ವಿಜಯಪುರ, 15 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಧರ್ಮಸ್ಥಳಕ್ಕೆ
ಹೋದರೆ ಚಲೋ ಆಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಬಿ. ವೈ. ವಿಜಯೇಂದ್ರ ಧರ್ಮಸ್ಥಳ ಚಲೋ ರ‌್ಯಾಲಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.
ವಿಜಯೇಂದ್ರ ಕೇರಳದಲ್ಲಿ ಶತ್ರು ನಾಶ ಯಾಗ ಮಾಡ್ತಾ ಇದ್ದರು. ಇದೀಗ ಧರ್ಮಸ್ಥಳ ಮಂಜುನಾಥನ ಸನ್ನಿದಿಗೆ ಹೋಗಿ ನ್ಯಾಯ ಕೊಡುವಂತೆ ಬೇಡಿಕೊಳ್ಳಲಿ. ಎಲ್ಲೆಲ್ಲೂ ಹೋಗುತ್ತಾರೆ ಅವರು. ಶತ್ರು ನಾಶ ಯಾಗ ಹೆಚ್ಚಾಗಿ ಬಸನಗೌಡ ಯತ್ನಾಳ ಸರ್ವನಾಶಂ, ಜಗದೀಶ್ ಶೆಟ್ಟರ ಸರ್ವನಾಶಂ, ಅನಂತಕುಮಾರ ನಾಶಂ, ಸಿ. ಟಿ. ರವಿ ಗುಳಂ ಅನ್ನುತ್ತಾರೆ ಎಂದು ವಿಜಯೇಂದ್ರ ಬಗ್ಗೆ ಯತ್ನಾಳ ಲೇವಡಿ ಮಾಡಿದರು.
ಮುಸ್ಲಿಂ ಯುವತಿ ಮದುವೆಯಾದರೆ 5 ಲಕ್ಷ ರೂ ಯತ್ನಾಳ ಘೋಷಣೆ ಬಗ್ಗೆ ವಿರೋಧ ಮಾಡುವವರು ಮಾಡಲಿ. ಅಂತರ್ ಜಾತಿ ವಿವಾಹ ಮಾಡಿಕೊಳ್ಳಲಿ ಎಂದು ಸರ್ಕಾರನೇ ಹೇಳುತ್ತದೆ. ಆದರೆ, ಲವ್ ಜಿಹಾದ್ ಮಾಡ್ತಾರೆ. ಇನ್ನು ಬ್ರಾಹ್ಮಣ ಯುವತಿಯಾದರೆ 25 ಲಕ್ಷ, ರಜಪೂತ, ಮರಾಠಿ ಯುವತಿ 15 ಲಕ್ಷ ರೂ, ಲಿಂಗಾಯತ, ಒಕ್ಕಲಿಗರು 15 ಲಕ್ಷ, ದಲಿತ ಹೆಣ್ಣುಮಕ್ಕಳನ್ನ ಆದರೆ 1೦ ಲಕ್ಷ ಎಂದು ಈ ರೀತಿ ರೇಟ್ ಫಿಕ್ಸ್ ಮಾಡಿದ್ದಾರೆ. ಮೊದಲು ಅದನ್ನು ತನಿಖೆ ಮಾಡಲಿ ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಅಲ್ಲದೇ, ನೀವು ನಮ್ಮ ಧರ್ಮದವರನ್ನು ಲವ್ ಜಿಹಾದ್ ಮಾಡುವುದನ್ನು ಬಿಡಿ.
ಸರ್ಕಾರನೇ ಹೇಳುತ್ತೆ ಎಸ್ಸಿ , ಎಸ್ಟಿ ಜನಾಂಗದವರನ್ನು ಮದುವೆ ಆದರೆ ಸರ್ಕಾರವೆ ಹಣ ನೀಡುತ್ತದೆ. ಯಾಕೆಂದರೆ ಎಲ್ಲದರಲ್ಲೂ ಸಮಾನತೆ ಬರಲಿ ಎಂದು ಹಣ ನೀಡುತ್ತದೆ. ಅದೇ ರೀತಿ ಸಮಾನತೆಗಾಗಿ ನಾನು ಹೇಳಿದ್ದೇನೆ. ನಾನೇನು ನನ್ನ ಹೇಳಿಕೆ ಹಿಂಪಡೆಯುವ ಪ್ರಶ್ನೆ ಇಲ್ಲ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande