ಕೋಲಾರದಲ್ಲಿ ಭಾರತ ಸೇವಾದಳದಿಂದ ೭೯ನೇ ಸ್ವಾತಂತ್ರೋತ್ಸವ ಸಂಭ್ರಮ
ಕೋಲಾರ, ೧೫ ಆಗಸ್ಟ್ (ಹಿ.ಸ) :
ಆ್ಯಂಕರ್ : ಸಮಾನತೆ, ಸಹೋದರತೆ ಹಾಗೂ ಸಹಬಾಳ್ವೆ ತತ್ವಗಳನ್ನು ಅಳವಡಿಸಿಕೊಂಡು ದೇಶವನ್ನು ಒಗ್ಗೂಡಿಸಲು ಪ್ರತಿಯೊಬ್ಬ ಭಾರತೀಯರು ಶ್ರಮಿಸಬೇಕೆಂದು ಭಾರತ ಸೇವಾದಳ ಜಿಲ್ಲಾ ಗೌರವಾಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಭಾರತ ಸೇವಾದಳ ಜಿಲ್ಲಾ ಮತ್ತು ತಾಲೂಕು ಘಟಕಗಳು, ಕ್ಷೇತ್ರ ಶಿಕ್ಷಣಾಕಾರಿಗಳ ಕಚೇರಿ, ಹಳೇ ಮಾಧ್ಯಮಿಕ ಶಾಲೆ, ಉರ್ದು ಮಾಧ್ಯಮಿಕ ಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ೭೯ ನೇ ಭಾರತ ಸ್ವಾತಂತ್ರೋ÷್ಯತ್ಸವ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಅನೇಕ ಮಹನೀಯರ ತ್ಯಾಗ ಬಲಿದಾನಗಳಿಂದ ಬಂದಿರುವ ಸ್ವಾತಂತ್ರ÷್ಯವನ್ನು ಇತ್ತೀಚಿನ ದಿನಗಳಲ್ಲಿ ಜಾತಿ, ಮತ, ಧರ್ಮ, ಭಾಷೆ, ಗಡಿ ನೆಪದಲ್ಲಿ ಹಾಳು ಮಾಡುವವರ ಮಧ್ಯೆö, ಭಾರತೀಯರು ನಾವೆಲ್ಲರೂ ಒಂದೇ ಎಂಬ ಸಂದೇಶಕ್ಕೆ ಚ್ಯುತಿ ಬಾರದಂತೆ ಬದುಕುವುದು ದೇಶವಾಸಿಗಳೆಲ್ಲರ ಕರ್ತವ್ಯವಾಗಿದೆಯೆಂದರು.
ಕ್ಷೇತ್ರ ಶಿಕ್ಷಣಾಕಾರಿ ಮಧುಮಾಲತಿ ಮಾತನಾಡಿ, ಭಾರತ ದೇಶವನ್ನು ನೂರಾರು ವರ್ಷಗಳ ಕಾಲ ಮೊಘಲರು, ಬ್ರಿಟೀಷರು ಆಳಿದ್ದರು, ಅವರ ಆಡಳಿತ ಮತ್ತು ದುರಾಢಳಿತಗಳ ಪರಿಣಾಮದಿಂದ ದೇಶವನ್ನು ದಾಸ್ಯದಿಂದ ಮುಕ್ತಗೊಳಿಸಲು ಗಾಂ0ಜಿಯವರ ನೇತೃತ್ವದಲ್ಲಿ ಅಹಿಂಸಾ ಹೋರಾಟ ನಡೆಸಿ ದೇಶವನ್ನು ಸ್ವತಂತ್ರಗೊಳಿಸಲಾಯಿತು. ದೇಶವನ್ನು ವಿಶ್ವದಲ್ಲಿಯೇ ಮಂಚೂಣಿ ಸ್ಥಾನದಲ್ಲಿ ನಿಲ್ಲಿಸಲು ಪ್ರತಿಯೊಬ್ಬರೂ ಮುಂದಾಗಬೇಕಿದೆ ಎಂದರು.
ಧ್ವಜಾರೋಹಣ ನೆರವೇರಿಸಿದ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ವೈವಿಧ್ಯತೆಯಲ್ಲಿ ಏಕತೆ ಎನ್ನುವುದು ಭಾರತದ ಪ್ರಬಲ ಶಕ್ತಿಯಾಗಿದ್ದುö, ಜಾತಿ, ಧರ್ಮ, ಭಾಷೆ, ಗಡಿಗಳಲ್ಲದೆ, ಪ್ರಾಕೃತಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಇರುವ ವೈವಿಧ್ಯತೆಯನ್ನು ದೇಶದ ಅಭಿವೃದ್ಧಿಗೆ ಮಾತ್ರ ಬಳಸಿಕೊಂಡು ದೇಶವನ್ನು ವಿಭಜಿಸುವ ಶಕ್ತಿಗಳಿಗೆ ತಿರುಗೇಟು ನೀಡಬೇಕೆಂದು ಹೇಳಿದರು.
ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದ ಸ್ವಾತಂತ್ರವದಲ್ಲಿ ಭಾರತ ಸೇವಾದಳದ ಸಂಘಟನೆಗಾಗಿ ಹಲವಾರು ವರ್ಷಗಳಿಂದಲೂ ಶ್ರಮಿಸುತ್ತಿರುವ ಸೇವಾದಳ ಜಿಲ್ಲಾ ಕಾರ್ಯದರ್ಶಿ ಎಸ್.ಸುಧಾಕರ್, ಮಾಲೂರು ತಾಲೂಕು ಹಿರಿಯ ಸದಸ್ಯ ಬಹಾದ್ದೂರ್ ಸಾಬ್ ಮತ್ತು ಕೋಲಾರದ ಫಲ್ಗುಣರನ್ನು ಜಿಲ್ಲಾಡಳಿತದ ಕಾರ್ಯಕ್ರಮದಲ್ಲಿ ಸನ್ಮಾನಿಸಲು ಆಯ್ಕೆಯಾಗಿದ್ದು ಅಭಿನಂದನೆಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತ ಸೇವಾದಳ ತಾಲೂಕು ಅಧ್ಯಕ್ಷ ಶ್ರೀರಾಮ್, ಪದಾಕಾರಿಗಳಾದ ಕೆ.ಜಯದೇವ್, ಅಪ್ಪಿ ನಾರಾಯಣಸ್ವಾಮಿ, ಡಿ.ಜೆ.ಮನೋಹರ್, ವಿ.ಪಿ.ಸೋಮಶೇಖರ್, ಪೈಂಟರ್ ಬಷೀರ್ ಅಹಮದ್, ಶ್ರೀನಾಥ್, ಗೋಕುಲ ಚಲಪತಿ, ವರದೇನಹಳ್ಳಿ ವೆಂಕಟೇಶ್, ಚೌಡಪ್ಪö, ಕ್ಷೇತ್ರ ಶಿಕ್ಷಣಾಕಾರಿಗಳ ಕಚೇರಿ ಸಿಬ್ಬಂದಿ, ಮೂರು ಶಾಲೆಗಳ ಮುಖ ್ಯಶಿಕ್ಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಾಲಾ ವಿದ್ಯಾರ್ಥಿಗಳಾದ ಹರ್ಷ ಹಾಗೂ ಮಾನಸ ಸ್ವಾತಂತ್ರ ಕುರಿತು ಕಿರು ಭಾಷಣ ಮಾಡಿದರು.
ಭಾರತ ಸೇವಾದಳ ಜಿಲ್ಲಾ ಸಂಘಟಕ ಬಿ.ದಾನೇಶ್ ವಂದೇಮಾತರ0, ರಾಷ್ಟಗೀತೆ ಹಾಗೂ ಧ್ವಜಗೀತೆ ಗಾಯನ ಮತ್ತು ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.
ಚಿತ್ರ ; ಕೋಲಾರ ಜಿಲ್ಲಾ ಮತ್ತು ತಾಲೂಕು ಭಾರತ ಸೇವಾದಳ. ಕ್ಷೇತ್ರ ಶಿಕ್ಷಣಾಕಾರಿಗಳ ಕಚೇರಿವತಿಯಿಂದ ೭೯ ನೇ ಸ್ವಾತಂತ್ರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್