ರಾಯಚೂರು ಮಹಾನಗರ ಪಾಲಿಕೆ : ಅಭ್ಯರ್ಥಿಗಳ ನೇಮಕಾತಿ
ರಾಯಚೂರು, 15 ಆಗಸ್ಟ್ (ಹಿ.ಸ.) : ಆ್ಯಂಕರ್ : ರಾಯಚೂರು ನಗರಸಭೆಯು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೇಗೇರಿದ್ದು, ಮಹಾನಗರ ಪಾಲಿಕೆಗೆ ಸರ್ಕಾರದಿಂದ ಹೊಸದಾಗಿ ಹುದ್ದೆಗಳನ್ನು ಸೃಜಿಸಲಾಗಿರುತ್ತದೆ. ಸೃಜಿಸಲಾದ ಹುದ್ದೆಗಳಲ್ಲಿ ಆಡಳಿತತ್ಮಾಕ ಹಿತದೃಷ್ಟಿಯಿಂದ ರಾಜ್ಯದಲ್ಲಿ ಪ್ರಥಮ ಭಾರಿಗೆ ಮಹಾನಗರ ಪಾಲಿಕೆಯ
ರಾಯಚೂರು ಮಹಾನಗರ ಪಾಲಿಕೆ : ಅಭ್ಯರ್ಥಿಗಳ ನೇಮಕಾತಿ


ರಾಯಚೂರು, 15 ಆಗಸ್ಟ್ (ಹಿ.ಸ.) :

ಆ್ಯಂಕರ್ : ರಾಯಚೂರು ನಗರಸಭೆಯು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೇಗೇರಿದ್ದು, ಮಹಾನಗರ ಪಾಲಿಕೆಗೆ ಸರ್ಕಾರದಿಂದ ಹೊಸದಾಗಿ ಹುದ್ದೆಗಳನ್ನು ಸೃಜಿಸಲಾಗಿರುತ್ತದೆ.

ಸೃಜಿಸಲಾದ ಹುದ್ದೆಗಳಲ್ಲಿ ಆಡಳಿತತ್ಮಾಕ ಹಿತದೃಷ್ಟಿಯಿಂದ ರಾಜ್ಯದಲ್ಲಿ ಪ್ರಥಮ ಭಾರಿಗೆ ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಸಂಸ್ಥೆಯ ಮೂಲಕ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ದಿನಾಂಕ 28.04.2025 ರಂದು ರಾಯಚೂರು ಮಹಾನಗರ ಪಾಲಿಕೆಯ ವೆಬ್‌ಸೈಟ್‌ನಲ್ಲಿ ಪ್ರಕಟಣೆಯನ್ನು ಹಾಗೂ ಸಾರ್ವಜನಿಕ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿತ್ತು.

ಅರ್ಜಿ ಆಹ್ವಾನಿಸಿದ ಹುದ್ದೆಗಳಿಗೆ ಸಲ್ಲಿಸಲಾಗಿರುವ ಅರ್ಜಿಗಳನ್ನು ಸಾರ್ವಜನಿಕ ಶಿಕ್ಷಣ ಸಿಬ್ಬಂದಿಯಿ0ದ ಎಲ್ಲಾ ದಾಖಲಾತಿಗಳನ್ನು ಪಾರದರ್ಶಕತೆಯಿಂದ ಪರಿಶೀಲಿಸಲಾಗಿ ಅರ್ಹ ಅಭ್ಯರ್ಥಿಗಳ ಆಯ್ಕೆಪಟ್ಟಿಯನ್ನು ಮಹಾನಗರ ಪಾಲಿಕೆಯ ವೆಬ್‌ಸೈಟ್ http://www.raichurcity.mrc.gov.in/en/recuritment ರಲ್ಲಿ ಪ್ರಕಟಿಸಲಾಗಿರುತ್ತದೆ.

ಈ ಆಯ್ಕೆ ಪಟ್ಟಿಯಲಿರುವ ಅಭ್ಯರ್ಥಿಗಳಿಗೆ ಆಗಸ್ಟ್ 14ರಂದು ಎಲ್.ವಿ.ಡಿ ಕಾಲೇಜ್ ರಾಯಚೂರು ಇಲ್ಲಿ ಲಿಖಿತ ಪರೀಕ್ಷೆಯನ್ನು ಹಾಗೂ ಪ್ರಾಯೋಗಿಕ ಪರೀಕ್ಷೆಯನ್ನು ಅರ್ಹ ಅಭ್ಯರ್ಥಿಗಳಿಂದ ನೆಡೆಸಲಾಗುವುದೆಂದು ಸಾರ್ವಜನಿಕರ ಪ್ರಕಟಣೆ ಮೂಲಕ ಹಾಗೂ ಮಹಾನಗರ ಪಾಲಿಕೆ ಅಧಿಕೃತ ವೆಬ್‌ಸೈಟ್ (Websiಣe) ನಲ್ಲಿ ದಿನಾಂಕ 08.08.2025 ಮತ್ತು 09.08.2025 ರಂದು ಪ್ರಕಟಣೆಯನ್ನು ಹೊರಡಿಸಲಾಗಿರುತ್ತದೆ.

ಅದರಂತೆ ಮಹಾನಗರ ಪಾಲಿಕೆಯಿಂದ ದಿನಾಂಕ 14.08.2025 ರಂದು ಎಲ್.ವಿ.ಡಿ ಕಾಲೇಜ್ ರಾಯಚೂರುನಲ್ಲಿ ಲಿಖಿತ ಪರೀಕ್ಷೆಯನ್ನು ಹಾಗೂ ಪ್ರಾಯೋಗಿಕ ಪರೀಕ್ಷೆಯನ್ನು ಪಾರದರ್ಶಕತೆ ಹಾಗೂ ಶಾಂತಿಯುತದಿ0ದ ನಡೆಸಲಾಗಿರುತ್ತದೆ.

ಈ ಪರೀಕ್ಷೆಯಲ್ಲಿ ಒಟ್ಟು 443 ಅಭ್ಯರ್ಥಿಗಳಲ್ಲಿ 345 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿರುತ್ತಾರೆ ಹಾಗೂ 98 ಅಭ್ಯರ್ಥಿಗಳು ಗೈರು ಹಾಜರಾಗಿರುತ್ತಾರೆ.

ತದನಂತರ ಲಿಖಿತ ಮತ್ತು ಪ್ರಾಯೋಗಿಕ ಪರೀಕ್ಷೆಯಲ್ಲಿ ಮೇರಿಟ್ ಆಧಾರದ ಮೇಲೆ ಹಾಗೂ ರೋಷ್ಟರ್ ಪದ್ಧತಿಯ ಅನ್ವಯ ಮಹಾನಗರ ಪಾಲಿಕೆಯಲ್ಲಿ ಕಮಿಟಿಯನ್ನು ರಚಿಸಿ, ಪಾರದರ್ಶಕತೆಯಿಂದ ಸಂದರ್ಶನ ನಡೆಸಿ ಅರ್ಹ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande