ಧರ್ಮಸ್ಥಳ ಘಟನೆಗಳ ಬಗ್ಗೆ ನಿಸ್ಪಕ್ಷಪಾತ ತನಿಖೆಗೆ ವಿ.ಆರ್.ಸುದರ್ಶನ್ ಒತ್ತಾಯ
ಧರ್ಮಸ್ಥಳ ಘಟನೆಗಳ ಬಗ್ಗೆ ನಿಸ್ಪಕ್ಷಪಾತ ತನಿಖೆಗೆ ವಿ.ಆರ್.ಸುದರ್ಶನ್ ಒತ್ತಾಯ
ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಶುಕ್ರವಾರ ಕೋಲಾರ ತಾಲ್ಲೂಕಿನ ವೇಮಗಲ್ ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಂಸ್ಥೆ ಕಚೇರಿಗೆ ಭೇಟಿ ನೀಡಿ ಮಾತನಾಡಿದರು.


ಕೋಲಾರ, ೧೫ ಆಗಸ್ಟ್ (ಹಿ.ಸ) :

ಆ್ಯಂಕರ್ : ಧರ್ಮಸ್ಥಳದ ಪಾವಿತ್ರö್ಯತೆ, ಧಾರ್ಮಿಕ ಭಾವನೆ,ಅವರು ಸಾಮಾಜಿಕ ಚಟುವಟಿಕೆಗಳಿಗೆ ನೀಡುತ್ತಿರುವ ಮಹತ್ವಕ್ಕೆ ಧಕ್ಕೆ ಬಾರದ ರೀತಿಯಲ್ಲಿ ತನಿಖೆ ಸಾಗಬೇಕು ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಪ್ರತಿಪಾದಿಸಿದರು.

ಶುಕ್ರವಾರ ತಾಲ್ಲೂಕಿನ ವೇಮಗಲ್ ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಂಸ್ಥೆ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಅವರು, ಧರ್ಮಸ್ಥಳ ಮತ್ತು ಮಂಜುನಾಥಸ್ವಾಮಿ ಸನ್ನಿಧಿಯ ಕುರಿತು ಜನರಲ್ಲಿ ಅತ್ಯಂತ ಪವಿತ್ರ,ಭಕ್ತಿಯ ಭಾವನೆ ಇದೆ, ಪೂಜ್ಯ ಹೆಗ್ಗಡೆಯವರು ಮತ್ತು ಈ ಯೋಜನೆ ಮಾಡುತ್ತಿರುವ ಸಾಮಾಜಿಕ ಚಟುವಟಿಕೆಗಳು ವಿಶ್ವಮಾನ್ಯವಾಗಿವೆ.ಸಂವಿಧಾನ,ಕಾನೂನು ಅದರ ಪಾಡಿಗೆ ತನಿಖೆ ಮಾಡುತ್ತದೆ ಆದರೆ ಈ ಸಂದರ್ಭದಲ್ಲಿ ಕ್ಷೇತ್ರದ ಪಾವಿತ್ರö್ಯತೆ ಧಕ್ಕೆ ಬರಬಾರದು ಎಂದ ಅವರು, ಒಂದು ಸರ್ಕಾರ, ಬ್ಯಾಂಕ್ ಮಾಡಬೇಕಾದ ಕೆಲಸವನ್ನು ಧರ್ಮಸ್ಥಳ ಹೆಗಡೆಯವರು ಮಾಡುತ್ತಿದ್ದಾರೆ.

ಸ್ತಿ ಶಕ್ತಿ ಸಂಘಗಳಿಗೆ ಸಾಲ ವಿತರಣೆ, ಕೆರೆಪುನಶ್ಚೇತನ, ಅನಾಥರಿಗೆ ಮಾಸಾಶನ,ಶಾಲೆ,ದೇವಾಲಯ,ಮಸೀದಿಗಳಿಗೆ ನೆರವು ಹೀಗೆ ಹಲವಾರು ಸಾಮಾಜಿಕ ಕಾರ್ಯಗಳಿಗೆ ಸಾಟಿಯೇ ಇಲ್ಲ ಎಂದ ಅವರು, ಇಡೀ ರಾಜ್ಯದಲ್ಲಿ ಅವರ ಸಾಮಾಜಿಕ ಸೇವೆ ಸಾಗಿದೆ.ಇದೀಗ ಅಲ್ಲಿ ನಡೆಯುತ್ತಿರುವ ಘಟನೆಗಳು ನೋವು,ಆತಂಕವು0ಟು ಮಾಡುತ್ತಿದೆ, ಇಂತಹ ಸಂದರ್ಭದಲ್ಲಿ ಪೂಜ್ಯ ಹೆಗ್ಗಡೆಯವರಿಗೆ ನೈತಿಕ ಸ್ಥೆöÊರ್ಯ ತುಂಬಿ ಜತೆಗಿರಬೇಕು ಎಂದ ಅವರು, ಸರ್ವಧರ್ಮಸಮಾನತೆ, ಐಕ್ಯತೆಗೆ ಧಕ್ಕೆ ಬಾರದಿರಲಿ ಎಂದರು.

ಭಾರತ ಸರ್ವಧರ್ಮಗಳ ಸಮನ್ವಯತೆಗೆ ಸಾಕ್ಷಿಯಾಗಿದೆ, ಅದರಲ್ಲೂ ಹಿಂದೂ ಧರ್ಮದ ಮೇಲೆ ಬಹುದೊಡ್ಡ ಜವಾಬ್ದಾರಿಯೂ ಇದೆ, ಧರ್ಮ ಉಳಿಸಿಕೊಳ್ಳುವುದರ ಜತೆಗೆ ಇತರೆ ಧರ್ಮದವರನ್ನು ಜತೆಗೆ ಕರೆದೊಯ್ಯುವ ಕೆಲಸವಾಗಲಿ. ಸದರಿ ಧರ್ಮಸ್ಥಳದ ತನಿಖೆ ಶೀಘ್ರ ಮುಗಿಸಬೇಕು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ಶೀಘ್ರ ಗೊಂದಲಗಳಿಗೆ ಕೊನೆಯಾಡಬೇಕು ಎಂದು ಮನವಿ ಮಾಡಿದ ಅವರು, ಮಂಜುನಾಥಸ್ವಾಮಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ, ಭಾರತ ಮಾತ್ರವಲ್ಲ, ವಿಶ್ವದಲ್ಲಿ ಶಾಂತಿ,ಸೌಹಾರ್ದತೆ ನೆಲಸಲಿ ಎಂದು ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್,ಮುಖ0ಡ ಮಂಜುನಾಥ್, ಬಿ.ನಾಗರಾಜ್,ಸುರೇಶ್, ಮಂಜುಳಾ,ಶಶಿಕಲಾ ನಾಗೇಶ್,ದೀಪ,ವನಿತ,ರಾಜಣ್ಣ, ನಟರಾಜ್, ಶ್ರೀನಿವಾಸ್, ಯೋಜನೆಯ ಹೇಮಂತ್ ಮತ್ತಿತರರಿದ್ದರು.

ಚಿತ್ರ : ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಶುಕ್ರವಾರ ಕೋಲಾರ ತಾಲ್ಲೂಕಿನ ವೇಮಗಲ್ ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಂಸ್ಥೆ ಕಚೇರಿಗೆ ಭೇಟಿ ನೀಡಿ ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande