ಸೇವಾ ನ್ಯೂನತೆ : ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ತೀರ್ಪು ಪ್ರಕಟ
ಕೊಪ್ಪಳ, 14 ಆಗಸ್ಟ್ (ಹಿ.ಸ.) : ಆ್ಯಂಕರ್ : ವಿವಾಹ ಸಮಾರಂಭದ ಪೋಟೋ ಮತ್ತು ವಿಡಿಯೋಗಳನ್ನು ಸೂಕ್ತ ರೀತಿಯಲ್ಲಿ ಹಾಗೂ ಸಮರ್ಪಕವಾಗಿ ಮಾಡಿಕೊಡದೇ ಫಿರ್ಯಾದುದಾರರಿಗೆ ಎದುರುದಾರರಿಂದ ಉಂಟಾದ ಸೇವಾ ನ್ಯೂನತೆ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತೀರ್ಪು ಪ್ರಕಟಿಸಿದೆ.
ಸೇವಾ ನ್ಯೂನತೆ : ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ತೀರ್ಪು ಪ್ರಕಟ


ಕೊಪ್ಪಳ, 14 ಆಗಸ್ಟ್ (ಹಿ.ಸ.) :

ಆ್ಯಂಕರ್ : ವಿವಾಹ ಸಮಾರಂಭದ ಪೋಟೋ ಮತ್ತು ವಿಡಿಯೋಗಳನ್ನು ಸೂಕ್ತ ರೀತಿಯಲ್ಲಿ ಹಾಗೂ ಸಮರ್ಪಕವಾಗಿ ಮಾಡಿಕೊಡದೇ ಫಿರ್ಯಾದುದಾರರಿಗೆ ಎದುರುದಾರರಿಂದ ಉಂಟಾದ ಸೇವಾ ನ್ಯೂನತೆ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತೀರ್ಪು ಪ್ರಕಟಿಸಿದೆ.

ಗ್ರಾಹಕ ಫಿರ್ಯಾದು ಸಂಖ್ಯೆ: 72/2024 ರಲ್ಲಿನ ಅಂತಿಮ ತೀರ್ಪಿನ ಸಾರಾಂಶದನ್ವಯ ಫಿರ್ಯಾದುದಾರರಾದ ಲೇಖನಾ ಮತ್ತು ಅರ್ಪಣ್ ಇವರು ಕೊಪ್ಪಳ ನಿವಾಸಿಯಾಗಿದ್ದು, ಈ ದೂರುದಾರರು 1ನೇ ಎದುರುದಾರರಾದ ವೆಡ್‍ಹುಡ್ಸ್ ವೂವ್‍ಲೆಕ್ಸ್ ಆಫಿಸ್ ಬಿ.ಟಿ.ಎಂ ಲೇಔಟ್ ಬೆಂಗಳೂರಿನ ಆಫೀಸನ್ನು 2 ಮತ್ತು 3ನೇ ಎದುರುದಾರರಾದ ರೋಷನ್ ಕ್ರಿಸ್ಟೋಪರ್ ಮತ್ತು ಇಮ್ಯಾನುಲ್ ಇವರು ನಿರ್ವಹಿಸುತ್ತಿದ್ದು, ದೂರುದಾರರರು 1 ಮತ್ತು 2 ರವರ ವಿವಾಹ ಪೂರ್ವ ಮತ್ತು ವಿವಾಹ ದಿನಾಂಕ 28-11-2022 ರಿಂದ 30-11-2022 ರವರೆಗೆ ವಿವಾಹ ಸಮಾರಂಭದ ಪೋಟೋಗಳನ್ನು ಮತ್ತು ವಿಡಿಯೋವನ್ನು ಮಾಡಿಕೊಡುವ ಸೇವೆಯ ಸಲುವಾಗಿ ಹಾಗೂ ವಿವಾಹ ಪೂರ್ವ ಪೋಟೋಗಳನ್ನು ಮತ್ತು ವಿಡಿಯೋವನ್ನು ಮಾಡಿಕೊಡುವಂತೆ ಎದುರುದಾರರ ಮತ್ತು ದೂರುದಾರರ ಮಧ್ಯ ಮಾತುಕತೆಯಾಗಿ ರೂ. 1,20,000 ಗಳ ಒಪ್ಪಂದ ಆಗಿದ್ದು, ಎದುರುದಾರರನ್ನು ಸಂರ್ಪಕಿಸಿ ಒಟ್ಟು ಮೊತ್ತ ರೂ. 1,00,000 ಗಳಿಗೆ ಹಂತ ಹಂತವಾಗಿ ಪೋನ್‍ಪೇ ಮುಖಾಂತರ 3ನೇ ಎದುರುದಾರರ ಅಕೌಂಟಿಗೆ ಜಮೆ ಮಾಡಿರುತ್ತಾರೆ. ಎದುರುದಾರರು ದೂರುದಾರರಗಳ ವಿವಾಹ ಪೂರ್ವ ಪೋಟೋಗಳನ್ನು ಮತ್ತು ವಿಡಿಯೋವನ್ನು ಒಪ್ಪಂದದಂತೆ ಸಕಲೇಶಪೂರ ಮತ್ತು ಚಿಕ್ಕಮಗಳೂರಿನಲ್ಲಿ 3 ದಿನಗಳ ಕಾಲ ಮಾಡಿಕೊಡಬೇಕಾಗಿದ್ದು, ಈ ಪೋಟೋಗಳನ್ನು ಮತ್ತು ವಿಡಿಯೋವನ್ನು ಸಮರ್ಪಕವಾಗಿ ಮಾಡಿಕೊಡದೇ ಹಾಗೂ ವಿವಾಹ ಸಮಾರಂಭದ ಪೋಟೋಗಳನ್ನು ಮತ್ತು ವಿಡಿಯೋಗಳನ್ನು ಸೂಕ್ತ ರೀತಿಯಲ್ಲಿ ಹಾಗೂ ಸಮರ್ಪಕವಾಗಿ ಮಾಡಿಕೊಡದೇ ನಿರ್ಲಕ್ಷತೆ ತೋರಿ ಸೇವಾ ನ್ಯೂನ್ಯತೆ ಎಸಗಿದ್ದರಿಂದ ದೂರುದಾರರು ಎದುರುದಾರರ ವಿರುದ್ಧ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪರಿಹಾರ ಕೋರಿ ದೂರನ್ನು ದಾಖಲಿಸಿರುತ್ತಾರೆ.

ದೂರನ್ನು ದಾಖಲಿಸಿಕೊಂಡ ನಂತರ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರಿಗೆ ನೋಟಿಸನ್ನು ನೀಡಿದ್ದು, ಈ ನೋಟಿಸ್ ಎದುರುದಾರರಿಗೆ ಖುದ್ದು ಜಾರಿಯಾಗಿರುತ್ತದೆ. ಎದುರುದಾರರು ವಕೀಲರ ಮೂಲಕ ಹಾಜರಾಗಿ ಆಕ್ಷೇಪಣೆಯನ್ನು ಸಲ್ಲಿಸಿರುತ್ತಾರೆ ಮತ್ತು ವಿಚಾರಣೆ ಪ್ರಮಾಣ ಪತ್ರವನ್ನು ಸಲ್ಲಿಸಿರುತ್ತಾರೆ.

ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಜಿ.ಇ. ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯರಾದ ರಾಜು ಎನ್. ಮೇತ್ರಿ ರವರು ವಾದವನ್ನು ಆಲಿಸಿ, ದಾಖಲೆಗಳನ್ನು ಪರಿಶೀಲಿಸಿ, ಎದುರುದಾರರು ದೂರುದಾರರಿಗೆ ವಿವಾಹ ಪೂರ್ವ ಮತ್ತು ವಿವಾಹ ಸಮಾರಂಭದ ಪೋಟೋಗಳನ್ನು ಮತ್ತು ವಿಡಿಯೋವನ್ನು ನೀಡುವಲ್ಲಿ ವಿಳಂಬ ಮಾಡಿರುವುದು ಮೇಲ್ನನೋಟಕ್ಕೆ ಕಂಡು ಬಂದಿರುತ್ತದೆ. ದೂರುದಾರರ ವಿವಾಹ ಸಮಾರಂಭದ ಸಂಪೂರ್ಣ ಪೋಟೋಗಳನ್ನು ಮತ್ತು ವಿಡಿಯೋವನ್ನು ಸಮರ್ಪಕವಾಗಿ ಸೂಕ್ತ ಸಮಯದಲ್ಲಿ ಒದಗಿಸುವಲ್ಲಿ ಎದುರುದಾರರು ವಿಫಲರಾಗಿ ಸೇವಾ ನ್ಯೂನ್ಯತೆ ಎಸಗಿರುತ್ತಾರೆ.

ಆದ್ದರಿಂದ ಎದುರುದಾರರರು ದೂರುದಾರರಿಗೆ ಪರಿಹಾರ ರೂಪದಲ್ಲಿ ರೂ. 25,000 ಗಳನ್ನು ವಾರ್ಷಿಕ ಶೇ.6ರ ಬಡ್ಡಿ ಸಮೇತ ದೂರಿನ ದಿನಾಂಕದಿಂದ ಪಾವತಿಯಾಗುವವರೆಗೆ ನೀಡುವಂತೆ ಹಾಗೂ ದೂರಿನ ಖರ್ಚು ರೂ. 5,000 ಗಳನ್ನು ಎದುರುದಾರರು ದೂರುದಾರರಿಗೆ ಪಾವತಿಸುವಂತೆ ಆದೇಶಿಸಲಾಗಿದೆ. ಈ ಪರಿಹಾರದ ಮೊತ್ತವನ್ನು ಆದೇಶದ ದಿನಾಂಕದಿಂದ 45 ದಿನಗಳ ಒಳಗಾಗಿ ಎದುರುದಾರರು ಫಿರ್ಯಾದುದಾರರಿಗೆ ಪಾವತಿಸುವಂತೆ ಆದೇಶವನ್ನು ನೀಡಿರುತ್ತಾರೆ ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟ್ರಾರ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

-

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande