ದೌಸಾ, 13 ಆಗಸ್ಟ್ (ಹಿ.ಸ.) :
ಆ್ಯಂಕರ್ : ರಾಜಸ್ಥಾನದ ಖತುಷ್ಯಂ ದರ್ಶನ ಮುಗಿಸಿಕೊಂಡು ಹಿಂದಿರುಗುತ್ತಿದ್ದ ಭಕ್ತರ ವಾಹನಕ್ಕೆ ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮ 11 ಜನರು ಮೃತಪಟ್ಟ ದುರ್ಘಟನೆ ಬೆಳಗಿನ ಜಾವ ದೌಸಾ–ಮನೋಪುರ ರಸ್ತೆಯ ಬಾಪಿ ಬಳಿ ಸಂಭವಿಸಿದೆ.
ಮೃತರು ಎಲ್ಲರೂ ಉತ್ತರ ಪ್ರದೇಶದ ಕಾಸ್ಗಂಜ್ (ಇಟಾ) ಜಿಲ್ಲೆಯ ಅಸ್ರೌಲಿ ಗ್ರಾಮದ ನಿವಾಸಿಗಳು.
ಪಿಕಪ್ ಟ್ರಕ್‌ನಲ್ಲಿ 22 ಕ್ಕೂ ಹೆಚ್ಚು ಭಕ್ತರು ಪ್ರಯಾಣಿಸುತ್ತಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ, ಕಂಟೇನರ್ ಹಿಂದಿನಿಂದ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಏಳು ಮಕ್ಕಳು ಮತ್ತು ನಾಲ್ವರು ಮಹಿಳೆಯರು ಬಲಿಯಾಗಿದ್ದಾರೆ. ಮೃತರಲ್ಲಿ ಪೂರ್ವಿ (3), ಪ್ರಿಯಾಂಕಾ (25), ದಕ್ಷ (12), ಶೀಲಾ (35), ಸೀಮಾ (25), ಅಂಶು (26) ಮತ್ತು ಸೌರಭ್ (35) ಗುರುತಿಸಲಾಗಿದ್ದು ಉಳಿದ ನಾಲ್ವರ ಗುರುತು ಪತ್ತೆಯಾಗಿಲ್ಲ.
ಗಂಭೀರ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿ ಜೈಪುರ ಎಸ್‌ಎಂಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ದೌಸಾ ಜಿಲ್ಲಾಧಿಕಾರಿ ದೇವೇಂದ್ರ ಕುಮಾರ್ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬಲಿಪಶು ಕುಟುಂಬಗಳಿಗೆ ಆರ್ಥಿಕ ನೆರವು ಮತ್ತು ಅಗತ್ಯ ಸಹಾಯ ನೀಡುವುದಾಗಿ ಸರಕಾರ ಭರವಸೆ ನೀಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa