ಕೊಪ್ಪಳ, 15 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ ಎಂದು ಕಲರ್ಸ್ ಕನ್ನಡ ವಾಹಿನಿಯ ಮಹರ್ಷಿ ದರ್ಶನದ ಪೂಜ್ಯ ಶ್ರೀಶ್ರೀಶ್ರೀ ವಿದ್ಯಾಶಂಕರ ಗುರೂಜಿ ಅವರು ತಿಳಿಸಿದ್ದಾರೆ.
ಗವಿಮಠದ ಆವರಣದಲ್ಲಿರುವ ಶ್ರೀಶಿವಶಾಂತವೀರ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ನಡೆದ 79ನೇ ಸ್ವಾತಂತ್ರ್ಯೋತ್ಸವದ ಮುಖ್ಯ ಅತಿಥಿಗಳಾಗಿ, ಧ್ವಜಾರೋಹಣ ನೆರವೇರಿಸಿ, ಶಿಕ್ಷಕರು ತನ್ನ ದೇಹವನ್ನು ಸುಟ್ಟುಕೊಂಡು ಬೆಳಕನ್ನು ನೀಡುವ ಮೇಣದ ಬತ್ತಿಯ ರೀತಿಯಲ್ಲಿ ವಿದ್ಯಾರ್ಥಿಗಳಲ್ಲಿಯ ಅಂಧಕಾರದ ಅಜ್ಞಾನವನ್ನು ಹೊಡೆದೋಡಿಸಿ, ಜ್ಞಾನದ ಬೆಳಕನ್ನು ನೀಡುತ್ತಾರೆ. ಮಕ್ಕಳಲ್ಲಿ ಶಿಸ್ತು, ಸಮಯ ಪ್ರಜ್ಞೆ, ಸಂಯಮ, ಉತ್ತಮ ನಡೆ, ನುಡಿಗಳನ್ನು ಬೆಳೆಸುವುದರ ಮೂಲಕ, ವಿದ್ಯಾರ್ಥಿಗಳು ಭವಿಷ್ಯತ್ತಿನಲ್ಲಿ ಉತ್ತಮ ಪ್ರಜೆಯಾಗಲು ನೆರವಾಗುತ್ತಾರೆ ಎಂದರು.
ಶ್ರೀಮಠದ ಗೌರವ ಕಾರ್ಯದರ್ಶಿಗಳಾದ ಡಾ. ಆರ್. ಮರೇಗೌಡ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮಹಾನ್ ನಾಯಕರ ತ್ಯಾಗವನ್ನು ಸ್ಮರಿಸಿದರು.
ವಿದ್ಯರ್ಥಿಗಳಾದ ಸಮನ್ವಿ ಹಾಗೂ ಪ್ರಣತಿ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ವಿದ್ಯಾರ್ಥಿನಿಯ ಶ್ರೇಯಾ ಸ್ವಾಗತಿಸಿದರು. ವಿದ್ಯಾರ್ಥಿನಿ ನಯನಾ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್