ಟಿಬಿ ಡ್ಯಾಂ : ಏಳು ಕ್ರಸ್ಟ್‍ಗೇಟ್‍ಗಳು ಅಪಾಯದಲ್ಲಿ : ಸಚಿವ ತಂಗಡಗಿ : ರೈತರಲ್ಲಿ ಹೆಚ್ಚಿದ ಆತಂಕ
ಕೊಪ್ಪಳ, 15 ಆಗಸ್ಟ್ (ಹಿ.ಸ.) ಆ್ಯಂಕರ್ : ತುಂಗಭದ್ರಾ ಜಲಾಶಯದ ಒಟ್ಟು ಏಳು ಕ್ರಸ್ಟ್‍ಗೇಟುಗಳು ಬೆಂಡ್ ಆಗಿವೆ ಎಂದು ಜಲಾಶಯದ ಸುರಕ್ಷತಾ ತಂಡ (ಡ್ಯಾಂ ಸೇಫ್ಟಿ ರೀವಿವ್ ಕಮಿಟಿ) ವರದಿ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ತಿಳಿಸಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರ ಜ
ಟಿಬಿ ಡ್ಯಾಂ : ಏಳು ಕ್ರಸ್ಟ್‍ಗೇಟ್‍ಗಳು ಅಪಾಯದಲ್ಲಿ : ಸಚಿವ ತಂಗಡಗಿ : ರೈತರಲ್ಲಿ ಹೆಚ್ಚಿದ ಆತಂಕ


ಕೊಪ್ಪಳ, 15 ಆಗಸ್ಟ್ (ಹಿ.ಸ.)

ಆ್ಯಂಕರ್ : ತುಂಗಭದ್ರಾ ಜಲಾಶಯದ ಒಟ್ಟು ಏಳು ಕ್ರಸ್ಟ್‍ಗೇಟುಗಳು ಬೆಂಡ್ ಆಗಿವೆ ಎಂದು ಜಲಾಶಯದ ಸುರಕ್ಷತಾ ತಂಡ (ಡ್ಯಾಂ ಸೇಫ್ಟಿ ರೀವಿವ್ ಕಮಿಟಿ) ವರದಿ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ತಿಳಿಸಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ ಕ್ರಸ್ಟ್‍ಗೇಟ್ ಸಂಖ್ಯೆ : 4, 11, 18, 20, 24, 27 ಹಾಗೂ 28 ಸೇರಿ ಒಟ್ಟು 7 ಕ್ರಸ್ಟ್‍ಗೇಟುಗಳು ಬೆಂಡ್ ಆಗಿವೆ. ಏಳು ಕ್ರಸ್ಟ್‍ಗೇಟುಗಳಲ್ಲಿ 6 ಕ್ರಸ್ಟ್‍ಗೇಟುಗಳನ್ನು ಎತ್ತಲು ಹಾಗೂ ಇಳಿಸಲು ಆಗುತ್ತಿಲ್ಲ. ಕ್ರಸ್ಟ್‍ಗೇಟ್ ನಂಬರ್ 4 ಅನ್ನು

ಕೇವಲ ಎರಡು ಅಡಿ ಮೇಲೆ - ಕೆಳಗಡೆ ಇಳಿಸಬಹುದಾಗಿದೆ. ಕ್ರಸ್ಟ್‍ಗೇಟ್ ನಂಬರ್ 4 ಸೇರಿದಂತೆ ಒಟ್ಟು ಏಳು ಗೇಟ್‍ಗಳು ಡ್ಯಾಮೇಜ್ ಆಗಿವೆ ಎಂದರು.

19ನೇ ಕ್ರಸ್ಟ್‍ಗೇಟ್ ಕೊಚ್ಚಿ ಹೋದಾಗಲೇ ಅಪಾರ ಪ್ರಮಾಣದ ನೀರು ಪೆÇೀಲಾಗಿತ್ತು. ಇದೀಗ ಏಳು ಗೇಟ್‍ಗಳು ಬೆಂಡ್ ಆಗಿವೆ. ಯಾವಾಗ ಏನಾಗುತ್ತದೆ ಎಂಬ ಎಲ್ಲರಲ್ಲೂ ಇದೆ. ಮಲೆನಾಡಿನಲ್ಲಿ ಉತ್ತಮ ಮಳೆಯಾಗಿರುವ ಕಾರಣ ಹೆಚ್ಚಿನ ಪ್ರಮಾಣದ ನೀರು ಜಲಾಶಯಕ್ಕೆ ಹರಿದು ಬಂದಿದೆ. ನೀರಿನ ಒತ್ತಡದಿಂದಾಗಿ 7 ಕ್ರಸ್ಟ್‍ಗೇಟುಗಳಿಗೆ

ಹಾನಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದರು.

ಸಚಿವ ಶಿವರಾಜ್ ತಂಗಡಗಿ ಅವರು ಹೇಳಿರುವ ಈ ಹೇಳಿಕೆಯು ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ಗದಗ ಜಿಲ್ಲೆ ಸೇರಿ ಆಂಧ್ರಪ್ರದೇಶ - ತೆಲಂಗಾಣ ರಾಜ್ಯದ ರೈತರನ್ನ ಚಿಂತೆಗೀಡು ಮಾಡಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande