ಪಾಟೀಲ ಪಬ್ಲಿಕ್ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನ ಆಚರಣೆ
ವಿಜಯಪುರ, 15 ಆಗಸ್ಟ್ (ಹಿ.ಸ.) : ಆ್ಯಂಕರ್ : ವಿಜಯಪುರ‌ ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಶುಕ್ರವಾರ ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೂಸೇನಾಪಡೆಯ ನಿವೃತ್ತ ಸುಬೇದಾರ ವಿಶ್ವನಾಥ ಹಿ
ಆಚರಣೆ


ವಿಜಯಪುರ, 15 ಆಗಸ್ಟ್ (ಹಿ.ಸ.) :

ಆ್ಯಂಕರ್ : ವಿಜಯಪುರ‌ ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಶುಕ್ರವಾರ ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೂಸೇನಾಪಡೆಯ ನಿವೃತ್ತ ಸುಬೇದಾರ ವಿಶ್ವನಾಥ ಹಿರೇಮಠ ಅವರು ಧ್ವಜಾರೋಹಣ ನೆರವೇರಿಸಿದರು.

ಬಳಿಕ ಶಾಲೆಯ ನಾನಾ ಸದನಗಳ ವಿದ್ಯಾರ್ಥಿಗಳ ಪದ ಕವಾಯತ್ ಸ್ವೀಕರಿಸಿ ಮಾತನಾಡಿದ ಅವರು, ತಮ್ಮ ಸೇವಾವಧಿಯಲ್ಲಿ ನಡೆದ ಸೇನಾ ಕಾರ್ಯಾಚರಣೆ, ಯೋಧರ ತ್ಯಾಗ, ಬಲಿದಾನಗಳ ಕುರಿತು ವಿವರಿಸಿದರು. ಅಲ್ಲದೇ, ಮಾಜಿ ರಾಷ್ಟ್ರಪತಿ ಡಾ. ಎ. ಪಿ. ಜೆ ಅಬ್ದಲ್ ಕಲಾಂ ಅವರಂಥ ಮಹನೀಯರೊಂದಿಗೆ ಪೃಥ್ವಿ ಮಿಸೈಲ್ಸ ಪರಮಾಣು ಕ್ಷಿಪಣಿಯ ಕಾರ್ಯಾಚರಣೆಯಲ್ಲಿ ಎರಡು ವರ್ಷಗಳ ಕಾಲ ಮಾಡಿದ ಕೆಲಸವನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಡಾ. ದಾನೀಶ್ ಚೌದರಿ, ಶಾಲೆ ಪ್ರಾಚರ್ಯ ಡಾ. ಶೈಜು ಕೆ. ನಾಯರ, ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ ಸೇರಿದಂತೆ, ವಿದ್ಯಾರ್ಥಿಗಳ ಪಾಲಕರು, ಶಾಲಾ ಸಿಬ್ಬಂಧಿ ಉಪಸ್ಥಿತರಿದ್ದರು.

ಒಂದು ಮತ್ತು ಎರಡನೇ ತರಗತಿಯ ಮಕ್ಕಳು ಐ ಲವ್ ಇಂಡಿಯಾ ಆಕೃತಿಯಲ್ಲಿ ನಿಂತು ಪ್ರೇಕ್ಷಕರ ಗಮನ ಸೆಳೆದರು.

ಖುಷಿ ಬೆಹತಿ ಮತ್ತು ಹರ್ಷ ಭಗೋತ್ರಾ ನಿರೂಪಿಸಿದರು. ಮನಸ್ವಿ ಗುಡ್ಡೊಡಗಿ ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande