ಕೆಎಸ್ಆರ್ ಟಿಸಿ : ಪ್ರವಾಸಿ ತಾಣಗಳಿಗೆ ವಿಶೇಷ ಸಾರಿಗೆ ಸೌಲಭ್ಯ
ದಾವಣಗೆರೆ, 16 ಆಗಸ್ಟ್ (ಹಿ.ಸ.) : ಆ್ಯಂಕರ್ : ಆಗಸ್ಟ್ 17 ರಿಂದ ಪ್ರತಿ ಭಾನುವಾರ, ರಜಾ ದಿನಗಳಂದು ದಾವಣಗೆರೆಯಿಂದ ಜೋಗ-ಸಿಗಂದೂರು ಮತ್ತು ಅಂಜನಾದ್ರಿಬೆಟ್ಟ-ಹಂಪಿ-ತುಂಗಾಭದ್ರಾ ಡ್ಯಾಂ ಹಾಗೂ ಇಂಡಗುಂಜಿ-ಅಪ್ಸರಕೊಂಡ ವಾಟರ್ ಫಾಲ್ಸ್-ಇಕೋಬೀಚ್‍ಗೆ ದಾವಣಗೆರೆ ಕೆಎಸ್‍ಆರ್‍ಟಿಸಿಯಿಂದ ವಿಶೇಷ ಪ್ಯಾಕೇಜ್ ಸಾರಿಗೆ
ಕೆಎಸ್ಆರ್ ಟಿಸಿ : ಪ್ರವಾಸಿ ತಾಣಗಳಿಗೆ ವಿಶೇಷ ಸಾರಿಗೆ ಸೌಲಭ್ಯ


ದಾವಣಗೆರೆ, 16 ಆಗಸ್ಟ್ (ಹಿ.ಸ.) :

ಆ್ಯಂಕರ್ : ಆಗಸ್ಟ್ 17 ರಿಂದ ಪ್ರತಿ ಭಾನುವಾರ, ರಜಾ ದಿನಗಳಂದು ದಾವಣಗೆರೆಯಿಂದ ಜೋಗ-ಸಿಗಂದೂರು ಮತ್ತು ಅಂಜನಾದ್ರಿಬೆಟ್ಟ-ಹಂಪಿ-ತುಂಗಾಭದ್ರಾ ಡ್ಯಾಂ ಹಾಗೂ ಇಂಡಗುಂಜಿ-ಅಪ್ಸರಕೊಂಡ ವಾಟರ್ ಫಾಲ್ಸ್-ಇಕೋಬೀಚ್‍ಗೆ ದಾವಣಗೆರೆ ಕೆಎಸ್‍ಆರ್‍ಟಿಸಿಯಿಂದ ವಿಶೇಷ ಪ್ಯಾಕೇಜ್ ಸಾರಿಗೆ ವ್ಯವಸ್ಥೆ ಪ್ರಾರಂಭಿಸಲಾಗಿದೆ.

ದಾವಣಗೆರೆ, ಸಿಂಗದೂರು, ಇಕ್ಕೇರಿಕೋಟೆ, ವರದಮೂಲ, ಜೋಗಫಾಲ್ಸ್,ಗೆ 2 ಬದಿ ಸೇರಿ ರೂ.600, ಮಕ್ಕಳಿಗೆ ರೂ.460, ಇರುತ್ತದೆ.

ದಾವಣಗೆರೆ, ಅಂಜನಾದ್ರಿಬೆಟ್ಟ, ಹಂಪಿ, ತುಂಗಾಭದ್ರಾ ಡ್ಯಾಂಗೆ 2 ಬದಿ ಸೇರಿ ರೂ.500, ಮಕ್ಕಳಿಗೆ ರೂ.475 ಇರುತ್ತದೆ. ದಾವಣಗೆರೆಯಿಂದ ಹೊರಟು ಇಡಗುಂಜಿ, ಅಪ್ಸರಕೊಂಡ ವಾಟರ್ ಫಾಲ್ಸ್, ಇಕೋಬೀಚ್, ಬ್ಯಾಕ್ ವಾಟರ್ ಬೋಟಿಂಗ್‍ಗೆ 2 ಬದಿ ಸೇರಿ ರೂ.685, ಮಕ್ಕಳಿಗೆ ರೂ.515 ಇರುತ್ತದೆ.

ಮುಂಗಡ ಬುಕ್ಕಿಂಗ್ ಕೌಂಟರ್‍ಗಳಲ್ಲಿ ಬುಕ್ಕಿಂಗ್ ಮಾಡಲು ksrtc.karnataka.gov.in ಸೌಲಭ್ಯ ಪಡೆಯಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣಕುಮಾರ್.ಎಫ್ ಬಸಾಪುರ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande