ಧಾರವಾಡ, 14 ಆಗಸ್ಟ್ (ಹಿ.ಸ.) :
ಆ್ಯಂಕರ್ : ನಾರಾಯಣ ಹೆಲ್ತ್ ನ ಅಂಗ ಸಂಸ್ಥೆಯಾದ ಎಸ್ ಡಿ ಎಮ್ ನಾರಾಯಣ ಹಾರ್ಟ್ ಸೆಂಟರ್ ನ ನೂತನ ಉಚಿತ ಆಂಬುಲೆನ್ಸ್ ಸೇವೆಗೆ ಧಾರವಾಡ ಜಿಲ್ಲಾಧಿಕಾರಿ ದಿವ್ಯಾಪ್ರಭು ಜೆ ಆರ್ ಜೆ ರವರು ಗುರುವಾರ ಚಾಲನೆ ನೀಡಿದರು.
ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಾರಾಯಣ ಹೆಲ್ತ್ ನ ಈ ಸೇವೆಯನ್ನು ಶ್ಲಾಘಸಿ ಹುಬ್ಬಳ್ಳಿ ಧಾರವಾಡ ಜನರಿಗೆ ಈ ಸೇವೆ ಯೂ ಒಂದು ಉಡುಗೊರೆಯಾಗಿದೆ, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿ ನಾರಾಯಣ ಹಾರ್ಟ್ ಸೆಂಟರಗೆ ಅಭಿನಂದಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಎಸ್ ಎಂ ಹೊನಕೇರಿ ಮಾತನಾಡಿ ಈ ಸೇವೆಯೂ ಹುಬ್ಬಳ್ಳಿ-ಧಾರವಾಡ ಜನರಿಗೆ ಉಪಯೋಗಕರವಾಗಲಿದೆ, ಈ ಸೇವೆಯೊಂದಿಗೆ ನಾರಾಯಣ ಹೆಲ್ತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಕೈಜೋಡಿಸಿದಂತಾಗಿದೆ ಎಂದರು.
ಎಸ್ ಡಿ ಎಮ್ ನಾರಾಯಣ ಹಾರ್ಟ್ ಸೆಂಟರನ್ ವೈದ್ಯಕೀಯ ಅದಿಕ್ಷಕರಾದ ಡಾ. ಕೀರ್ತಿ ಪಿ ಎಲ್ ರವರು ಮಾತನಾಡಿ ಹೃದಯಾಘಾತದ ಸಾವುಗಳ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಎಸ್ ಡಿ ಎಮ್ ನಾರಾಯಣ ಹಾರ್ಟ್ ಸೆಂಟರ ಆಸ್ಪತ್ರೆಯು ಉಚಿತ ಇನ್ನೋವಾ ಕ್ರಿಸ್ಟಾ ಅಂಬ್ಯುಲೆನ್ಸ್ ಸೇವೆಯನ್ನು ಹುಬ್ಬಳ್ಳಿ ಧಾರವಾಡ ನಗರದ ಜನರಿಗೆ ನೀಡುತ್ತಿದೆ. ಈ ಅಂಬ್ಯುಲೆನ್ಸ್ ನಗರದ ಆಸ್ಪತ್ರೆಗಳಿಂದ ಕರೆ ಬಂದಾಗ ತುರ್ತಾಗಿ ಹೋಗಿ ವೈದ್ಯರು ಪತ್ತೆ ಹಚ್ಚಿದ ಹೃದಯ ರೋಗದ ಪ್ರಕರಣಗಳನ್ನು ನಗರಗಳ ಆಸ್ಪತ್ರೆಯಿಂದ ಈ ಅಂಬ್ಯುಲೆನ್ಸ್ ನಾರಾಯಣ ಹಾರ್ಟ್ ಸೆಂಟರ್ ಗೆ ಕರೆತರಲು ಸಹಕಾರಿಯಾಗಿರುತ್ತದೆ. ಇದರ ಉದ್ದೇಶ ಹೃದಯಘಾತವಾದಾಗ ಅತಿ ಕಡಿಮೆ ಸಮಯದಲ್ಲಿ ಚಿಕಿತ್ಸೆ ನೀಡಬೇಕಾಗುತ್ತದೆ ಆದರೆ ಸಾಮಾನ್ಯ ಆಸ್ಪತ್ರೆಗಳಿಂದ ಉನ್ನತ ಚಿಕಿತ್ಸೆಗೆ ನಾರಾಯಣ ಹಾರ್ಟ್ ಸೆಂಟರ್ ಗೆ ಬರಲು ಅನುಕೊಲವಾಗಲಿದೆ ಎಂದರು.
ಈ ಕಾರ್ಯಕ್ರಮ ದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಸಂಗಪ್ಪ ಗಾಬಿ, ಎಸ್ ಡಿ ಎಮ್ ನಾರಾಯಣ ಹಾರ್ಟ್ ಸೆಂಟರ್ ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಅಜೇಯ ಹುಲಮನಿ ಮತ್ತು ದುಂಡೇಶ ತಡಕೋಡ ರವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa