ಮೋಕಾ ಪಿಎಸ್ಸೈ ಪತ್ನಿ ಚೈತ್ರಾ ಆತ್ಮಹತ್ಯೆ
ಬಳ್ಳಾರಿ, 15 ಆಗಸ್ಟ್ (ಹಿ.ಸ.) : ಆ್ಯಂಕರ್ : ಸ್ವಾತಂತ್ರ್ಯೋತ್ಸವ ಧ್ವಜಾರೋಹಣದ ಕರ್ತವ್ಯದ ಮೇಲಿದ್ದ ಮೋಕಾ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಅವರ ಪತ್ನಿ ಸರ್ಕಾರಿ ವಸತಿ ಗೃಹದ ಮನೆಯ ಬಾಗಿಲಿಗೆ ಚಿಲಕ ಹಾಕಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೋಕಾ ಗ್ರಾಮದಲ್
ಮೋಕಾ ಪಿಎಸ್ಸೈ ಪತ್ನಿ ಚೈತ್ರಾ ಆತ್ಮಹತ್ಯೆ


ಬಳ್ಳಾರಿ, 15 ಆಗಸ್ಟ್ (ಹಿ.ಸ.) :

ಆ್ಯಂಕರ್ : ಸ್ವಾತಂತ್ರ್ಯೋತ್ಸವ ಧ್ವಜಾರೋಹಣದ ಕರ್ತವ್ಯದ ಮೇಲಿದ್ದ ಮೋಕಾ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಅವರ ಪತ್ನಿ ಸರ್ಕಾರಿ ವಸತಿ ಗೃಹದ ಮನೆಯ ಬಾಗಿಲಿಗೆ ಚಿಲಕ ಹಾಕಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೋಕಾ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಮೃತಳು ಮೋಕಾ ಪೊಲೀಸ್ ಠಾಣೆಯ ಪಿಎಸ್‍ಐ ಕಾಳಿಂಗ ಅವರ ಪತ್ನಿ ಚೈತ್ರ (34) ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಬೆಳಗ್ಗೆ 8.30ರ ಸುಮಾರಿಗೆ ಪೊಲೀಸ್ ಕ್ವಾಟ್ರಸ್‍ನಲ್ಲಿರುವ ಅವರ ನಿವಾಸದಲ್ಲಿ ಫ್ಯಾನಿಗೆ ನೇಣು ಬಿಗಿದು ಕೊಂಡು ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಮೃತ ಚೈತ್ರಳ ಮರಣೋತ್ತರ ಶವ ಪರೀಕ್ಷೆ ಬಿಎಂಸಿಆರ್‍ಸಿ ಶವಾಗಾರದಲ್ಲಿ ಶುಕ್ರವಾರ ನಡೆಯಿತು.

ಎಸ್ಪಿ.ಡಾ. ವಿ.ಜೆ. ಶೋಭಾರಾಣಿ, ಎಎಸ್ಪಿ ಕೆ.ಪಿ. ರವಿಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ, ಸಹದ್ಯೋಗಿಯ ಪತ್ನಿ ಚೈತ್ರ ಅವರಿಗೆ ಆತ್ಮಸ್ಥೈರ್ಯ ನೀಡಿ, ಮರಣೋತ್ತರ ಪರೀಕ್ಷೆಯ ನಂತರ ಹೊಸಪೇಟೆ ತಾಲೂಕಿನ ಮಲಪನಗುಡಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲು ಶವವನ್ನು ಕಳುಹಿಸಿದರು.

ಮೃತರಿಗೆ ಇಬ್ಬರು ಮಕ್ಕಳಿದ್ದು, ಚೈತ್ರ ಅವರ ತಾಯಿ ಮತ್ತು ಸಹೋದರ ಇತ್ತೀಚೆಗೆ ನಿಧನರಾಗಿದ್ದರು. ಸಹಜವಾಗಿ ದೈನಂದಿನ ಚಟುವಟಿಕೆಗಳಲ್ಲಿ ಚುರುಕಾಗಿದ್ದ ಚೈತ್ರ ಅವರು, ಕಳೆದ ಶುಕ್ರವಾರ ಮನೆಯಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿ, ದಂಪತಿ ತಿರುಪತಿಗೆ ಹೋಗಿ, ಗುರುವಾರ ಸಂಜೆ ಹಿಂತಿರುಗಿದ್ದರು. ಕುಟುಂಬದಲ್ಲಿ ಅನ್ಯೋನ್ಯತೆ ಇತ್ತು ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.

ಕಾಳಿಂಗ ಅವರು, ಮೋಕಾ ಪೊಲೀಸ್ ಠಾಣೆಯಲ್ಲಿ ಧ್ವಜಾರೋಹಣವನ್ನು ಶುಕ್ರವಾರ ಬೆಳಗ್ಗೆ ನೆರವೇರಿಸಿ, ಉಪಹಾರ ತರಲು ಮಗನ ಜೊತೆಯಲ್ಲಿ ಮನೆಗೆ ಹೋಗಿದ್ದಾಗ, ಈ ಘಟನೆ ಬೆಳಕಿಗೆ ಬಂದಿದೆ.

ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande