ರಾಯಚೂರು ಮಹಾನಗರ ಪಾಲಿಕೆ : ಕೆಪಿಎಸ್‌ಸಿ ಮಾದರಿಯಲ್ಲಿ ಪರೀಕ್ಷೆ- ಆಯುಕ್ತ ಜುಬಿನ್ ಮೊಹಪಾತ್ರ
ರಾಯಚೂರು, 15 ಆಗಸ್ಟ್ (ಹಿ.ಸ.) : ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆಯಿಂದ ವಿವಿಧ ಹುದ್ದೆಗಳ ನೇಮಕಾತಿಗಾಗಿ ನಗರದ ಎಲ್.ವಿ.ಡಿ ಕಾಲೇಜಿನಲ್ಲಿ ಆಗಸ್ಟ್ 14ರಂದು ನಡೆದ ಲಿಖಿತ ಹಾಗೂ ಪ್ರಾಯೋಗಿಕ ಪರೀಕ್ಷಾ ಸ್ಥಳಕ್ಕೆ ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ಭೇಟಿ ನೀಡಿ ಪರಿಶ
ರಾಯಚೂರು ಮಹಾನಗರ ಪಾಲಿಕೆ : ಕೆಪಿಎಸ್‌ಸಿ ಮಾದರಿಯಲ್ಲಿ ಪರೀಕ್ಷೆ- ಆಯುಕ್ತ ಜುಬಿನ್ ಮೊಹಪಾತ್ರ


ರಾಯಚೂರು ಮಹಾನಗರ ಪಾಲಿಕೆ : ಕೆಪಿಎಸ್‌ಸಿ ಮಾದರಿಯಲ್ಲಿ ಪರೀಕ್ಷೆ- ಆಯುಕ್ತ ಜುಬಿನ್ ಮೊಹಪಾತ್ರ


ರಾಯಚೂರು, 15 ಆಗಸ್ಟ್ (ಹಿ.ಸ.) :

ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆಯಿಂದ ವಿವಿಧ ಹುದ್ದೆಗಳ ನೇಮಕಾತಿಗಾಗಿ ನಗರದ ಎಲ್.ವಿ.ಡಿ ಕಾಲೇಜಿನಲ್ಲಿ ಆಗಸ್ಟ್ 14ರಂದು ನಡೆದ ಲಿಖಿತ ಹಾಗೂ ಪ್ರಾಯೋಗಿಕ ಪರೀಕ್ಷಾ ಸ್ಥಳಕ್ಕೆ ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ಭೇಟಿ ನೀಡಿ ಪರಿಶೀಲಿಸಿದರು.

ರಾಯಚೂರು ನಗರಸಭೆಯು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದೆ. ಈ ಮಹಾನಗರ ಪಾಲಿಕೆಯು ಉತ್ತಮವಾಗಿ ಬೆಳೆಯಬೇಕು. ಇಲ್ಲಿನ ಆಡಳಿತ ವ್ಯವಸ್ಥೆಯು ಸರಿಯಾಗಿ ನಡೆಯಬೇಕು. ಈ ದಿಶೆಯಲ್ಲಿ ಮಾನವ ಸಂಪನ್ಮೂಲದ ಅವಶ್ಯಕತೆ ಇರುತ್ತದೆ. ಉತ್ತಮವಾದ ಮೆರಿಟ್ ಹೊಂದಿದ ಅರ್ಹ ಅಭ್ಯರ್ಥಿಗಳು ಆಯ್ಕೆಯಾಗಿ ಮಹಾನಗರ ಪಾಲಿಕೆಯ ಕಚೇರಿಯನ್ನು ಪ್ರವೇಶಿಸಿದಲ್ಲಿ ಮಹಾನಗರ ಪಾಲಿಕೆಯ ಆಡಳಿತ ಕೆಲಸವು ಸುಗಮವಾಗಿ ನಡೆಯಲಿದೆ. ಉತ್ತಮ ಅಧಿಕಾರಿ ಸಿಬ್ಬಂದಿ ಇದ್ದಲ್ಲಿ ಮಾತ್ರ ಉತ್ತಮ ಕಾರ್ಯವಾಗಲು ಸಾಧ್ಯವಿದೆ. ಆದ್ದರಿಂದ ಮಹಾನಗರ ಪಾಲಿಕೆಗೆ ಮಾನ್ಯ ಸರ್ಕಾರದಿಂದ ಹೊಸದಾಗಿ ಹುದ್ದೆಗಳನ್ನು ಸೃಜಿಸಲಾಗಿರುತ್ತದೆ.

ಈ ಹುದ್ದೆಗಳಲ್ಲಿ ಆಡಳಿತತ್ಮಾಕ ಹಿತದೃಷ್ಟಿಯಿಂದ ರಾಜ್ಯದಲ್ಲಿ ಪ್ರಥಮ ಭಾರಿಗೆ ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಸಂಸ್ಥೆಯ ಮೂಲಕ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ, ಪ್ರಕಟಣೆ ಹೊರಡಿಸಿ, ಪಾರದರ್ಶಕತೆಯಿಂದ ನಿಯಮಾನುಸಾರ ಪರಿಶೀಲಿಸಿ, ಅರ್ಹ ಅಭ್ಯರ್ಥಿಗಳ ಆಯ್ಕೆಪಟ್ಟಿಯನ್ನು ಮಹಾನಗರ ಪಾಲಿಕೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು.

ಅಭ್ಯರ್ಥಿಗಳ ಆಯ್ಕೆಯು ಪಾರದರ್ಶಕತೆಯಿಂದ ಕೂಡಿರಬೇಕು ಎನ್ನುವ ಉದ್ದೇಶದಿಂದಾಗಿ ಕೆಪಿಎಸ್‌ಸಿಯು ನಡೆಸುವ ಪರೀಕ್ಷಾ ಮಾದರಿಯಲ್ಲಿ ಮಹಾನಗರ ಪಾಲಿಕೆಯಿಂದ, ಆಯ್ಕೆ ಪಟ್ಟಿಯಲಿರುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ಹಾಗೂ ಪ್ರಾಯೋಗಿಕ ಪರೀಕ್ಷೆಯನ್ನು ಎಲ್.ವಿ.ಡಿ ಕಾಲೇಜ್ ರಾಯಚೂರನಲ್ಲಿ ಪಾರದರ್ಶಕತೆ ಹಾಗೂ ಶಾಂತಿಯುತವಾಗಿ ನಡೆಸಲಾಗುತ್ತಿದೆ ಎಂದು ಇದೆ ವೇಳೆ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande