ಪುರಿ ಜಗನ್ನಾಥ್ ಮಂದಿರಕ್ಕೆ ಭಯೋತ್ಪಾದಕ ಬೆದರಿಕೆ
ಭುವನೇಶ್ವರ, 13 ಆಗಸ್ಟ್ (ಹಿ.ಸ.) : ಆ್ಯಂಕರ್ : ಪುರಿಯ ಜಗನ್ನಾಥ ದೇವಾಲಯ ಸಮೀಪದ ಬಲಿಸಾಹಿ ಪ್ರವೇಶದ್ವಾರದ ಬಳಿ ಬುಧಿ ಮಾ ಠಾಕುರಾನಿ ದೇವಾಲಯದ ಗೋಡೆಗಳ ಮೇಲೆ ಭಯೋತ್ಪಾದಕರು ದೇವಾಲಯವನ್ನು ನಾಶಪಡಿಸುತ್ತಾರೆ ಎಂಬ ಬರಹಗಳು ಕಂಡು ಬಂದಿದ್ದು, ಭದ್ರತಾ ಸಂಸ್ಥೆಗಳು ಭದ್ರತೆ ಹೆಚ್ಚಿಸಿವೆ. ಬರಹದಲ್ಲಿ ಪ್ರಧಾನಿ
Theret


ಭುವನೇಶ್ವರ, 13 ಆಗಸ್ಟ್ (ಹಿ.ಸ.) :

ಆ್ಯಂಕರ್ : ಪುರಿಯ ಜಗನ್ನಾಥ ದೇವಾಲಯ ಸಮೀಪದ ಬಲಿಸಾಹಿ ಪ್ರವೇಶದ್ವಾರದ ಬಳಿ ಬುಧಿ ಮಾ ಠಾಕುರಾನಿ ದೇವಾಲಯದ ಗೋಡೆಗಳ ಮೇಲೆ ಭಯೋತ್ಪಾದಕರು ದೇವಾಲಯವನ್ನು ನಾಶಪಡಿಸುತ್ತಾರೆ ಎಂಬ ಬರಹಗಳು ಕಂಡು ಬಂದಿದ್ದು, ಭದ್ರತಾ ಸಂಸ್ಥೆಗಳು ಭದ್ರತೆ ಹೆಚ್ಚಿಸಿವೆ.

ಬರಹದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನ ಉಲ್ಲೇಖ, ಕೆಲವು ಮೊಬೈಲ್ ಸಂಖ್ಯೆಗಳು ಹಾಗೂ ಕರೆ ಮಾಡಲು ಸೂಚನೆಗಳೂ ಕಂಡು ಬಂದಿವೆ.

ಇದರೊಂದಿಗೆ ಪರಿಕ್ರಮ ಮಾರ್ಗದ ಅಲಂಕಾರಿಕ ದೀಪಗಳನ್ನು ದುಷ್ಕರ್ಮಿಗಳು ಹಾನಿಗೊಳಿಸಿರುವುದೂ ಪತ್ತೆಯಾಗಿದೆ.

24 ಗಂಟೆಗಳ ಸಿಸಿಟಿವಿ ಕಣ್ಗಾವಲು ಹಾಗೂ ಭದ್ರತಾ ಸಿಬ್ಬಂದಿ ನಿಯೋಜನೆ ಇದ್ದರೂ, ಇಂತಹ ಘಟನೆ ಸಂಭವಿಸಿರುವುದು ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಹುಟ್ಟು ಹಾಕಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಹಾಗೂ ಮೊಬೈಲ್ ಸಂಖ್ಯೆಗಳ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande