ಬಳ್ಳಾರಿ, 14 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ಕೌಲ್‍ಬಜಾರ್‍ನ ಜಾಗೃತಿ ನಗರದ ಮಸೀದ್ - ಎ - ಅಬ್ದುತವಾಬ್ ಹದೀಸ್ ಮಸೀದಿಯನ್ನು ವೀಕ್ಷಿಸಲು ಮಸೀದಿಯ ಆಡಳಿತ ಮಂಡಳಿಯು ಆಗಸ್ಟ್ 17ರ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮುಕ್ತ ಅವಕಾಶವನ್ನು ನೀಡಿ ಸರ್ವಧರ್ಮೀಯರನ್ನು ಆಹ್ವಾನಿಸಿದೆ.
ಮಸೀದಿಯ ಆಡಳಿತ ಮಂಡಳಿಯ ತೋಹಿತ್ ಭಾಷಾ, ನಿಸಾರ್ ಅಹ್ಮದ್, ಮುನೀರ್ ಅಹ್ಮದ್, ಅಕ್ರಂ, ಉಮರ್, ಇಮ್ರಾನ್, ನೂರುಲ್ಲಾ, ಇಲಿಯಾಸ್ ಖಾನ್ ಅವರು ಪತ್ರಕರ್ತರಿಗೆ ಶನಿವಾರ ಈ ಮಾಹಿತಿಯನ್ನು ನೀಡಿದರು.
ಮಾನವೀಯ ಸಂಬಂಧಗಳನ್ನು ಬೆಳೆಸುವ ಮತ್ತು ಮಾನವೀಯತೆಯನ್ನು ಮೂಡಿಸುವ ನಿಟ್ಟಿನಲ್ಲಿ ಪರಸ್ಪರ ಪ್ರೀತಿ, ಸೌಹಾರ್ದತೆ, ಭಾತೃತ್ವದ ಸಂದೇಶಗಳನ್ನು ಸಾರುವನಿಟ್ಟಿನಲ್ಲಿ ಸರ್ವಧರ್ಮೀಯ ಪುರುಷ - ಸ್ತ್ರೀ ಮತ್ತು ಮಕ್ಕಳಿಗೂ ಮಸೀದಿ ಪ್ರವೇಶಕ್ಕೆ `ನಮ್ಮೂರ ಮಸೀದಿ ನೋಡ ಬನ್ನಿ' ಎಂದು ಆಹ್ವಾನಿಸುತ್ತಿದ್ದೇವೆ ಎಂದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್