ವಿಜಯಪುರ, 15 ಆಗಸ್ಟ್ (ಹಿ.ಸ.) :
ಆ್ಯಂಕರ್ : ವಕ್ಷಥಾನ್ ಹೆರಿಟೇಜ್ ರನ್-2025 ಮುಂಬರುವ ಈ ಬಾರಿ ಡಿಸೆಂಬರ್ 7 ರಂದು ರವಿವಾರ ನಗರದಲ್ಲಿ ನಡೆಯಲಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ನೆರವೇರಿಸಿದ ಬಳಿಕ ಹೆರಿಟೇಜ್ ರನ್ ನೋಂದಣಿಗೆ ಚಾಲನೆ ನೀಡಿ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಈ ಬಾರಿಯ ವೃಕ್ಷಥಾನ್ ಹೆರಿಟೇಜ್ ರನ್-2025 ಪೋಸ್ಟರ್ ಬಿಡುಗಡೆ ಮಾಡಿರುವುದು ಸಂತಸ ತಂದಿದೆ. ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗಾಗಿ, ಪಕ್ಷಿಗಳಿಗಾಗಿ, ಮರ, ಮಳೆಗಾಗಿ ಓಡಿ ಎಂಬ ನಮ್ಮ ಕಳಕಳಿಯ ಓಟದಲ್ಲಿ 15 ಸಾವಿರಕ್ಕೂ ಸಾವಿರಕ್ಕೂ ಹೆಚ್ಚು ಓಟಗಾರರು ಭಾಗವಹಿಸುವ ನಿರೀಕ್ಷೆಗಳಿವೆ. ಡಿಸೆಂಬರ್ 7ರ ಭಾನುವಾರ ಈ ಓಟದ ಹಬ್ಬಕ್ಕೆ ದಿನ ನಿಗದಿಯಾಗಿದ್ದು, ಓಟಗಾರರು ಇಂದಿನಿಂದಲೇ ತಯಾರಿ ನಡೆಸಿ ನಡೆಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ ಪ್ರತಿಪಕ್ಷದ ಮುಖ್ಯ ಸಚೇತಕ ರವಿಕುಮಾರ ಎನ್., ಮಹಾನಗರ ಪಾಲಿಕೆ ಮೇಯರ್ ಎಂ. ಎಸ್. ಕರಡಿ, ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಜಿಲ್ಲಾಧಿಕಾರಿ ಡಾ. ಕೆ. ಆನಂದ, ಜಿ. ಪಂ. ಸಿಇಓ ರಿಶಿ ಆನಂದ, ಎಸ್ಪಿ ಲಕ್ಷ್ಮಣ ನಿಂಬರಗಿ, ಡಾ. ಮಹಾಂತೇಶ ಬಿರಾದಾರ, ಮುರುಗೇಶ ಪಟ್ಟಣಶೆಟ್ಟಿ ಶಿವನಗೌಡ ಪಾಟೀಲ, ಸಂತೋಷ ಔರಸಂಗ, ಅಶ್ಪಾಕ್ ಮನಗೂಳಿ, ಅಮೀತ ಬಿರಾದಾರ, ಡಾ. ರಾಜು ಯಲಗೊಂಡ, ವೀರೇಂದ್ರ ಗುಚ್ಚೆಟ್ಟಿ, ಮಲ್ಲಿಕಾರ್ಜುನ ಕುಪ್ಪಿ, ಸಚೀನ ಪಾಟೀಲ, ಡಾ. ಪ್ರವೀಣ ಚೌರ, ಸಮೀರ ಬಳಿಗಾರ, ಸಂಕೇತ ಬಗಲಿ, ಸಂದೀಪ ಮಡಗೊಂಡ, ಶ್ರೀಕಾಂತ ಹಡಲಗೇರಿ, ನವೀದ ನಾಗಠಾಣ, ಶ್ರೀಕಾಂತ, ವೀಣಾ ದೇಶಪಾಂಡೆ, ವಿಜಯ ಕೋರಿ, ತಾವಸೆ, ಡಿ.ಎಫ್.ಓ ಮಲ್ಲಿನಾಥ ಕುಸನಾಳ ಮುಂತಾದವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande