ಗದ್ವಾಲ್ ವ್ಯಕ್ತಿ ಕಾಣೆ
ಗದ್ವಾಲ್, 14 ಆಗಸ್ಟ್ (ಹಿ.ಸ.) : ಆ್ಯಂಕರ್ : ಗದ್ವಾಲ್ ಜಿಲ್ಲೆ ಚಿಂತಪೇಟೆ ವ್ಯಾಪ್ತಿಯ ನಿವಾಸಿ ವಡ್ಡೆ ಮಲ್ಲೇಶ್(39) ಕಾಣೆಯಾಗಿದ್ದು, ಮರಿಯಮ್ಮನಹಳ್ಳಿ ಪೊಲೀಸ್, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ವ್ಯಕ್ತಿಯ ಗುರುತು : 5.4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಮತ್ತು ಬಲ ಕೈನ
ಗದ್ವಾಲ್ : ವ್ಯಕ್ತಿ ಕಾಣೆ


ಗದ್ವಾಲ್, 14 ಆಗಸ್ಟ್ (ಹಿ.ಸ.) :

ಆ್ಯಂಕರ್ : ಗದ್ವಾಲ್ ಜಿಲ್ಲೆ ಚಿಂತಪೇಟೆ ವ್ಯಾಪ್ತಿಯ ನಿವಾಸಿ ವಡ್ಡೆ ಮಲ್ಲೇಶ್(39) ಕಾಣೆಯಾಗಿದ್ದು, ಮರಿಯಮ್ಮನಹಳ್ಳಿ ಪೊಲೀಸ್, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ವ್ಯಕ್ತಿಯ ಗುರುತು : 5.4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಮತ್ತು ಬಲ ಕೈನಲ್ಲಿ ಆಂಜನೇಯ ಚಿತ್ರ ಹಚ್ಚೆ ಹಾಕಿಸಿಕೊಂಡಿರುತ್ತಾನೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಅಂಗಿ ಮತ್ತು ನೀಲಿ ಬಣ್ಣದ ಲುಂಗಿಯನ್ನು ಧರಿಸಿರುತ್ತಾರೆ. ಇವರು ತೆಲುಗು ಭಾಷೆ, ಮಾತನಾಡುತ್ತಾರೆ. ಈ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮರಿಯಮ್ಮನಹಳ್ಳಿ ಪೊಲೀಸ್, ಠಾಣೆಯ ಪಿಎಸ್‍ಐ ಮೊ.9480805769ಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande