ಗದಗ ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂಭ್ರಮ
ಗದಗ, 15 ಆಗಸ್ಟ್ (ಹಿ.ಸ.) : ಆ್ಯಂಕರ್ : ಗದುಗಿನ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ಸ್ವಾತಂತ್ರ್ಯೋತ್ಸವ
ಪೋಟೋ


ಗದಗ, 15 ಆಗಸ್ಟ್ (ಹಿ.ಸ.) :

ಆ್ಯಂಕರ್ : ಗದುಗಿನ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಸಾರ್ವಜನಿಕ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ದಳಗಳ ವೀಕ್ಷಣೆ ಮಾಡಿದರು.

ಸ್ವಾತಂತ್ರ್ಯೋತ್ಸವ ದಿನಾಚರಣೆ -2025 ಯ ಅಂಗವಾಗಿ ಸಮಾರಂಭದಲ್ಲಿ ಸಾಧನೆಗೈದ ಗಣ್ಯರನ್ನು ಗುರುತಿಸಿ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಸೇರಿದಂತೆ ಇತರೆ ಗಣ್ಯರು ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡರು.

ಜಿಲ್ಲಾ ಪೊಲೀಸ ಅಧೀಕ್ಷಕರಾದ ರೋಹನ ಜಗದೀಶ್ ಹಾಗೂ ಡಿಎಸ್‌ಪಿ ವಿದ್ಯಾನಂದ ವಿ ನಾಯಕ ಇವರ ಮಾರ್ಗದರ್ಶನದಲ್ಲಿ ಜರುಗಿದ ಆಕರ್ಷಕ ಪಥಸಂಚಲನದ ನೇತೃತ್ವವನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪರೇಡ ಕಮಾಂಡರ್ ಶಂಕರಗೌಡ ಚೌದ್ರಿ ಇವರು ನೇತೃತ್ವವನ್ನು ವಹಿಸಿದ್ದರು.

ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ ಪಡೆಯ ನೇತೃತ್ವವನ್ನು ವಿಜಯಕುಮಾರ್ ಜಿ ವಹಿಸಿದ್ದರು. ನಾಗರಿಕ ಪೊಲೀಸ ಪಡೆಯ ನೇತೃತ್ವವನ್ನು ಚಾಂದಭಾಷಾ ಪ್ರೊ.ಆರ್.ಎಸ್.ಐ. ಡಿಎಆರ್ ಗದಗ, ಗೃಹ ರಕ್ಷಕ ದಳದ ನೇತೃತ್ವವನ್ನು ಎಂ.ಎನ್.ವಸ್ತçದ, ಅಗ್ನಿಶಾಮಕ ಪಡೆಯ ನೇತೃತ್ವವನ್ನು ಬಂಗಾರಪ್ಪ ವೈ.ಟಿ, ಅಬಕಾರಿ ದಳದ ನೇತೃತ್ವವನ್ನು ಶ್ರೀಮತಿ ವಿಜಯಲಕ್ಷ್ಮಿ ಗಣತಿ, ಅರಣ್ಯ ರಕ್ಷಕ ಪಡೆಯ ನೇತೃತ್ವವನ್ನು ಡೆಪ್ಯೂಟಿ ಆರ್.ಎಫ್.ಓ ಸಚಿನ ಬಿಸನಳ್ಳಿ, ಎನ್.ಸಿ.ಸಿ. ಸಿನೀಯರಸ್ ಬಾಯ್ಸ್ ದಳದ ನೇತೃತ್ವವನ್ನು 38 ಕೆ ಎ ಆರ್ ಬಟಾಲಿಯನ್ ಗದಗನ ಕುಮಾರ ಜ್ಞಾನೇಶ ಗಾಯಕವಾಡ , ಎನ್.ಸಿ.ಸಿ. ಸೀನಿಯರ್ಸ ಗರ್ಲ್ಸ ದ ನೇತೃತ್ವವನ್ನು 38 ಕೆ ಎ ಆರ್ ಬಟಾಲಿಯನ್ ಗದಗನ ಕುಮಾರಿ ಕವುತಾ ಬಾಕಳೆ, ಸೇವಾದಳದ ನೆತೃತ್ವವನ್ನು ಸರ್ಕಾರಿ ಹೆಣ್ನುಮಕ್ಕಳ ಪ್ರೌಢಶಾಲೆ , ಎಸ್.ಎಂ. ಕೃಷ್ಣಾ ನಗರದ ಕುಮಾರಿ ಆಯುಶಾ ಸರ್ಕವಾಸ, ಕ್ರೀಡಾ ತಂಡದ ನೇತೃತ್ವವನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕುಮಾರ ಸಂದೀಪ ನವಲೆಕರ, ಸ್ಕೌಟ್ಸ್ ದ ನೇತೃತ್ವವನ್ನು ಸಿ.ಡಿ.ಓ ಜೈನ್ ಪ್ರಾಥಮಿಕ ಶಾಲೆಯ ಕುಮಾರ್ ಅಭಿಷೆಕ ತೊಂಡಿಹಾಳ, , ಸಾಮಾನ್ಯ ವಿಭಾಗದ ನೇತೃತ್ವವನ್ನು ಸೇಂಟ ಜಾನ್ ಪ್ರೌಢಶಾಲೆಯ ಬೆಟಗೇರಿಯ ಕುಮಾರ ಸೋಮಶೇಖರ್ , ಸ್ಕೌಟ್ಸ್ ವಿಭಾಗದ ನೇತೃತ್ವವನ್ನು ಕೆ.ಎಲ್.ಇ. ಸಿಬಿ ಎಸ್ ಇ ಬಾಲಕರ ಶಾಲೆಯ ಕುಮಾರ ಸಾಯಿಸಮರ್ಥ ಬಡಿಗೇರ , ಗೈಡ್ಸ್ ವಿಭಾಗದ ನೇತೃತ್ವವನ್ನು ಕೆ.ಎಲ್.ಇ. ಸಿಬಿಎಸ್ ಇ ಬಾಲಕಿಯರ ಶಾಲೆಯ ಕುಮಾರಿ ಸಾನ್ವಿ ಚನ್ನಪ್ಪಗೌಡ್ರ , ಸಾಮಾನ್ಯ ವಿಭಾಗದ ನೇತೃತ್ವವನ್ನು ಕೆ.ವಿ.ಎಸ್.ಆರ್. ಪ್ರೌಢಶಾಲೆಯ ಕುಮಾರಿ ಜಾಸ್ಮೀನ್ ಹುಸೇನಬಾಯಿ, ಸೇಂಟ ಜಾನ್ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಕುಮಾರ ಪವನಕುಮಾರ್ , ಬಾಸೆಲ್ ಮಿಶನ ಬಾಲಕರ ಪ್ರೌಢಶಾಲೆಯ ಬೆಟಗೇರಿ ಕುಮಾರ ಉಲ್ಲಾಸ ಹೊನ್ನಾಳಿ, ವಿ.ಡಿ.ಎಸ್.ಟಿ.ಸಿ. ಬಾಲಕಿಯರ ಪ್ರೌಢಶಾಲೆಯ ಕುಮಾರಿ ಸಹನಾ ಸಂಗಮದ ವಹಿಸಿದ್ದರು.

ಕಲೆ, ಸಾಹಿತ್ಯ, ಸಂಗೀತ, ರಂಗಭೂಮಿ , ಸಮಾಜ ಸೇವೆ ಇತರೆ ವಿಭಾಗ

2024 ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪಡೆದಿದ್ದಕ್ಕಾಗಿ ( ಪ್ರಶಸ್ತಿ ನೀಡಿದ್ದು ಮೇ 2025) ಜಿಲ್ಲೆಯ ಶಿರಹಟ್ಟಿ ತಾಲೂಕಿನ ದೇವಿಹಾಳದ ವೇಷಗಾರ ಡಾ.ಗೋವಿಂದಪ್ಪ ರಾಮಚಂದ್ರಪ್ಪ, 2023 ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪಡೆದಿದ್ದಕ್ಕಾಗಿ, ( ಪ್ರಶಸ್ತಿ ನೀಡಿದ್ದು ಮೇ -2025 ) ಜಿಲ್ಲೆಯ ಗದಗ ತಾಲೂಕಿನ ಲಕ್ಕುಂಡಿ ಬಸವರಾಜ ನೀಲಪ್ಪ ಹಡಗಲಿ, 2023 ನೇ ಸಾಲಿನ ಕರ್ನಾಟಕ ಲಲಿತಕಲಾ ಅಕಾಡೆಮಿ ವರ್ಣಶ್ರೀ ಪ್ರಶಸ್ತಿ ಪಡೆದಿದ್ದಕ್ಕಾಗಿ (ಪ್ರಶಸ್ತಿ ನೀಡಿದ್ದು ಮೇ -2025 ) ಮುಳಗುಂದದ ಬಸವರಾಜ ಕುತ್ನಿ , 30 ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು 50 ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ನಗರದ ಹಾತಲಗೇರಿ ರಸ್ತೆಯ ಸಾಯಿ ನಗರದ ತಯಬಲಿ ಅ ಹೊಂಬಳ, 2024 ನೇ ಸಾಲಿನ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದಿದ್ದಕ್ಕಾಗಿ ಬೆಟಗೇರಿಯ ಕಣಗಿನಹಾಳ ರೋಡದ ಶ್ರೀಮತಿ ಪೂಜಾ ಮಲ್ಲಪ್ಪ ಬೇವೂರ, ಆಕಾಶವಾಣಿಯ ಎ ಶ್ರೇಣಿಯ ಕಲಾವಿದರಾಗಿದ್ದು 30 ವರ್ಷಗಳಿಂದ ತಬಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಕ್ಕಾಗಿ ಕಳಸಾಪುರ ರಸ್ತೆಯಲ್ಲಿನ ಡಾ.ಎಚ್.ಬಿ. ಹೂಗಾರ, ಗದಗ ನಗರದ ರವಿ ಈರವ್ವ ವಾಲ್ಮೀಕಿ ಇವರು ನಗದು ಮತ್ತು ದಾಖಲೆಗಳುಳ್ಳ ಬ್ಯಾಗನ್ನು ಕಳೆದುಕೊಂಡಿದ್ದರು ಅದನ್ನು ಸುರಕ್ಷಿತವಾಗಿ ಅವರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಕ್ಕಾಗಿ ಗದಗನ ಸೈಯದ್ ಹುಸೇನ ಹೊಂಬಳ , ಪ್ರಾಚ್ಯಾವಶೇಷಗಳು ಮತ್ತು ಬೆಲೆ ಬಾಳುವ ಆಭರಣಗಳನ್ನು ಯಾವುದೇ ಫಲಾಪೇಕ್ಷೆ ಇಲ್ಲದೇ ಮಾನ್ಯ ಸಚಿವರಿಗೆ ಹಸ್ತಾಂತರಸಿದ್ದಕ್ಕಾಗಿ ಜಿಲ್ಲೆಯ ಲಕ್ಕುಂಡಿಯ ಬಸಪ್ಪ ಬಡಿಗೇರ, ಲಕ್ಕುಂಡಿ ಪ್ರಾಚ್ಯಾವಷೇಷಗಳ ಅನ್ವೇಷಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಕ್ಕಾಗಿ ಜಿಲ್ಲೆಯ ಲಕ್ಕುಂಡಿಯ ಪೀರಸಾಬ ನದಾಫ್ ಸನ್ಮಾನಿಸಲಾಯಿತು.

ಸನ್ಮಾನಿತರು : ಆಡಳಿತ,ಆರೋಗ್ಯ, ಕೃಷಿ ಅರಣ್ಯ , ಕೈಮಗ್ಗ ಮತ್ತು ಜವಳಿ ವಿಭಾಗ

ಏಪ್ರಿಲ್-2025 ರಲ್ಲಿ ಅಮೇರಿಕಾದ ಲಾಸ್ ವೆಗಾಸ್ ದಲ್ಲಿ ನಡೆದ ಅನಿಮಲ್ ಎಕ್ಸೋ ಕೇರ್-2025 ರಲ್ಲಿ ಭಾಗವಹಿಸಿದ್ದಕ್ಕಾಗಿ ಗದಗ ಮುಖ್ಯ ಪಶುಸಂಗೋಪನಾ ಅಧಿಕಾರಿ ಡಾ. ಪ್ರಕಾಶ ಸಿದ್ಧಪ್ಪ ಜಟ್ಟೆಣ್ಣವರ, ಕೆ.ಎಂ.ಸಿ.ಆರ್.ಐ ಹುಬ್ಬಳ್ಳಿ ಆಸ್ಪತ್ರೆಗೆ ಅಂಗಾಂಗ ದಾನ ಮಾಡಿರುವುದಕ್ಕಾಗಿ ಬೆಟಗೇರಿಯ ಬುದ್ದಿ ಮಾಂಧ್ಯ ಸ್ಕೂಲ್ ನ ಮಂಜುನಾಥ ಸುರೇಶ ಮಾಲೂರ, ಕೆ.ಎಚ್.ಪಾಟೀಲ ಆಸ್ಪತ್ರೆಗೆ ಅಂಗಾAಗ ದಾನ ಮಾಡಿರುವುದಕ್ಕಾಗಿ ಬೆಟಗೇರಿಯ ರಾಮಮಂದಿರ ಹತ್ತಿರ ಯಲ್ಲಪ್ಪ ಕಾಂಬ್ಳೇಕರ್ , ಗಜೇಂದ್ರಗಡದ ಪಟ್ಟೆದಂಚು ಸೀರೆಯು ಸಿಂಧೂರ ಚಿಕ್ಸ್ ಸೀರೆಗೆ ಭೌಗೋಳಿಕ ಹಕ್ಕು ಸಾಮ್ಯ ಪಡೆದಿದ್ದಕ್ಕಾಗಿ ಜಿಲ್ಲೆಯ ಗಜೇಂದ್ರಗಡದ ತೇಜಪ್ಪ ವೆಂಕಟೇಶಪ್ಪ ಚಿನ್ನೂರ, ಗದಗ ತಾಲೂಕಿನ ಹುಯಿಲಗೋಳದ ಹತ್ತಿರ 11 ಎಕರೆಯಲ್ಲಿ ಮಾನವ ನಿರ್ಮಿತ ಅರಣ್ಯ ಹಾಗೂ ಜೀವ ವೈವಿಧ್ಯ ಉದ್ಯಾನವನ ರಚನೆ ಗಾಗಿ ಡಾ. ಪ್ರದೀಪ ಶಿವಮೂರ್ತೆಪ್ಪ ಉಗಲಾಟ , ಆಧುನಿಕ ಕೃಷಿ ವಿಧಾನ ಅನುಸರಿಸಿ ರೇಷ್ಮೆ ಕೃಷಿಯಲ್ಲಿ ಸಾಧನೆ ಮಾಡಿದ್ದಕ್ಕಾಗಿ ಗಜೇಂದ್ರಗಡದ ತಾಲೂಕಿನ ಮ್ಯಾಕಲಜರಿಯ ಅಂದಪ್ಪ ಕಾಂತಪ್ಪ ಅಂಗಡಿ, ಸ್ವಚ್ಛತೆ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ನರಗುಂದ ಪುರಸಭೆ ಮುಖ್ಯಾಧಿಕಾರಿ, ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಜುಲೈ 21 ರಿಂದ 23 ರವರೆಗೆ ನಡೆದ ವೈದ್ಯಕೀಯ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡಿಸಿದ್ದಕ್ಕಾಗಿ ನ್ಯಾಯ ವೈದ್ಯಶಾಸ್ತ್ರ ವಿಭಾಗದ ಪ್ರಾಂಶುಪಾಲರು ಹಾಗೂ ವಿಭಾಗದ ಮುಖ್ಯಸ್ಥರು ಡಾ.ರಾಜು ಜಿ.ಎಂ. , ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಜುಲೈ 21 ರಿಂದ 23 ರವರೆಗೆ ನಡೆದ ವೈದ್ಯಕೀಯ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡಿಸಿದ್ದಕ್ಕಾಗಿ ಎಲುವು ಕೀಲು ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ.ಮಹಾಂತೇಶ ಪಾಟೀಲ, ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಜುಲೈ 21 ರಿಂದ 23 ರವರೆಗೆ ನಡೆದ ವೈದ್ಯಕೀಯ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡಿಸಿದ್ದಕ್ಕಾಗಿ ಶರೀರ ಕ್ರಿಯಾ ಶಾಸ್ತç ವಿಭಾಗದ ಮುಖ್ಯಸ್ತರು ಹಾಘೂ ಸಹ ಪ್ರಾಧ್ಯಾಪಕರಾದ ಡಾ.ಸಮತಾ ಪದಕಿ, ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಜುಲೈ 21 ರಿಂದ 23 ರವರೆಗೆ ನಡೆದ ವೈದ್ಯಕೀಯ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡಿಸಿದ್ದಕ್ಕಾಗಿ ಕು. ಎಂ.ಬಿ.ಬಿ.ಎಸ್. ವಿದ್ಯಾರ್ಥಿ ಕು. ಬಸಪ್ಪ ಮೌಳಿ, ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಜುಲೈ 21 ರಿಂದ 23 ರವರೆಗೆ ನಡೆದ ವೈದ್ಯಕೀಯ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡಿಸಿದ್ದಕ್ಕಾಗಿ ಎಂ.ಬಿ.ಬಿ.ಎಸ್.ವಿದ್ಯಾರ್ಥಿ ಕು. ಜಯಶ್ರೀ ಚೌದ್ರಿ.

ಪತ್ರಿಕೋದ್ಯಮ ಮತ್ತು ಟಿ.ವಿ. ಮಾಧ್ಯಮ ವಿಭಾಗ,

ಮಾದ್ಯಮ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರರಾದ ಸುರೇಶ ಕಡ್ಲಿ ಮಟ್ಟಿ , ಚಕ್ರವರ್ತಿ ದಿನಪತ್ರಿಕೆಯ ಸಂಪಾದಕರಾದ ನಾಗೋಸಾ ಭಾಂಡಗೆ, ವಿಜಯ ಕರ್ನಾಟಕದ ವರದಿಗಾರರಾದ ರುದ್ರಗೌಡ ಪಾಟೀಲ, ಪವರ ಟಿವಿಯ ಜಿಲ್ಲಾ ವರದಿಗಾರರಾದ ಆನಂದಯ್ಯ ವಿರಕ್ತಮಠ, ಕನ್ನಡಪ್ರಭ ರೋಣ ತಾಲೂಕಿನ ವರದಿಗಾರರಾದ ಪಿ.ಎಸ್.ಪಾಟೀಲ, ವಿಜಯವಾಣಿ ನರೇಗಲ್ ಹೋಬಳಿ ವರದಿಗಾರರಾದ ಪ್ರಭುಸ್ವಾಮಿ ಅರವಟಿಮಠ, ಸಂಯುಕ್ತ ಕರ್ನಾಟಕದ ಲಕ್ಷ್ಮೇಶ್ವರ ತಾಲೂಕಿನ ವರದಿಗಾರರಾದ ದಿಗಂಬರ ಪೂಜಾರ, ವಿಜಯ ಕರ್ನಾಟಕದ ಮುಂಡರಗಿ ತಾಲೂಕಿನ ವರದಿಗಾರರಾದ ಸಿ.ಕೆ.ಗಣಪ್ಪನವರ, ಕಿತ್ತೂರು ಕರ್ನಾಟಕದ ನರಗುಂದ ವರದಿಗಾರರಾದ ಪ್ರಭು ಗುಡಾರದ, ವಿಜಯವಾಣಿ ಮುಳಗುಂದ ಹೋಬಳಿ ವರದಿಗಾರರಾದ ಎಮ್.ಎಮ್. ಜಮಾಲಸಾಬನವರ .

ಶಿಕ್ಷಣ , ಕ್ರೀಡಾ ಹಾಗೂ ಇತರೆ ವಿಭಾಗ,

2024-25 ನೇ ಸಾಲಿನ ದ್ವಿತೀಯ ಪಿ.ಯು.ಸಿ. ಕಲಾ ವಿಭಾಗದ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ಗದಗನ ಜೆ.ಎ.ಪದವಿ ಪೂರ್ವ ಕಾಲೇಜಿನ ಕುಮಾರಿ ವಿಜಯಲಕ್ಷ್ಮಿ ಗೊನಬಾಳ, 2024-25 ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ಜೆ.ಟಿ. ಪದವಿ ಪೂರ್ವ ಕಾಲೇಜಿನ ಕುಮಾರಿ ನವತಿಕ ಬಿ.ಹಜಾರಿ, 2024-25 ನೇ ಸಾಲಿನ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಕ್ಕಗಿ ಜೆ.ಟಿ. ಪದವಿಪೂರ್ವ ಕಾಲೇಜಿನ ಕುಮಾರಿ ಕಾವ್ಯ ಹಿರೇಗೌಡರ, ಏಪ್ರಿಲ್ -2025 ರಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ರೋಣ ತಾಲೂಕಿನ ಮೆಣಸಗಿಯ ಕುಮಾರಿ ಸುಶೀಲಾ ಶಿವಾನಂದ ಯಲಿಗಾರ, ಜಪಾನದ ಸುಕುರಾದಲ್ಲಿ ವೈಯಕ್ತಿಕ ವಿಭಾಗದಲ್ಲಿ ನಡೆದ ಅಂತರಾಷ್ಟ್ರೀಯ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ ನಿಮಿತ್ಯ ಮುಂಡರಗಿ ತಾಲೂಕಿನ ಶಿಂಗಟಾಲೂರದ ಸರ್ಕಾರಿ ಪ್ರೌಢಶಾಲೆಯ ಕುಮಾರಿ ರಕ್ಷಿತಾ ಚುರ್ಚಿಹಾಳ, ಕಲಬುರ್ಗಿಯಲ್ಲಿ ನಡೆದ 2024-25 ನೇ ಸಾಲಿನ ರಾಜ್ಯ ಮಟ್ಟದ ಪ್ರಾಚ್ಯ ಪ್ರಜ್ಞೆ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ಶಿರಹಟ್ಟಿ ತಾಲೂಕಿನ ಒಡೆಯರ ಮಲ್ಲಾಪೂರದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕುಮಾರ ಉಮೆಶ ಪೂಜಾರಿ, ಕರ್ನಾಟಕ ವಿಶ್ವ ವಿದ್ಯಾಲಯ, ಧಾರವಾಡ ಇವರಿಂದ ಕೊಡಲಾಗುವ ಎನ್.ಎಸ್.ಎಸ್. ವಿಭಾಗದಲ್ಲಿ 2023-24 ನೇ ಸಾಲಿನ ಡಾ. ಡಿ.ಸಿ. ಪಾವಟೆ ಪ್ರಶಸ್ತಿ ಪಡೆದಿದ್ದಕ್ಕಾಗಿ ಎ.ಎಸ್.ಎಸ್. ಕಾಮರ್ಸ ಕಾಲೇಜ್ ಕು. ಮನೋಜ್ ಎಚ್ ದಲಬಂಜನ , ಓಡಿಸ್ಸಾ ರಾಜ್ಯದ ಪುರಿಯಲ್ಲಿ ನಡೆದ 29 ನೇ ರಾಷ್ಟಿçÃಯ ರೋಡ ಸೈಕ್ಲಿಂಗ್ ಚಾಂಪಿಯನ್ ಶಿಪ್ ಟೀಂ ಟೈಮ್ ಟೈಲ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದ ನಿಖಿಲರಡ್ಡಿ ನಿಂಗರಡ್ಡಿ ತೇರಿನಗಡ್ಡಿ, ಚೆನ್ನೆöÊನಲ್ಲಿ ನಡೆದ ಆಲ್ ಇಂಡಿಯಾ ಇಂಟರ್ ವಿಶ್ವ ವಿದ್ಯಾಲಯ ಮಟ್ಟದ ಹಾಕಿ ಕ್ರೀಡಾ ಕೂಟದಲ್ಲಿ ಬಾಘವಹಿಸಿದ ಗದಗನ ವೈಷ್ಣವ ಕಲಕಂಬಿ, 5-1-2025 ರಂದು ದೆಹಲಿಯಲ್ಲಿ ನಡೆದ ರಾಷ್ಟç ಮಟ್ಟದ ಕ್ರಾಸ್ ಕಂಟ್ರಿಯಲ್ಲಿ ಬಾಘವಹಿಸಿದ ದೇವರಾಜ ಕಲ್ಲಪ್ಪ ದೊಡಮನಿ, ದಿ: 28-3-2025 ರಿಂದ 31-3-2025 ರವರೆಗೆ ಹರಿಯಾಣದ ಪಂಚಕುಲದಲ್ಲಿ ನಡೆದ 21 ನೇ ರಾಷ್ಟç ಮಟ್ಟದ ಎಂಟಿಬಿ ಸೈಕ್ಲಿಂಗ್ ಪಂದ್ಯವಳಿಯಲ್ಲಿ ಭಾಗವಹಿಸಿದ ಪ್ರಿಯಾಂಕಾ ಲಮಾಣಿ, 28-3-2025 ರಿಂದ 31-3-2025 ರವರೆಗೆ ಹರಿಯಾಣದ ಪಂಚಕುಲದಲ್ಲಿ ನಡೆದ 21 ನೇ ರಾಷ್ಟç ಮಟ್ಟದ ಎಂಟಿಬಿ ಸೈಕ್ಲಿಂಗ್ ಪಂದ್ಯಾವಳಿಯಲ್ಲಿ ಬಾಗವಹಿಸಿದ ಸೌಂದರ್ಯ ಅಂತಾಪೂರ, ದಿ: 22-1-2025 ರಿಂದ 24-1-2025 ರವರೆಗೆ ಬಿಹಾರದ ಪಾಟ್ನಾದಲ್ಲಿ ನಡೆದ ರಾಷ್ಟç ಮಟ್ಟದ ರೋಡ ಸೈಕ್ಲಿಂಗ್ ಪಂದ್ಯವಳಿಯಲ್ಲಿ ಬಾಘವಹಿಸಿದ ಸಾಗರ ಹೊಳೆಪ್ಪಗೋಳ, ಮಹಾರಾಷ್ಟçದ ಲಾಥೋರ ನಲ್ಲಿ ನಡೆದ ಸಿ.ಬಿ.ಎಸ್.ಸಿ. ಶಾಲೆಗಳ ಸೌಥಝೋನ್ ಜುಡೋ ಚಾಂಪಿಯನ್ ಶಿಪ್ 2025 , 30 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದ ಕು ಸಮರ್ಥ ತಾಳಿ.

ಸಮಾರಂಭದಲ್ಲಿ ವಿಧಾನ ಪರಿಷತ್ ಶಾಸಕ ಎಸ್.ವಿ.ಸಂಕನೂರ, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷರಾದ ಬಿ.ಬಿ.ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ, ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಸೇರಿದಂತೆ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರುಗಳು, ಸಾರ್ವಜನಿಕರು, ಅಪಾರ ಸಂಖ್ಯೆಯಲ್ಲಿ ಶಾಲಾ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande