ವಿಜಯಪುರ, 15 ಆಗಸ್ಟ್ (ಹಿ.ಸ.) :
ಆ್ಯಂಕರ್ : ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ಇದೊಂದು ಅಂತಾರಾಷ್ಟ್ರೀಯ ಹುನ್ನಾರ ಆಗಿದೆ. ಪಾಕಿಸ್ತಾನದ ISI, ಎಡಪಂಥೀಯರು, ನಕ್ಸಲರ ಕೈವಾಡ ಇದೆ. ಅನಾಮಿಕ ಹೇಳಿದಂತೆ ಪೊಲೀಸರು ಕೇಳಿದ್ದು ಸಾಕು. ಈ ಪ್ರಕರಣ ಕೈಬಿಡಿ ಎಂದು ಸರ್ಕಾರಕ್ಕೆ ಶಾಸಕ ಯತ್ನಾಳ್ ಆಗ್ರಹಿಸಿದರು.
ಅಲ್ಲದೇ, ಅಧಿವೇಶನದಲ್ಲು ಈ ಬಗ್ಗೆ ಮಾತನಾಡಿದ್ದೇನೆ. ಗೃಹ ಸಚಿವರಿಗೂ ಹೇಳಿದ್ದೇನೆ. ಧರ್ಮಸ್ಥಳದ ಹೆಸರು ಕೆಡಿಸಲು ವ್ಯವಸ್ಥಿತ ಪಿತೂರಿ ಇದೆ. ಅನಾಮಿಕ, ಯೂಟ್ಯುಬರ್ ಸಮೀರ್ ಎಂ ಡಿ, ತಿಮ್ಮರೊಡಿ ಬ್ರೇನ್ ಮ್ಯಾಪಿಂಗ್ ಮಾಡಿಸಬೇಕು. ಅದಕ್ಕಾಗಿ ಈ ಪ್ರಕರಣ NIA ಗೆ ವಹಿಸಬೇಕು. ನೆಲದಲ್ಲಿ ಗುಂಡಿ ಅಗಿಯೋದು ಬಂದ್ ಮಾಡಬೇಕು. ಪೊಲೀಸರಿಗೆ ರೆಸ್ಟ್ ಸಿಗಲಿ. ಸರ್ಕಾರ SIT ರಚನೆ ಮಾಡಿದೆ. ಪೊಲೀಸರು ತನಿಖೆ ಮಾಡ್ತಿದ್ದಾರೆ. ಪೊಲೀಸರ ಕಾರ್ಯವನ್ನು ಯತ್ನಾಳ ಶ್ಲಾಘಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande