ವಿಜಯಪುರ, 14 ಆಗಸ್ಟ್ (ಹಿ.ಸ.) :
ಆ್ಯಂಕರ್ : ತಮಗೆ ಸ್ಥಾನ ಕಡಿಮೆ ಬಂದರೆ ಇವಿಎಂ ಬಗ್ಗೆ ಅಪಸ್ವರ ಮಾಡುತ್ತಾರೆ. ಇನ್ನು ಬೇರೆ ಪಕ್ಷಗಳಿಗೆ ಹೆಚ್ಚು ಮತಬಂದರೆ ಮತಗಳ್ಳತನ ಎನ್ನುವುದು ಕಾಂಗ್ರೆಸಿನ ಇತ್ತೀಚಿನ ಟ್ರೆಂಡ್ ಆಗಿದೆ ಎಂದು ಬಾಗಲಕೋಟೆಯ ಮಾಜಿ ಶಾಸಕ ರಾಜಶೇಖರ ಶೀಲವಂತ ಟೀಕಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿದ ಅವರು, ರಾಹುಲ್ ಗಾಂಧಿಯವರು ಬೆಂಗಳೂರಿನಲ್ಲಿ ಮತಗಳ್ಳತನದ ಬಗ್ಗೆ ಆರೋಪ ಮಾಡಿದ್ದಾರೆ. ಆದರೆ ಅವರು ಹೇಳಿದ್ದು ಎಲ್ಲವೂ ಹುಸಿಯಾಗಿದೆ. ಇದು ಕಾಂಗ್ರೆಸ್‌ನ ಮಾನಸಿಕ ಸ್ಥಿತಿ ಬಗ್ಗೆ ಹಿಡಿದ ಕೈಗನ್ನಡಿ ಆಗಿದೆ ಎಂದಿದ್ದಾರೆ. 2018ರ ಬಾದಾಮಿ ಕ್ಷೇತ್ರದ ವಿಧಾನ ಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆಲ್ಲುವುದು ಕಷ್ಟವಾಗಿದ್ದಾಗ ನಾನು ಹಾಗೂ ಚಿಮ್ಮನಕಟ್ಟಿಯವರು ಸೇರಿ ಸಾಲ ಮಾಡಿ 3000 ವೋಟ್ ಖರೀದಿಸಿದ್ದೇವು ಎಂಬ ಆಘಾತಕಾರಿ ಅಂಶವನ್ನು ಸಿ.ಎಂ. ಇಬ್ರಾಹಿಂ ತಿಳಿಸಿದ್ದಾರೆ. ಇದು ಮತಗಳ್ಳತನ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande