ಬಾಂಗ್ಲಾ ಗಡಿಯಲ್ಲಿ ಸೈನಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಾವಿತ್ರಿ ಚಿಗರಿ ಅವರಿಂದ ಧ್ವಜಾರೋಹಣ
ಗದಗ, 15 ಆಗಸ್ಟ್ (ಹಿ.ಸ.) : ಆ್ಯಂಕರ್ : ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ತಾಲೂಕಿನಲ್ಲಿ ನಿರ್ಮಿಸಿರುವ ಅಮೃತ ಸರೋವರ ಕಾಮಗಾರಿಯ ದಂಡೆಯ ಮೇಲೆ ೭೯ ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ತಾಲೂಕಿನ ಮಾರನಬಸರಿ, ಗೋಗೇರಿ ಮತ್ತು ಮುಶಿಗೇರಿ ಗ್ರಾಪಂ ವ್ಯಾಪ್ತಿಯ ಅಮೃತ ಸರೋವರದ ದಂಡ
ಪೋಟೋ


ಗದಗ, 15 ಆಗಸ್ಟ್ (ಹಿ.ಸ.) :

ಆ್ಯಂಕರ್ : ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ತಾಲೂಕಿನಲ್ಲಿ ನಿರ್ಮಿಸಿರುವ ಅಮೃತ ಸರೋವರ ಕಾಮಗಾರಿಯ ದಂಡೆಯ ಮೇಲೆ ೭೯ ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ತಾಲೂಕಿನ ಮಾರನಬಸರಿ, ಗೋಗೇರಿ ಮತ್ತು ಮುಶಿಗೇರಿ ಗ್ರಾಪಂ ವ್ಯಾಪ್ತಿಯ ಅಮೃತ ಸರೋವರದ ದಂಡೆಯ ಮೇಲೆ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆ ನೆರವೇರಿಸಲಾಯಿತು.

ಮಾರನಬಸರಿ ಅಮೃತ ಸರೋವರದ ದಂಡೆಯ ಮೇಲಿನ ಧ್ವಜಾರೋಹಣ ಕಾರ್ಯಕ್ರಮ ಗಮನ ಸೆಳೆಯಿತು.

ದೂರದ ಪಶ್ಚಿಮ ಬಂಗಾಳದಲ್ಲಿ ಭಾರತ-ಬಾಂಗ್ಲಾ ಗಡಿಯಲ್ಲಿ ಬಿಎಸ್ ಎಫ್ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿರುವ ತಾಲೂಕಿನ ಬೂದಿಹಾಳ ಗ್ರಾಮದ ಯೋಧೆ ಶ್ರೀಮತಿ ಸಾವಿತ್ರಿ ಮುತ್ತಪ್ಪ ಚಿಗರಿ ಅವರು ಅಮೃತ ಸರೋವರ ದಂಡೆಯ ಮೇಲಿನ ೭೯ ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿದ್ದು ವಿಶೇಷವಾಗಿತ್ತು.

ಬಿ.ಎ ಪದವಿ ಪಡೆದಿರುವ ಯೋಧೆ ಸಾವಿತ್ರಿ ಅವರು ಕಳೆದ ೧೨ ವರ್ಷಗಳಿಂದ ಬಾಂಗ್ಲಾ ಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಧ್ವಜಾರೋಹಣಕ್ಕಾಗಿ ಸ್ವಗ್ರಾಮ ಬೂದಿಹಾಳಕ್ಕೆ ಬಂದು ಮಾರನಬಸರಿ ಗ್ರಾಪಂ ಆಯೋಜಿಸುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸುತ್ತಿರುವುದು ವಿಶೇಷ.

ಧ್ವಜಾರೋಹಣ ಬಳಿಕ ನೆರದವರ ಉದ್ದೇಶಿಸಿ ಮಾತನಾಡಿದ ಯೋಧೆ ಸಾವಿತ್ರಿ ಅವರು, ದೇಶದ ಭದ್ರತೆಗಾಗಿ ನಾವೆಲ್ಲ ಶ್ರಮಿಸಬೇಕು. ದೇಶ ಸುಭದ್ರವಾಗಿದ್ದರೆ ನಾವೆಲ್ಲ ನಮ್ಮ ಮನೆಗಳಲ್ಲಿ ಸ್ವಚ್ಛಂದವಾಗಿರಲು ಸಾಧ್ಯ. ಮಾರನಬಸರಿ ಗ್ರಾಪಂ ಸಿಬ್ಬಂದಿ ನನ್ನನ್ನು ಗುರ್ತಿಸಿ ಧ್ವಜಾರೋಹಣಕ್ಕೆ ಪ್ರತಿ ವರ್ಷ ಆಹ್ವಾನಿಸುತ್ತಿರೋದು ಸಂತಸ ತರಿಸಿದೆ ಎಂದರು.

ಆಫರೇಷನ್ ಸಿಂಧೂರು ಕಾರ್ಯಾಚರಣೆಯಲ್ಲಿ ಮಹಿಳಾ ಸೈನಿಕರ ಪರಾಕ್ರಮ ನೆನಪು ಮಾಡಿಕೊಂಡ ಯೋಧೆ ಸಾವಿತ್ರಿ ಅವರು ಇನ್ನೂ ದೇಶಕ್ಕಾಗಿ ೦೮ ವರ್ಷ ಸೈನಿಕರಾಗಿ ಸೇವೆ ಸಲ್ಲಿಸುವ ಅಭಿಲಾಷೆ ಹೊಂದಿದ್ದಾರೆ.

ಯೋಧೆ ಸಾವಿತ್ರಿ ಮುತ್ತಪ್ಪ ಚಿಗರಿ ಅವರಿಗೆ ಅಮೃತ ಸರೋವರದ ದಂಡೆಯ ಮೇಲಿನ ಧ್ವಜಾರೋಹಣಕ್ಕೆ ಗ್ರಾಪಂ ವ್ಯಾಪ್ತಿಯ ಮಾಜಿ ಸೈನಿಕರಾದ ವಿರುಪಾಕ್ಷಪ್ಪ ಭಜಂತ್ರಿ, ರುದ್ರಪ್ಪ ಹಲಗೇರಿ, ಕಳಕವ್ವ ಹೊಸಮನಿ, ಶಿವಶರಣಪ್ಪ ಅಬ್ಬಿಗೇರಿ ದಿವಂಗತ ಆನಂದ ಗುತ್ಯಪ್ಪನವರ ಪತ್ನಿ ಶೋಭಾ ಗುತ್ಯಪ್ಪನವರ ಅವರು ಸಾಥ್ ನೀಡಿದರು.

ಮಾರನಬಸರಿ, ಮುಶಿಗೇರಿ ಮತ್ತು ಗೋಗೇರಿ ಗ್ರಾಪಂ ವ್ಯಾಪ್ತಿಯ ಅಮೃತ ಸರೋವರದ ದಂಡೆಯ ಮೇಲಿನ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮೂರು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಮಂಜುನಾಥ ಮೇಟಿ, ಶರಣಪ್ಪ ನರೇಗಲ್, ಎಸ್.ಆರ್.ಸಂಕನೂರ. ಗ್ರಾಮದ ಹಿರಿಯರು, ಶಾಲಾ ಮಕ್ಕಳು ಮತ್ತು ಮುಖ್ಯೋಪಾಧ್ಯಾಯರು, ಗ್ರಾಮದ ಯುವಕರು, ಗ್ರಾಪಂ ಮತ್ತು ನರೇಗಾ ಸಿಬ್ಬಂದಿ ವರ್ಗದವರೆಲ್ಲ ಜೊತೆಗೂಡಿ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande