ವಿಜಯಪುರ, 16 ಆಗಸ್ಟ್ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದ ಪ್ರತಿ ಗಣೇಶ ಮಹಾಮಂಡಳಿಗಳಿಗೆ ವೈಯುಕ್ತಿಕವಾಗಿ ರೂ.5001 ನೀಡಲಾಗುವುದು. ತಮ್ಮ ತಮ್ಮ ಮಹಾಮಂಡಳಿಗಳ ವೇದಿಕೆಗೆ ಆಗಮಿಸಿ ಹಣ ನೀಡಲಾಗುತ್ತದೆ ಎಂದು ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಘೋಷಣೆ ಮಾಡಿದರು.
ನಗರದ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿರುವ ಶ್ರೀ ಸಿದ್ದೇಶ್ವರ ಸಂಸ್ಥೆಯ ಶ್ರೀ ಶಿವಾನುಭವ ಸಮುದಾಯ ಭವನದಲ್ಲಿ ಶನಿವಾರ ಸ್ವಾಮಿ ವಿವೇಕಾನಂದ ಸೇನೆಯ ಶ್ರೀ ಗಜಾನನ ಮಹಾಮಂಡಳ ವತಿಯಿಂದ ಹಮ್ಮಿಕೊಂಡಿದ್ದ ವಿಜಯಪುರ ನಗರದ ಎಲ್ಲ ಗಜಾನನ ಮಹಾಮಂಡಳಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆ ದೃಷ್ಟಿಯಿಂದ ಮಣ್ಣಿನ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಆದ್ಯತೆ ಕೊಡಬೇಕು. ಪೈಬರ್ ಗಣೇಶ ಮೂರ್ತಿಗಳ ಸ್ಥಾಪನೆಗೆ ಮುಂದಾಗಬೇಕು. ನೀರು ಅಮೂಲ್ಯವಾದದ್ದು, ಅದು ಶುದ್ದವಾಗಿರಬೇಕು, ಪವಿತ್ರವಾಗಿರಬೇಕು. ಹೀಗಾಗಿ ಬಾವಿಗಳನ್ನು ಹಾಳು ಮಾಡುವ ಕೆಲಸ ಮಾಡಬಾರದು. ಕೃತಕ ಹೊಂಡದಲ್ಲಿಯೇ ಗಣೇಶ ವಿಸರ್ಜನೆ ಮಾಡಬೇಕು. ಅತ್ಯಂತ ಶಿಸ್ತಿನಿಂದ ಹಾಗೂ ಭವ್ಯ ಮೆರವಣಿಗೆ ಮೂಲಕ ಮಾದರಿಯಾಗಿ ನಗರದಲ್ಲಿ ಗಣೇಶ ಹಬ್ಬ ಆಚರಿಸೋಣ ಎಂದರು.
ಸನಾತನ ಹಿಂದೂ ಧರ್ಮದ ಪ್ರಕಾರ ಸೂರ್ಯೋದಯದಿಂದಲೇ ನಮ್ಮ ಮೊದಲ ದಿನ ಆರಂಭವಾಗುತ್ತದೆ, ಮಧ್ಯರಾತ್ರಿ ಗಣೇಶನ ವಿಸರ್ಜಿಸಿದರೆ ಒಂದು ದಿನ ಹೆಚ್ಚಾಗುತ್ತದೆ. ಹೀಗಾಗಿ ಸಿದ್ದೇಶ್ವರ ಜಾತ್ರೆಯ ನಂದಿಕೋಲ ಮಾದರಿಯಲ್ಲಿ ಹಗಲು ಹೊತ್ತಿನಲ್ಲೇ ಮೆರವಣಿಗೆ ಆರಂಭಿಸಿ, ರಾತ್ರಿ ವೇಳೆಗೆ ಮುಗಿಸಬೇಕು. ಇದರಿಂದ ಜನರಿಗೆ ಮೆರವಣಿಗೆ ಕಣ್ತುಂಬಿಕೊಳ್ಳಲು ಕೂಡ ಅವಕಾಶ ದೊರೆಯುತ್ತದೆ. ಹೀಗಾಗಿ ಈ ವರ್ಷದಿಂದ ಈ ಪದ್ದತಿ ಆರಂಭಿಸೋಣ ಎಂದು ಸಲಹೆ ನೀಡಿದರು.
ಮಹಾನಗರ ಪಾಲಿಕೆ ಮೇಯರ್ ಎಂ.ಎಸ್.ಕರಡಿ, ಡಿವೈಎಸ್ಪಿ ಬಸವರಾಜ ಯಲಗಾರ, ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಶಿವರುದ್ರ ಬಾಗಲಕೋಟ, ಮಲ್ಲಿಕಾರ್ಜುನ ಗಡಗಿ, ರಾಹುಲ್ ಜಾಧವ, ಉಪ ಆಯುಕ್ತ ಮಹಾವೀರ ಬೋರಣ್ಣವರ ಮಾತನಾಡಿದರು. ಸ್ವಾಮಿ ವಿವೇಕಾನಂದ ಸೇನೆಯ ನೂತನ ಅಧ್ಯಕ್ಷ ಚಂದ್ರು ಚೌದರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನೇಕರು ಸಲಹೆ ಸೂಚನೆಗಳನ್ನು ನೀಡಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ರಾಮನಗೌಡ ಪಾಟೀಲ, ಶ್ರೀ ಸಿದ್ದೇಶ್ವರ ಸಂಸ್ಥೆ ನಿರ್ದೇಶಕ ಗುರುಪಾದಯ್ಯ ಗಚ್ಚಿನಮಠ, ಹಿರಿಯರಾದ ಸಿದ್ರಾಮಪ್ಪ ಉಪ್ಪಿನ, ಮಹಾನಗರ ಪಾಲಿಕೆ ಸದಸ್ಯರಾದ ಕಿರಣ ಪಾಟೀಲ, ಜವಾಹರ ಗೋಸಾವಿ, ರಾಜಶೇಖರ ಕುರಿಯವರ, ಸಿಪಿಐ ಮಲ್ಲಯ್ಯ ಮಠಪತಿ, ಮುಖಂಡರಾದ ಸಾಯಿಬಣ್ಣ ಭೋವಿ, ವಿಕ್ರಮ ಗಾಯಕವಾಡ, ಲಕ್ಷ್ಮಣ ಜಾಧವ ಬಾಬು ಶಿರಶ್ಯಾಡ, ಸಂತೋಷ ಪಾಟೀಲ, ರಾಜು ಜಾಧವ, ಸಚಿನ ಕುಮಸಿ ಮತ್ತಿತರರು ಇದ್ದರು. ಶಂಕರ ಹೂಗಾರ ನಿರೂಪಿಸಿದರು.
ಪದಾಧಿಕಾರಿಗಳ ನೇಮಕ
2026ನೇ ಸಾಲಿನ ಶ್ರೀ ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ನಂದು ಗಡಗಿ, ಉಪಾಧ್ಯಕ್ಷರು ರಾಜಶೇಖರ ಬಜಂತ್ರಿ, ಉಮೇಶ ವೀರಕರ, ಸುಭಾಷ ಚೌಡಾಪುರ, ಬಸವರಾಜ ಗುರಮ್ಮನವರ, ಮನೋಜ ಸುರಪುರ, ವಿನೋದ ಸಾಳುಂಕೆ, ಪ್ರಧಾನ ಕಾರ್ಯದರ್ಶಿಗಳು ಪ್ರಶಾಂತ ಮಾವಿನಗಿಡದ, ಅಮೀತ್ ಗರುಡಕರ, ಕಾರ್ಯದರ್ಶಿಗಳು ನಾಗರಾಜ ಮುಳವಾಡ, ಕಲ್ಲನಗೌಡ ಬಿರಾದಾರ, ಮಲ್ಲನಗೌಡ ಪಾಟೀಲ, ಪರಶುರಾಮ ಜಾಧವ, ರಂಗನಾಥ ಮುಂದಡಾ, ಗೋವಿಂದ ಪವಾರ, ಕುಮಾರಗೌಡ ಅವರು ನೇಮಕವಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande