ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ : ಪ್ರೊ.ಶಿವಾನಂದ ಕೆಳಗಿನಮನಿ
ರಾಯಚೂರು, 15 ಆಗಸ್ಟ್ (ಹಿ.ಸ.) : ಆ್ಯಂಕರ್ : ಮಹನೀಯರ, ಸೈನಿಕರ ಹೋರಾಟ ತ್ಯಾಗ ಬಲಿದಾನ ಪರಿಶ್ರಮದ ಫಲವಾಗಿ ಇಂದು ಸ್ವತಂತ್ರ್ಯ ಭಾರತವು ಅಡಿಪಾಯವನ್ನು ಹಾಕಿ ಪ್ರಗತಿಗೆ ಕಾರಣವಾಗಿದೆ. ಭಾರತ ದೇಶದ ಸ್ವಾತಂತ್ರ್ಯ ದಿನವನ್ನು ಮಹಾಉತ್ಸವದ ದಿನವೆಂದು ಕರೆಯಲಾಗಿದ್ದು ಪ್ರತಿಯೊಬ್ಬ ಭಾರತೀಯರಿಗೂ ಭಾರತೀಯರೆಂಬ ಹ
ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ : ಪ್ರೊ.ಶಿವಾನಂದ ಕೆಳಗಿನಮನಿ


ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ : ಪ್ರೊ.ಶಿವಾನಂದ ಕೆಳಗಿನಮನಿ


ರಾಯಚೂರು, 15 ಆಗಸ್ಟ್ (ಹಿ.ಸ.) :

ಆ್ಯಂಕರ್ : ಮಹನೀಯರ, ಸೈನಿಕರ ಹೋರಾಟ ತ್ಯಾಗ ಬಲಿದಾನ ಪರಿಶ್ರಮದ ಫಲವಾಗಿ ಇಂದು ಸ್ವತಂತ್ರ್ಯ ಭಾರತವು ಅಡಿಪಾಯವನ್ನು ಹಾಕಿ ಪ್ರಗತಿಗೆ ಕಾರಣವಾಗಿದೆ. ಭಾರತ ದೇಶದ ಸ್ವಾತಂತ್ರ್ಯ ದಿನವನ್ನು ಮಹಾಉತ್ಸವದ ದಿನವೆಂದು ಕರೆಯಲಾಗಿದ್ದು ಪ್ರತಿಯೊಬ್ಬ ಭಾರತೀಯರಿಗೂ ಭಾರತೀಯರೆಂಬ ಹೆಗ್ಗುರುತನ್ನು ನೆನಪಿಸುತ್ತದೆ ಈ ದಿನವನ್ನು ದೇಶದ ಜನತೆಯ ಸ್ಮರಣೆಯಲ್ಲಿ ಆಳವಾಗಿ ಕೆತ್ತಲ್ಪಟ್ಟ ದಿನವಾಗಿದೆ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಹೇಳಿದ್ದಾರೆ.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದಲ್ಲಿ ಇಂದು 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕುಲಪತಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ಅನೇಕ ಸಮುದಾಯಗಳು ಸ್ವತಂತ್ರ್ಯವಾಗಿ ಬುದುಕುವುದಕ್ಕೆ ಮತ್ತು ಕಾನೂನು ಬದ್ಧವಾಗಿ ಜೀವಿಸಲು ಅನುವುಮಾಡಿಕೊಟ್ಟಿದ್ದು ಇದೇ ದಿನ ಎಂದು ಹೇಳಲು ಹೆಮ್ಮೆಯಿದೆ. ಕರ್ನಾಟಕವು ಕೂಡ ಸ್ವಾತಂತ್ರ್ಯ ಹೋರಾಟಕ್ಕೆ ಅವೀಸ್ಮರಣೀಯ ಕೊಡುಗೆ ನೀಡಿದ್ದು, ಹರ್ಡೆಕರ ಮಂಜಪ್ಪ, ಮೈಲಾರ ಮಹದೇವಪ್ಪ, ಕಡಪಾ ರಾಘವೇಂದ್ರರಾಯರು ಹೀಗೆ ಅನೇಕ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ಏಕತೆ ಮತ್ತು ತ್ಯಾಗಗಳಿಗೆ ಈ ಸಂದರ್ಭವು ಒಂದು ನಮನವಾಗಿದೆ. ಸಮಕಾಲೀನ ಆಚರಣೆಗಳು ಐತಿಹಾಸಿಕ ವಿಜಯವನ್ನು ನೆನಪಿಸಿಕೊಳ್ಳುವುದು ಮತ್ತು ಪ್ರತಿ ಪೀಳಿಗೆಯನ್ನು ಭಾರತದ ಮತ್ತಷ್ಟು ಅಭಿವೃದ್ಧಿಯ ಕಡೆಗೆ ಪ್ರೇರೇಪಿಸುವುದು ಸಂವಿಧಾನವನ್ನು ಎತ್ತಿಹಿಡಿಯುವುದು ಎಲ್ಲರಿಗೂ ನ್ಯಾಯ, ಸ್ವಾತಂತ್ರ್ಯ ಹಾಗೂ ಸಂವಿಧಾನದ ಮೌಲ್ಯಗಳನ್ನು ಗೌರವಿಸುವುದಾಗಿದೆ ಎಂದು ನುಡಿದರು.

ಕುಲಸಚಿವರಾದ ಡಾ.ಚನ್ನಪ್ಪ.ಎ (ಕೆ.ಎ.ಎಸ್.) ಅವರು ಮಾತನಾಡುತ್ತ, ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿರುವಂತದಲ್ಲ ಅನೇಕ ದೇಶಭಕ್ತರಾದ ಮಹನೀಯರು, ಹಿರಿಯರು, ಮಹಿಳೆಯರು, ಮಕ್ಕಳ ಪ್ರಾಣ ತ್ಯಾಗದ ನಂತರ ನಾವೆಲ್ಲರೂ ಸ್ವಾತಂತ್ರ್ಯ ಪಡೆದಿದ್ದು, ನಮ್ಮ ದೇಶದಲ್ಲಿ ಅನೇಕ ಭಾಷೆಗಳು, ಧರ್ಮಗಳು, ವಿಭಿನ್ನ ವಿಚಾರಗಳು, ಸಂಸ್ಕøತಿಗಳಿವೆ ಈ ಎಲ್ಲವುಗಳು ಒಂದುಗೂಡಿ ಬಲಿಷ್ಟವಾದ ಪ್ರಜಾಪ್ರಭುತ್ವ ರಾಷ್ಟ್ರವನ್ನು ಕಟ್ಟಿಕೊಂಡಿದ್ದೇವೆ. ಸ್ವಚ್ಛ, ಸ್ವಸ್ತ, ಸದೃಢ ಭಾರತ, ಉತ್ತಮ ಭವಿಷ್ಯಕ್ಕಾಗಿ ಭಾರತ, ಭಾರತಕ್ಕಾಗಿ ನಾವು ಎಂದು, ಮುಂಬರುವ ದಿನಗಳಲ್ಲಿ ಭಾರತವನ್ನು ವಿಶ್ವಗುರುವನ್ನಾಗಿ ಬೆಳಗಿಸುವಲ್ಲಿ ನಾವೆಲ್ಲರೂ ಪ್ರಮುಖ ಪಾತ್ರ ವಹಿಸಬೇಕು. ಸೈನಿಕರು ಮಾತ್ರ ದೇಶಕಾಯುವುದಲ್ಲ ನಾವೆಲ್ಲರೂ ಅದರ ಭಾಗವಾಗಿದ್ದೇವೆ ಎಂದು ಅವರು ತಿಳಿಸಿದರು.

ಮೌಲ್ಯಮಾಪನ ಕುಲಸಚಿವರು ಡಾ.ಜ್ಯೋತಿ ದಮ್ಮ ಪ್ರಕಾಶ ಅವರು ಸರ್ವರಿಗೂ 79ನೇ ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ಕೋರಿದರು. ಹಣಕಾಸು ಅಧಿಕಾರಿ ಹಾಗೂ ಉಪಕುಲಸಚಿವರಾದ ಡಾ.ಕೆ.ವೆಂಕಟೇಶ್ ಅವರು ಮಾತನಾಡಿ, ಭಾರತದ ಸ್ವಾತಂತ್ರ್ಯ ಚಳುವಳಿಯು ವಿಶಿಷ್ಟ ಮತ್ತು ವಿನೂತನವಾದದ್ದು, ಜಾತಿಯತೆ, ಮೌಢ್ಯ, ವಿಧವಾ ವಿವಾಹ ಖಂಡಿಸಿ ಇವೆಲ್ಲಾ ಸ್ವಾತಂತ್ರ್ಯ ಚಳುವಳಿಯ ಜೊತೆಗೆ ದೇಶದ ಒಳಗಡೆ ನಡೆದಿರುವಂತಹ ಹೋರಾಟಗಳು. ಸ್ವಾತಂತ್ರ್ಯ ಚಳುವಳಿಯ ಚರಿತ್ರೆಯ ಪುಟಗಳಲ್ಲಿ ಅನೇಕ ಮಹನೀಯರ ಹೋರಾಟಗಳು ದಾಖಲಾಗಬೇಕಿದೆ. ಸ್ವಾತಂತ್ರ್ಯವನ್ನು ನಾವೆಲ್ಲರೂ ಅರ್ಥಪೂರ್ಣವಾಗಿ ಜವಾಬ್ದಾರಿಯಿಂದ ಬಳಸಿಕೊಳ್ಳಬೇಕು. ಮಹನೀಯರು ಕೊಟ್ಟಂತಹ ಸ್ವಾತಂತ್ರ್ಯದ ಫಲವನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶದ ಎಲ್ಲಾ ಪ್ರದೇಶದ ಸಮುದಾಯಗಳಿಗೆ ಸಂವಿಧಾನದ ಮೂಲಕ ಸಮಾನವಾಗಿ ಹಂಚಿದವರು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಹರ್ ಘರ್ ತಿರಂಗ ಅಭಿಯಾನದ ಭಾಗವಾಗಿ ವಿಶ್ವವಿದ್ಯಾನಿಲಯದ ಮುಖ್ಯದ್ವಾರದಿಂದ ಕಾರ್ಯಸೌಧದ ವರೆಗೆ ತಿರಂಗ ಧ್ವಜದ ಮೆರವಣಿಗೆ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ನಿಕಾಯಗಳ ಡೀನರುರಾದ ಪ್ರೊ.ಪಾರ್ವತಿ.ಸಿ.ಎಸ್., ಪ್ರೊ.ಪಿ.ಭಾಸ್ಕರ್, ಡಾ.ಲತಾ.ಎಂ.ಎಸ್ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಜಿ.ಎಸ್.ಬಿರಾದಾರ, ದೈಹಿಕ ಶಿಕ್ಷಣ ವಿಭಾಗದ ಸಂಯೋಜಕರಾದ ಮಲ್ಲಿಕಾರ್ಜುನ.ಎನ್ ಸೇರಿದಂತೆ ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಎನ್.ಸಿ.ಸಿ ಕೆಡೆಟ್ಸ್, ಎನ್‍ಎಸ್‍ಎಸ್ ಘಟಕಾಧಿಕಾರಿಗಳು ಮತ್ತು ಸ್ವಯಂ ಸೇವಕರು ಉಪಸ್ಥಿತರಿದ್ದರು. ಇಂಗ್ಲಿಷ್ ವಿಭಾಗದ ಉಪನ್ಯಾಸಕ ಅನಿಲ್ ಅಪ್ರಾಳ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande