ಬಾಗಲಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ವಿಜಯಪುರ, 15 ಆಗಸ್ಟ್ (ಹಿ.ಸ.) : ಆ್ಯಂಕರ್ : ಬಾಗಲಕೋಟ ಯೂನಿಯನ್ ಮತ್ತು ಎಂಟ್ರಿಪ್ರೈನರ್ಸ್ ಅಸೋಸಿಯೇಷನ್ಸ (ರಿ) ( BUMA ) ಹಾಗೂ ಕಾಮಧೇನು ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಬಾಗಲಕೋಟೆಯ ಸ್ಟೇಷನ್ ರಸ್ತೆಯ ಕುಮಟಗಿ ಷೋರೂಮ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಮೊ
ದಿನಾಚರಣೆ


ವಿಜಯಪುರ, 15 ಆಗಸ್ಟ್ (ಹಿ.ಸ.) :

ಆ್ಯಂಕರ್ : ಬಾಗಲಕೋಟ ಯೂನಿಯನ್ ಮತ್ತು ಎಂಟ್ರಿಪ್ರೈನರ್ಸ್ ಅಸೋಸಿಯೇಷನ್ಸ (ರಿ) ( BUMA ) ಹಾಗೂ ಕಾಮಧೇನು ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಬಾಗಲಕೋಟೆಯ ಸ್ಟೇಷನ್ ರಸ್ತೆಯ ಕುಮಟಗಿ ಷೋರೂಮ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಮೊದಲಿಗೆ ಭಾರತಾಂಬೆಗೆ ಪುಷ್ಪಗಳ ಮೂಲಕ ನಮನ ಸಲ್ಲಿಸಿ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಲ್ಲಿಕಾರ್ಜುನ ಶೀಲವಂತ ವ್ಯವಸ್ಥಾಪಕರು ಮೆ. ಶೀಲವಂತ ಜುವ್ಯೇಲರ್ಸ ಇವರಿಂದ ಧ್ವಜಾರೋಹಣ ನೇರವರಿಸಲಾಯಿತು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಶೀಲವಂತ, ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡ ಎಲ್ಲ ಸ್ವಾತಂತ್ರ್ಯ ಸೇನಾನಿಗಳನ್ನು ಸ್ಮರಿಸಿ ಅವರ ತ್ಯಾಗ ಬಲಿದಾನಗಳಿಂದ ಇಂದು ನಮಗೆ ಸ್ವತಂತ್ರವಾಗಿ ಬದುಕಲು ಸಾಧ್ಯವಾದಕ್ಕೆ ನಾವೆಲ್ಲ ಆ ಸೇನಾನಿಗಳಿಗೆ ಕೃತಜ್ಞತೆ ಸಲ್ಲಿಸಲು ಕರೆ ನೀಡಿದರು.

ಇದೇ ಸಂದರ್ಭ ಬಾಗಲಕೋಟೆ ವ್ಯಾಪಾರ ವಹಿವಾಟು ಅಭಿವೃದ್ಧಿಗಾಗಿ ಬಾಗಲಕೋಟ ಯೂನಿಯನ್ & ಎಂಟ್ರಿಪ್ರೈನರ್ಸ್ ಅಸೋಸಿಯೇಷನ್ಸ (ರಿ) ಸಂಸ್ಥೆಯ ಶ್ರಮ ಶ್ಲಾಘನೀಯ ಕಾರ್ಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಮ್ಮ ಅಧ್ಯಕ್ಷೀಯ ಸಂಭೋದನೆಯಲ್ಲಿ ಬಾಗಲಕೋಟ ಯೂನಿಯನ್ & ಎಂಟ್ರಿಪ್ರೈನರ್ಸ್ ಅಸೋಸಿಯೇಷನ್ಸ (ರಿ) ಹಾಗೂ ಕಾಮಧೇನು ಸಂಸ್ಥೆಯ ಅಧ್ಯಕ್ಷರಾದ ರವಿ ಕುಮಟಗಿಯವರು ಉಭಯ ಸಂಸ್ಥೆಗಳ ಕಾರ್ಯ ಚಟುವಟಿಕೆಯ ಮೂಲಕ ಬಾಗಲಕೋಟೆಯ ಆರ್ಥಿಕ ಹಾಗೂ ಸಾಮಾಜಿಕ ರಂಗದಲ್ಲಿ ಮಾಡಿರುವ ಹಾಗೂ ಮುಂದೆಯೂ ಕೈಗೊಳ್ಳುವ ಕ್ರಮಗಳನ್ನು ಪ್ರಸ್ತಾಪಿಸಿದರು.

ಇನ್ನೋರ್ವ ಅತಿಥಿ ಪ್ರತಿಷ್ಠಿತ ಸತ್ಯಾಶ್ರಯ ಪತ್ರಿಕೆ ಸಂಪಾದಕರಾದ ಶ್ರೀ ಆನಂದ ಜಿಗಜಿನ್ನಿಯವರು ತಮ್ಮ ಸ್ವಾತಂತ್ರ್ಯ ಸೇನಾನಿಗಳಿಗೆ ನುಡಿ ನಮನಗಳನ್ನು ಸಲ್ಲಿಸಿದರು.

ಆಗಮಿಸಿದ ಅತಿಥಿಗಳನ್ನು ಸ್ವಾಗತ ಹಾಗೂ ಪರಿಚಯವನ್ನು ಬಾಗಲಕೋಟ ಯೂನಿಯನ್ & ಎಂಟ್ರಿಪ್ರೈನರ್ಸ್ ಅಸೋಸಿಯೇಷನ್ಸ (ರಿ) ಯ ಪ್ರಧಾನ ಕಾರ್ಯದರ್ಶಿ ಶ್ರೀ ವಿರೂಪಾಕ್ಷ ಅಮೃತಕರ ನಡೆಸಿಕೊಟ್ಟರು, ಕಾಮಧೇನು ಸಂಸ್ಥೆ ಕಾರ್ಯದರ್ಶಿ ವಿಜಯ ಸುಲಾಖೆ ಇವರಿಂದ ನಿರೂಪಣೆ ಹಾಗೂ ವಂದರ್ನಾಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬಾಗಲಕೋಟ ಯೂನಿಯನ್ & ಎಂಟ್ರಿಪ್ರೈನರ್ಸ್ ಅಸೋಸಿಯೇಷನ್ಸ (ರಿ) ಸಂಸ್ಥೆಯ ಪದಾಧಿಕಾರಿಗಳಾದ‌ ಸರ್ವ ಶ್ರೀ ಪುಕರಾಜ ಬೇತಾಳ, ಬಾಳು ಉಳ್ಳಾಗಡ್ಡಿ, ರಮೇಶ ಕಂದಕೂರ, ಮಕ್ತುಮ ದೊಡ್ಡಮನಿ, ಕಾಮಧೇನು ಸಂಸ್ಥೆಯ ಬಸವರಾಜ ಕಟಗೇರಿ, ಅಶೋಕ ಮುತ್ತಿನಮಠ, ರಾಜು ಗೌಳಿ ಇನ್ನಿತರರು ಭಾಗವಸಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande