ಬಳ್ಳಾರಿ ಕ್ರಿಶ್ಚಿಯನ್ ಅಸೆಂಬ್ಲಿ ಗಾಸ್ಪೆಲ್ ಚರ್ಚ್‍ 81ನೇ ವಾರ್ಷಿಕೋತ್ಸವ
ಬಳ್ಳಾರಿ, 15 ಆಗಸ್ಟ್ (ಹಿ.ಸ.) : ಆ್ಯಂಕರ್ : ಬಳ್ಳಾರಿಯ ಕೋಟೆ ಪ್ರದೇಶದಲ್ಲಿರುವ ಕ್ರಿಶ್ಚಿಯನ್ ಅಸೆಂಬ್ಲಿ ಗಾಸ್ಪೆಲ್ ಸೆಂಟರ್ ಚರ್ಚ್‍ನ 81ನೇ (1944-2025) ವಾರ್ಷಿಕೋತ್ಸವವನ್ನು ಶುಕ್ರವಾರ ಆಚರಿಸಲಾಯಿತು. ಅಸೆಂಬ್ಲಿ ಗಾಸ್ಪಲ್ ಚರ್ಚ್‍ನ ಪಾಸ್ಟರ್ ಡೇವಿಡ್ ನೆರೆಲ್ಲ ಅವರು, ಚರ್ಚ್ ಅನ್ನು 1944ರಲ್ಲ
ಬಳ್ಳಾರಿ : ಕ್ರಿಶ್ಚಿಯನ್ ಅಸೆಂಬ್ಲಿ ಗಾಸ್ಪೆಲ್ ಚರ್ಚ್‍ 81ನೇ ವಾರ್ಷಿಕೋತ್ಸವ


ಬಳ್ಳಾರಿ, 15 ಆಗಸ್ಟ್ (ಹಿ.ಸ.) :

ಆ್ಯಂಕರ್ : ಬಳ್ಳಾರಿಯ ಕೋಟೆ ಪ್ರದೇಶದಲ್ಲಿರುವ ಕ್ರಿಶ್ಚಿಯನ್ ಅಸೆಂಬ್ಲಿ ಗಾಸ್ಪೆಲ್ ಸೆಂಟರ್ ಚರ್ಚ್‍ನ 81ನೇ (1944-2025) ವಾರ್ಷಿಕೋತ್ಸವವನ್ನು ಶುಕ್ರವಾರ ಆಚರಿಸಲಾಯಿತು.

ಅಸೆಂಬ್ಲಿ ಗಾಸ್ಪಲ್ ಚರ್ಚ್‍ನ ಪಾಸ್ಟರ್ ಡೇವಿಡ್ ನೆರೆಲ್ಲ ಅವರು, ಚರ್ಚ್ ಅನ್ನು 1944ರಲ್ಲಿ ಪಾಸ್ಟರ್ ಎಸ್. ಪ್ರಭುದಾಸ್ ಅವರು ಪ್ರಾರಂಭಿಸಿದ್ದಾರೆ. 140 ರಿಂದ 150 ಕ್ರೈಸ್ತ ಕುಟುಂಬಗಳು ಈ ಚರ್ಚ್‍ನಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂಧರು.

ಈ ಚರ್ಚ್ ಅಧೀನದಲ್ಲಿ ಬಳ್ಳಾರಿ ನಗರದ 100 ಕಿ.ಮೀ ಅ0ತರದಲ್ಲಿ 19 ಚರ್ಚ್‍ಗಳು ಕಾರ್ಯನಿರ್ವಹಿಸುತ್ತಿವೆ.

19 ಚರ್ಚ್‍ಗಳನ್ನು 13 ಪಾಸ್ಟರ್‍ಗಳು ನಿರ್ವಹಿಸುತ್ತಿದ್ದಾರೆ ಎಂದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande