿಸ್ಟರ್ ಗು ವಜಾ ಮಾಡಬೇಕಿತ್ತಲ್ಲ ಯಾಕ್ ಮಾಡಲಿಲ್ಲ. ಹೌಸಿಂಗ್ ಗೋಲ್ಮಾಲ್ ಬಗ್ಗೆ ಮಾತನಾಡಿದವ್ರನ್ನಾದ್ರು ವಜಾ ಮಾಡಬೇಕಿತ್ತಲ್ಲ. ರಾಜಣ್ಣ ದಲಿತ ಅನ್ನೋ ಕಾರಣಕ್ಕೆ ವಜಾ ಮಾಡಿದ್ದಾರೆ. ದಲಿತರನ್ನು ಒಡೆದು ಆಳೋದು ಕಾಂಗ್ರೆಸ್‌ನವರು. ಅದಕ್ಕಾಗಿ 60 ವರ್ಷ ಕಾಂಗ್ರೆಸ್ ಇದನ್ನೆ ಮಾಡ್ತಿದೆ ಎಂದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande