ರಾಜ್ಯದ ಪ್ರಗತಿಯಲ್ಲಿ ಉತ್ಪಾದಕ-ಸೈನಿಕ ವರ್ಗದ ಕೊಡುಗೆ ಶ್ಲಾಘನೀಯ : ಸಿದ್ದರಾಮಯ್ಯ
ಬೆಂಗಳೂರು, 15 ಆಗಸ್ಟ್ (ಹಿ.ಸ.) : ಆ್ಯಂಕರ್ : 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದೇಶ ನಿರ್ಮಾಣದಲ್ಲಿ ಉತ್ಪಾದಕ ವರ್ಗ ಮತ್ತು ದೇಶ ರಕ್ಷಣೆಯಲ್ಲಿ ಸೈನಿಕ ವರ್ಗದ ಬಲಿದಾನಗಳನ್ನು ಶ್ಲಾ
Cm


ಬೆಂಗಳೂರು, 15 ಆಗಸ್ಟ್ (ಹಿ.ಸ.) :

ಆ್ಯಂಕರ್ : 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದೇಶ ನಿರ್ಮಾಣದಲ್ಲಿ ಉತ್ಪಾದಕ ವರ್ಗ ಮತ್ತು ದೇಶ ರಕ್ಷಣೆಯಲ್ಲಿ ಸೈನಿಕ ವರ್ಗದ ಬಲಿದಾನಗಳನ್ನು ಶ್ಲಾಘಿಸಿದರು. ಅಸಮಾನ ಸಂಪತ್ತಿನ ಹಂಚಿಕೆಯನ್ನು ವಿರೋಧಿಸಿ, ಗ್ಯಾರಂಟಿ ಯೋಜನೆಗಳು ಸಾಮಾಜಿಕ ಸಮಾನತೆ ಸಾಧಿಸಲು ಸಹಾಯವಾಗುತ್ತಿವೆ ಎಂದು ಹೇಳಿದರು.

ಮುಖ್ಯಮಂತ್ರಿ ಭಾಷಣದ ಪ್ರಮುಖ ಅಂಶಗಳು:

ಗ್ಯಾರಂಟಿ ಯೋಜನೆಗಳು: ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಸೇರಿದಂತೆ 96,000 ಕೋಟಿ ರೂ. ವೆಚ್ಚ, ಮಹಿಳಾ ಕಾರ್ಮಿಕ ಪಾಲ್ಗೊಳ್ಳುವಿಕೆ 23% ಹೆಚ್ಚಳ.

ಆರ್ಥಿಕ ಸಾಧನೆ: ತಲಾ ಆದಾಯ 2013-14ರ 1.01 ಲಕ್ಷ ರೂ.ಯಿಂದ 2024-25ರಲ್ಲಿ 2.04 ಲಕ್ಷ ರೂ.ಗೆ ಏರಿಕೆ.

ಕೃಷಿ ವಲಯ: 2025-26ಕ್ಕೆ 51,339 ಕೋಟಿ ರೂ. ಅನುದಾನ; ಎಪಿಎಂಸಿ ಆವಕ 164 ಲಕ್ಷ ಮೆಟ್ರಿಕ್ ಟನ್ – 447% ಹೆಚ್ಚಳ.

ಕೈಗಾರಿಕಾ ಹೂಡಿಕೆ: 10 ಲಕ್ಷ ಕೋಟಿ ರೂ. ಗಿಂತ ಹೆಚ್ಚು ಹೂಡಿಕೆ ಆಕರ್ಷಣೆ; ವಿದೇಶಿ ಹೂಡಿಕೆಯಲ್ಲಿ 2ನೇ ಸ್ಥಾನ.

ಶಿಕ್ಷಣ: 65,000 ಕೋಟಿ ರೂ. ವಿನಿಯೋಗ; 500 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳ ಸ್ಥಾಪನೆ; 53 ಲಕ್ಷ ಮಕ್ಕಳಿಗೆ ಪೌಷ್ಟಿಕ ಆಹಾರ.

ಆರೋಗ್ಯ: ತಾಯಂದಿರ ಮರಣ ಪ್ರಮಾಣ 26% ಕಡಿತ; ಗೃಹ ಆರೋಗ್ಯ ಸೇವೆ ವಿಸ್ತರಣೆ; ಕ್ಯಾನ್ಸರ್ ಆರೈಕೆ ಕೇಂದ್ರಗಳ ಸ್ಥಾಪನೆ.

ಮೂಲಸೌಕರ್ಯ: ಬೆಂಗಳೂರು ಅಭಿವೃದ್ಧಿಗೆ ₹1.35 ಲಕ್ಷ ಕೋಟಿ ಯೋಜನೆಗಳು; ಗ್ರಾಮೀಣ-ನಗರ ರಸ್ತೆ ಅಭಿವೃದ್ಧಿಗೆ ₹8,000 ಕೋಟಿ ಅನುದಾನ.

ನವೀನ ತಂತ್ರಜ್ಞಾನ: ದೇಶದ ಮೊದಲ ಕ್ವಾಂಟಮ್ ಕಂಪ್ಯೂಟರ್ ಕರ್ನಾಟಕದಲ್ಲೇ; ಕೃತಕ ಬುದ್ಧಿಮತ್ತೆ, ನವೀಕರಿಸಬಹುದಾದ ಇಂಧನ, ಬಯೋಟೆಕ್ ಕ್ಷೇತ್ರಗಳಲ್ಲಿ ಮುಂಚೂಣಿ.

ರೈತನ ಮಗ ವಿಜ್ಞಾನಿಯಾಗಬೇಕು, ನೇಕಾರನ ಮಗಳು ಉದ್ಯಮಿಯಾಗಬೇಕು, ಪ್ರತಿಯೊಂದು ಮಗುವಿಗೂ ಭವಿಷ್ಯ ತನ್ನ ಕೈಯಲ್ಲಿದೆ ಎಂಬ ನಂಬಿಕೆ ಬರಬೇಕಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande