ವಿಜಯಪುರ, 15 ಆಗಸ್ಟ್ (ಹಿ.ಸ.) ;
ಆ್ಯಂಕರ್ : ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ ಎಂದು ಸಚಿವ ಎಂ ಬಿ ಪಾಟೀಲ ಕಿಡಿಕಾರಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಮುಸ್ಲಿಂ ಹುಡುಗಿಯನ್ನು ಹಿಂದೂ ಹುಡುಗರು ಲವ್ ಮಾಡಿ ಮದುವೆಯಾದರೆ 5 ಲಕ್ಷ ನೀಡುವುದಾಗಿ ಯತ್ನಾಳ ಹೇಳಿಕೆ ಸಚಿವ ಪಾಟೀಲ ಪ್ರತಿಕ್ರಿಯಿಸಿದ್ದರು. ಇದು ಯತ್ನಾಳರ ಹೊಲಸು ಮಾನಸಿಕ ಸ್ಥಿತಿ ತೋರಿಸುತ್ತದೆ ಎಂದು ವಾಗ್ದಾಳಿ ಮಾಡಿದರು.
ಅಲ್ಲದೇ, ಬಸವಣ್ಣನವರ ಹೆಸರು ಇಟ್ಟುಕೊಂಡಿರುವ ಶಾಸಕ ಯತ್ನಾಳ ವಚನಗಳನ್ನು ಕೇಳಬೇಕಾದ ವ್ಯಕ್ತಿ ಈ ತರಹ ಹೇಳಿಕೆ ನೀಡುತ್ತಿದ್ದಾರೆ. ಇಸ್ಲಾಂ ಹಾಗೂ ಮುಸ್ಲಿಂ ಸಮಾಜ ಟಾರ್ಗೆಟ್ ಮಾಡಿದ್ದಾರೆ. ಪದೇ ಪದೇ ಒಂದು ಧರ್ಮದ ಬಗ್ಗೆ ಟೀಕೆ ಮಾಡುವುದು ಸಲ್ಲದು. ಇದನ್ನು ನಾನು ಖಂಡಿಸುತ್ತೇನೆ. ಅದಕ್ಕಾಗಿ ಇದರ ಬಗ್ಗೆ ಕಾನೂನು, ಗೃಹ ಸಚಿವರು ಹಾಗೂ ಸಿಎಂ ಜೊತೆಗೆ ಚರ್ಚಿಸಿ ಕಾನೂನು ಕ್ರಮಕೈಗೊಳ್ಳಲು ನಾವು ಹಿಂಜರಿವುದಿಲ್ಲ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande