ವಿಜಯಪುರ, 14 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ವ್ಯಕ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ, ಬೆಂಗಳೂರು ಸಂಯುಕ್ತಾಶ್ರಯದಲ್ಲಿ 2025 ನೇ ಸಾಲಿನ ವಿದೇಶೀಗಳಲ್ಲಿ ಅಧ್ಯಯನ ಮೇಳವನ್ನು ಬೆಂಗಳೂರಿನ ಲಲಿತ್ ಅಶೋಕ್ ಹೊಟೇಲ್ ಆಗಸ್ಟ್ 17ರ ಬೆಳಿಗ್ಗೆ 10ಗಂಟೆಯಿ0ದ ಸಂಜೆ 5ಗಂಟೆಯವರಗೆ ಆಯೋಜಿಸಲಾಗಿದೆ ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಶಿವಕಾಂತಮ್ಮ (ಕಾಂತಾ) ನಾಯಕ ಹೇಳಿದರು.
ಗುರುವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಸಭಾಂಗಣದಲ್ಲಿ ಸದರಿ ಮೇಳದ ಪೋಸ್ಟರ್‌ಗಳನ್ನು ಬೀಡುಗಡೆ ಮಾಡಿ ಮಾತನಾಡಿದ ಅವರು ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್‌ಡಮ್, ಅಮೆರಿಕಾ, ಐರ್ಲೆಂಡ್, ನ್ಯೂಜಿಲೆಂಡ್ ಮತ್ತು ಮಧ್ಯಪ್ರಾಚ್ಯ ಸೇರಿದಂತೆ ನಾನಾ ವಿಶ್ವ ವಿದ್ಯಾಲಯಗಳ ಪ್ರತಿನಿಧಿಗಳು ಮೇಳದಲ್ಲಿ ಭಾಗವಹಿಸಲಿದ್ದು, ಒನ್-ಆನ್-ಒನ್ ನೆಷನ್, ಸ್ಪಾಟ್ ವಿದ್ಯಾರ್ಥಿ ವೇತನಗಳು ಮತ್ತು ಅರ್ಹತಾ ಮೌಲ್ಯ ಮಾಪನಗಳು, ವಿಸಾ ಪ್ರಕ್ರಿಯೆ, ಹಣಕಾಸು ಯೋಜನೆ, ಆರೋಗ್ಯ ವಿಮೆ, ಭಾಷಾ ಪ್ರಾವಿಣ್ಯತೆ ಹಾಗೂ ಇತರೆ ಮಾರ್ಗದರ್ಶನಗಳನ್ನು ಈ ಮೇಳದಲ್ಲಿ ನೀಡಲಾಗುತ್ತದೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವ ಕನಸುಗಳನ್ನು ಕಟ್ಟಿಕೊಂಡಿರುವ ವಿದ್ಯಾರ್ಥಿಗಳಿಗೆ ಪೋಸ್ಟರ್‌ಗಳಲ್ಲಿ ನೀಡಿರುವ ಕ್ಯೂಆರ್. ಕೋಡ್ ಬಳಕೆ ಮಾಡಿ ನೋಂದಣಿ ಮಾಡಿಕೊಳ್ಳುವಂತೆ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಿಷಿ ಆನಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ಬಿ. ನಿಂಬರಗಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು (ಪ್ರಭಾರ) ಮಹೇಶ ಜೆ. ಮಾಳವಾಡೇಕರ, ಸಹಾಯಕ ನಿರ್ದೇಶಕರು ಮಹಾಂತೇಶ, ಎನ್. ಬಾಗೇವಾಡಿ ಹಾಗೂ ನಾನಾ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande