ರಾಯಚೂರು, 14 ಆಗಸ್ಟ್ (ಹಿ.ಸ.) :
ಆ್ಯಂಕರ್ : ಪ್ರತಿ ವರ್ಷದಂತೆ ಈ ವರ್ಷವು ಕೂಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನಲ್ಲಿ ಪುರುಷರ ಹಾಗೂ ಮಹಿಳೆಯರಿಗಾಗಿ ನಾನಾ ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಆಯ್ಕೆ ಪ್ರಕ್ರಿಯೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಕ್ಯೂ ಆರ್ ಕೋಡ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಆಗಸ್ಟ್ 19ರಂದು ಮಾನ್ವಿ ತಾಲೂಕು ಮಟ್ಟದ ಕ್ರೀಡಾಕೂಟವು ಮಾನವಿ ತಾಲ್ಲೂಕು ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದು, ಸಂಘಟಿಕರಾದ ಮೆಹಬೂಬ್ ಮೊಬೈಲ್ ಸಂಖ್ಯೆ: 9611181539ಗೆ ವರದಿ ಮಾಡಿಕೊಳ್ಳಬಹುದಾಗಿದೆ.
ಆಗಸ್ಟ್ 20ರಂದು ದೇವದುರ್ಗ ತಾಲೂಕು ಮಟ್ಟದ ಕ್ರೀಡಾಕೂಟವು ಅರಕೆರಾ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ, ಮಸ್ಕಿ ತಾಲೂಕು ಮಟ್ಟದ ಕ್ರೀಡಾಕೂಟವು ಮಸ್ಕಿ ಕೆ.ಪಿ.ಎಸ್ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದು, ಸಂಘಟಿಕರಾದ ಸಾಬಣ್ಣ ಮೊಬೈಲ್ ಸಂಖ್ಯೆ: 9731493679, ಲಕ್ಷ್ಮಣ 9900859864ಗೆ ವರದಿ ಮಾಡಿಕೊಳ್ಳಬಹುದಾಗಿದೆ.
ಆಗಸ್ಟ್ 21ರಂದು ರಾಯಚೂರು ತಾಲೂಕು ಮಟ್ಟದ ಕ್ರೀಡಾಕೂಟವು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದು, ಸಂಘಟಿಕರಾದ ವೆಂಕಟೇಶ್ ಮೊಬೈಲ್ ಸಂಖ್ಯೆ: 8310222353, ಶ್ರೀನಿವಾಸ ಮೊಬೈಲ್ ಸಂಖ್ಯೆ: 9632696453ಗೆ ವರದಿ ಮಾಡಿಕೊಳ್ಳಬಹುದಾಗಿದೆ.
ಆಗಸ್ಟ್ 23 ರಂದು ಸಿಂಧನೂರು ತಾಲೂಕು ಮಟ್ಟದ ಕ್ರೀಡಾಕೂಟವು ಸಿಂಧನೂರು ತಾಲ್ಲೂಕು ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದು, ಸಂಘಟಿಕರಾದ ಸೋಮಲಿಂಗಪ್ಪ ಮೊಬೈಲ್ ಸಂಖ್ಯೆ: 9448418871ಗೆ ವರದಿ ಮಾಡಿಕೊಳ್ಳಬಹುದಾಗಿದೆ.
ಆಗಸ್ಟ್ 24 ರಂದು ಸಿರವಾರ ತಾಲೂಕು ಮಟ್ಟದ ಕ್ರೀಡಾಕೂಟವು ಸಿರವಾರ ಹೋಲಿ ಕ್ರಾಸ್ ಪ್ರೌಢ ಶಾಲೆಯ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದು, ಸಂಘಟಿಕರಾದ ಮೆಹಬೂಬ್ ಪಾಷ ಮೊಬೈಲ್ ಸಂಖ್ಯೆ: 9980472040ಗೆ ವರದಿ ಮಾಡಿಕೊಳ್ಳಬಹುದಾಗಿದೆ.
ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವು ಆಗಸ್ಟ್ 31ರಿಂದ ಸೆಪ್ಟಂಬರ್ 01ವರೆಗೆ ಮಹಾತ್ಮಗಾಂಧಿ ಜಿಲ್ಲಾ ಹೊರಾಂಗಣ ಕ್ರೀಡಾಂಗಣ ರಾಯಚೂರಿನಲ್ಲಿ ಆಯೋಜನೆ ಮಾಡಲಾಗಿದ್ದು, ಸಂಘಟಿಕರಾದ ವೆಂಕಟೇಶ್ ಮೊಬೈಲ್ ಸಂಖ್ಯೆ: 8310222353, ಶ್ರೀನಿವಾಸ ಮೊಬೈಲ್ ಸಂಖ್ಯೆ: 9632696453ಗೆ ವರದಿ ಮಾಡಿಕೊಳ್ಳಬಹುದಾಗಿದೆ.
ಷರತ್ತುಗಳು: ಆಯಾ ತಾಲೂಕಿನ ಕ್ರೀಡಾಪಟುಗಳು ಆಯಾ ತಾಲೂಕಿನಲ್ಲಿ ಮಾತ್ರ ಭಾಗವಹಿಸತಕ್ಕದ್ದು. ಕ್ರೀಡಾಪಟುಗಳು ಕ್ರೀಡಾಕೂಟದ ಆನ್‍ಲೈನ್ ಅಥವಾ ಕ್ಯೂ-ಆರ್ ಕೋಡ್ ಮೂಲಕ ನೋಂದಣಿ ಮಾಡಿಕೊಳ್ಳತಕ್ಕದ್ದು.
ತಾಲ್ಲೂಕ ಮಟ್ಟದ ಆಯ್ಕೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಯಾವುದೇ ರೀತಿಯ ಪ್ರಯಾಣ ಭತ್ಯೆ ಹಾಗೂ ದಿನಭತ್ಯೆ ನೀಡುವುದಿಲ್ಲ. ತಾಲ್ಲೂಕು ಮಟ್ಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟದಲ್ಲಿ ಭಾಗವಹಿಸುವ ಪುರುಷ ಕ್ರೀಡಾಪಟುಗಳಿಗೆ ಮಾತ್ರ ಪ್ರಯಾಣ ಭತ್ಯೆ ಹಾಗೂ ದಿನಭತ್ಯೆಯನ್ನು ಹಾಗೂ ಮಹಿಳಾ ಕ್ರೀಡಾಪಟುಗಳಿಗೆ ದಿನಭತ್ಯೆಯನ್ನು ಖಜಾನೆ-2ರ ಮೂಲಕ ಕ್ರೀಡಾಪಟುಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು.
ಪ್ರತೀ ವಿಜೇತ ಕ್ರೀಡಾಪಟುಗಳು ಆಧಾರ್ ಕಾರ್ಡ್ ವೈಯಕ್ತಿಕ ಹಾಗೂ ಗುಂಪು ತಂಡ ವಿವರ ಹಾಗೂ ತಂಡದ ನಾಯಕರ ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಹಾಗೂ ಮೊಬೈಲ್ ನಂಬರ್ ಅನ್ನು ಕಡ್ಡಾಯ ನೋಂದಣಿ ರಜಿಸ್ಟರ್‍ನಲ್ಲಿ ಒದಗಿಸತಕ್ಕದ್ದು, ಸಲ್ಲಿಸದೇ ಇರುವ ಕ್ರೀಡಾಪಟುಗಳು ಪ್ರಯಾಭತ್ಯೆ ಅಥವಾ ದಿನಭತ್ಯೆ ಪಾವತಿ ಮಾಡಲಾಗುವುದಿಲ್ಲ. ಅದಕ್ಕೆ ತಾವೇ ನೇರ ಹೊಣೆಗಾರರು. ಯಾವುದೇ ರೀತಿಯ ನಗದು ಹಣ ನೀಡುವುದಿಲ್ಲ.
ಕ್ರೀಡಾಕೂಟ ನಿಗದಿಪಡಿಸಿದ ದಿನಾಂಕ & ಸಮಯದ ಮುಂಚಿತವಾಗಿ ಆನ್‍ಲೈನ್ ಲಿಂಕ್: https://dasaracmcup-2025.etrpindia.com/KA-sports/ ನಲ್ಲಿ ಅಥವಾ ಕ್ಯೂ ಆರ್ ಕೋಡ್‍ನಲ್ಲಿ ಆನ್‍ಲೈನ್ ಮೂಲಕವೇ ಕಡ್ಡಾಯ ನೋಂದಣಿ ಆಗಿರತಕ್ಕದ್ದು. ಆಫ್‍ಲೈನ್ ನೋಂದಣಿಗೆ ಅವಕಾಶವಿರುವುದಿಲ್ಲ. ಕ್ರೀಡೆಗಳ ಆರಂಭಗೊಂಡ ನಂತರ ನೋಂದಣಿಗೆ ಅವಕಾಶವಿರುವುದಿಲ್ಲ. ಸರ್ಕಾರದ ಶಕ್ತಿ ಯೋಜನೆ ಜಾರಿಯಲ್ಲಿರುವುದರಿಂದ ಮಹಿಳಾ ಕ್ರೀಡಾಪಟುಗಳಿಗೆ ಪ್ರಯಾಣಭತ್ಯೆಯನ್ನು ಪಾವತಿ ಮಾಡಲಾಗುವುದಿಲ್ಲ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್