ರಾಯಚೂರು, 14 ಆಗಸ್ಟ್ (ಹಿ.ಸ.) :
ಆ್ಯಂಕರ್ : ಡಾ.ಬಿ.ಆರ್.ಅಂಬೇಡ್ಕರ ಅಭಿವೃದ್ದಿ ನಿಗಮ, ಕರ್ನಾಟಕ ಭೋವಿ ಅಭಿವೃದ್ದಿ ನಿಗಮ ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದ ವ್ಯಾಪ್ತಿಗೆ ಒಳಪಡುವ ಉಪ ಜಾತಿಗಳವಾರು 2025-26ನೇ ಸಾಲಿನಲ್ಲಿ ಸಾಲ ಸೌಲಭ್ಯಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಇಚ್ಚಿಸುವ ಫಲಾಪೇಕ್ಷಿಗಳು ಸೇವಾ ಸಿಂದು ಅಪ್ಲಿಕೇಷನ್ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಸೆಂಟರ್‍ಗಳಲ್ಲಿ ವೆಬ್‍ಸೈಟ್ ವಿಳಾಸ: https://sevasindhu.karnataka.gov.in/Sevasindhu/Kannada?ReturnUrl=%2F ಈ ಮೂಲಕ ಸೆಪ್ಟಂಬರ್ 10 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ನಿಗಮದ ನಿರ್ದೇಶಕ ಮಂಡಳಿ ವಿಮೋಚನಾ ಕೋಟಾ ಅಥವಾ ಸರ್ಕಾರದ ಸಾಂಸ್ಥಿಕ ಕೋಟಾದಡಿ ಸ್ವೀಕರಿಸುವ ಅರ್ಜಿಗಳನ್ನು ಸಹ ಸೇವಾ ಸಿಂಧು ಪೋರ್ಟಲ್ ಮೂಲಕವೇ ಸಲ್ಲಿಸಬೇಕು.
ಹೆಚ್ಚಿನ ಮಾಹತಿಗಾಗಿ ಡಾ:ಬಿ.ಆರ್.ಅಂಬೇಡ್ಕರ ಅಭಿವೃದ್ದಿ ನಿಗಮ ರಾಯಚೂರು ಜಿಲ್ಲೆ, ಚೈತನ್ಯ ಆಸ್ಪತ್ರೆ ಹತ್ತಿರ, ಡ್ಯಾಡಿ ಕಾಲೋನಿ ಲಿಂಗಸೂಗೂರು ರೋಡ್ ರಾಯಚೂರು-584101, ದೂರವಾಣಿ ಸಂಖ್ಯೆ: 08532-220774 ಇವರಿಗೆ ಸಂಪರ್ಕಿಸಬಹುದಾಗಿದೆ. 2023-24 ಮತ್ತು 2024-25 ನೇ ಸಾಲಿನಲ್ಲಿ ಅನ್ ಲೈನ್‍ನಲ್ಲಿ ಅರ್ಜಿ ಸಲ್ಲಿಸಿರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
ಯೋಜನೆಗಳ ವಿವರ: ಸ್ವಯಂ ಉದ್ಯೋಗ ನೇರಸಾಲ ಯೋಜನೆಗಳ ಪೈಕಿ ನೇರಸಾಲ ಯೋಜನೆಯಡಿ ಕಿರು ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ನಿಗಮದಿಂದ ಸಹಾಯಧನ ಮತ್ತು ನೇರಸಾಲ ಮಂಜೂರಿ ಮಾಡಲಾಗುತ್ತದೆ. ಅದೇ ರೀತಿ ಕುರಿ ಸಾಕಣೆ ಯೋಜನೆಯಡಿ ಕುರಿ ಸಾಕಣೆ ಉದ್ದೇಶಕ್ಕೆ ನಿಗಮದಿಂದ ಸಹಾಯಧನ ಮತ್ತು ನೇರಸಾಲ ಮಂಜೂರು ಮಾಡಲಾಗುತ್ತದೆ. ಈ ಯೋಜನೆಯಡಿ ಘಟಕ ವೆಚ್ಚ 1 ಲಕ್ಷ ರೂ ಇದ್ದು, ಇದರಲ್ಲಿ ಸಹಾಯಧನ 50,000 ರೂ. ಮತ್ತು ಸಾಲ 50,000 ರೂ.ಇರುತ್ತದೆ. ಶೇ.4ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ.
ಅದೇ ರೀತಿ ಬ್ಯಾಂಕ್ ಸಹಯೋಗದೊಂದಿಗೆ ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಯನ್ನು ರೂಪಿಸಲಾಗಿದ್ದು ಇದರಡಿ ಸ್ವಾವಲಂಬಿ ಸಾರಥಿ ಕಾರ್ಯಕ್ರಮದಡಿ ವಾಹನ ಸೌಕರ್ಯ ಒದಗಿಸಲಾಗುತ್ತದೆ. ಸರಕು ವಾಹನ ಟ್ಯಾಕ್ಸಿ (ಹಳದಿ ಬೋರ್ಡ್) ಉದ್ದೇಶದಡಿ ಘಟಕ ವೆಚ್ಚ ಶೇ.75ರಷ್ಟು ಅಥವಾ ಗರಿಷ್ಟ ರೂ.4 ಲಕ್ಷ ರೂ.ಗಳ ಸಹಾಯಧನ ನೀಡಲಾಗುತ್ತದೆ.
ಅದೇ ರೀತಿ ಫಾಸ್ಟ್ ಫುಡ್ ಟ್ರಕ್ ಟ್ರೀಲರ್ ಅಥವಾ ಮೊಬೈಲ್ ಕಿಚನ್ ಫುಡ್ ಕಿಯೋಸ್ಥ್ ಕಾರ್ಯಕ್ರಮದಡಿ ಫುಡ್ ಕಾರ್ಟ್ ವಾಹನಗಳ ಉದ್ದೇಶದಡಿ ಘಟಕ ವೆಚ್ಚದ ಶೇ.75 ರಷ್ಟು ಅಥವಾ ಗರಿಷ್ಟ 4 ಲಕ್ಷ ರೂ.ಗಳ ಸಹಾಯಧನ ನೀಡಲಾಗುತ್ತದೆ.
ಅದೇ ರೀತಿ ಹೈನುಗಾರಿಕೆ ಕಾರ್ಯಕ್ರಮದಡಿಯಲ್ಲಿ ಹೈನುಗಾರಿಕೆ ಕೈಗೊಳ್ಳಲು ಎರಡು ಎಮ್ಮೆ ಅಥವಾ ಎರಡು ಹಸುಗಳಿಗೆ ಘಟಕ ವೆಚ್ಚದ ಶೇ.50ರಷ್ಟು 1.25 ಲಕ್ಷ ರೂ.ಗಳ ಸಹಾಯಧನ ನೀಡಲಾಗುತ್ತದೆ. ಜೊತೆಗೆ ಇತರೆ ಉದ್ದೇಶ ಕಾರ್ಯಕ್ರಮಡಿ ವ್ಯಾಪಾರ ಮತ್ತು ಇತರೆ ಉದ್ದೇಶಗಳಿಗೆ ಘಟಕ ವೆಚ್ಚ ಶೇ.70 ರಷ್ಟು ಅಥವಾ ಗರಿಷ್ಟ ರೂ.2 ಲಕ್ಷ ರೂ.ಸಹಾಯಧನ ನೀಡಲಾಗುತ್ತದೆ. ಜೊತೆಗೆ ಮೈಕ್ರೋ ಕ್ರೆಡಿಟ್ (ಪ್ರೇರಣಾ ) ಯೋಜನೆ, ಭೂ ಒಡೆತನ ಯೋಜನೆ ಮತ್ತು ಗಂಗಾ ಕಲ್ಯಾಣ ಯೋಜನೆಗೆ ಸಹ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್