ರಾಯಚೂರು, 14 ಆಗಸ್ಟ್ (ಹಿ.ಸ.) :
ಆ್ಯಂಕರ್ : ರಾಯಚೂರು ನಗರದ ಮುಖ್ಯ ಅಂಚೆ ಕಚೇರಿಯಿಂದ ಆಗಸ್ಟ್ 14ರಂದು ಹರ್ ಘರ್ ತಿರಂಗಾ ಪ್ರಭಾತ್ ಪೇರಿ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಅಂಚೆ ಅಧೀಕ್ಷಕರಾದ ಶಿವಾನಂದ್ ಆರ್. ಹಿರಾಪುರ್, ಸಹಾಯಕ ಅಂಚೆ ಅಧೀಕ್ಷಕರಾದ ಶಿವಾನಂದ್ ವಂದಾಲ್ ಅವರು ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅಂಚೆ ಕಚೇರಿಯ ಪೋಸ್ಟ ಮಾಸ್ಟರ್ ಬಸವರಾಜ್ ಈಟಿ, ಅಂಚೆ ಕಚೇರಿಯ ಉಪ ವಿಭಾಗದ ಅಧಿಕಾರಿ ಕುಮಾರ್ ಪವರ್, ಶಿವಪಾದ ಶಿವಂಗಿ ಸೇರಿದಂತೆ ಅಂಚೆ ಕಚೇರಿಯ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಭಾಗಿಯಾದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್