ವಿಜಯಪುರ, 14 ಆಗಸ್ಟ್ (ಹಿ.ಸ.) :
ಆ್ಯಂಕರ್ : ನಾಳೆ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿಕಲಚೇತನರು, ಯೋಧರಿಗೆ ಉಚಿತ ಆಟೋ ಸೇವಗೆ ಅವಕಾಶ ನೀಡುವಂತೆ ವಿಜಯಪುರ ನಗರದ ಎಸ್ಪಿಯವರಿಗೆ ಜೈ ಹಿಂದ ಆಟೋ ಚಾಲಕರ ಕ್ಷೇಮಾಭಿವೃದ್ಧಿ ಸಂಘದವರು ಮನವಿ ಮಾಡಿದರು.
ವಿಜಯಪುರ ನಗರದ ಗಾಂಧಿಚೌಕ್‌ನಿಂದ ಕಂದಗಲ್ ಹಣಮಂತರಾಯ ರಂಗಮಂದಿರದ ವರೆಗೂ ನಾಳೆ ಬೆಳಗ್ಗೆ 8:30 ರಿಂದ 2 ಗಂಟೆಯ ವರೆಗೂ ಉಚಿತ ಸೇವೆ ನೀಡುತ್ತೇವೆ. ಅದಕ್ಕಾಗಿ ಸಂಚಾರಿ ಪೊಲೀಸರು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಎಸ್ಪಿ ಲಕ್ಷ್ಮಣ ನಿಂಬರಿಗಿಗೆ ಮನವಿ ಮಾಡಿಕೊಂಡರು.
ಹಿಂದೂಸ್ತಾನ್ ಸಮಾಚಾರ್ / jyothi deshpande