ಸಂವಿಧಾನ ಕ್ಲಬ್ ಆಫ್ ಇಂಡಿಯಾ ಕಾರ್ಯದರ್ಶಿಯಾಗಿ ರಾಜೀವ್ ಪ್ರತಾಪ್ ರೂಡಿ ಪುನರಾಯ್ಕೆ
ನವದೆಹಲಿ, 13 ಆಗಸ್ಟ್ (ಹಿ.ಸ.) : ಆ್ಯಂಕರ್ : ಸಂವಿಧಾನ ಕ್ಲಬ್ ಆಫ್ ಇಂಡಿಯಾ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಡಿ ತಮ್ಮ ಪ್ರತಿಸ್ಪರ್ದಿ ಸಂಜೀವ್ ಬಲ್ಯಾನ್ ಅವರನ್ನು 100 ಮತಗಳಿಂದ ಸೋಲಿಸಿ ತಮ್ಮ 25 ವರ್ಷದ ಪ್ರಾಬಲ್ಯವನ್ನು ಮುಂದುವರೆಸಿದ್ದಾರೆ. ಒಟ್ಟು
Rajiv


ನವದೆಹಲಿ, 13 ಆಗಸ್ಟ್ (ಹಿ.ಸ.) :

ಆ್ಯಂಕರ್ : ಸಂವಿಧಾನ ಕ್ಲಬ್ ಆಫ್ ಇಂಡಿಯಾ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಡಿ ತಮ್ಮ ಪ್ರತಿಸ್ಪರ್ದಿ ಸಂಜೀವ್ ಬಲ್ಯಾನ್ ಅವರನ್ನು 100 ಮತಗಳಿಂದ ಸೋಲಿಸಿ ತಮ್ಮ 25 ವರ್ಷದ ಪ್ರಾಬಲ್ಯವನ್ನು ಮುಂದುವರೆಸಿದ್ದಾರೆ.

ಒಟ್ಟು 1,295 ಮತಗಳಲ್ಲಿ ರೂಡಿಗೆ 391 ಮತ, ಬಲ್ಯಾನ್‌ಗೆ 291 ಮತ ಸಿಕ್ಕಿವೆ. 20 ವರ್ಷಗಳ ನಂತರ ನಡೆದ ಕಾರ್ಯದರ್ಶಿ ಚುನಾವಣೆಗೆ ಅಮಿತ್ ಶಾ, ಜೆ.ಪಿ. ನಡ್ಡಾ, ಸೋನಿಯಾ ಗಾಂಧಿ ಸೇರಿದಂತೆ ಹಿರಿಯ ನಾಯಕರು ಮತದಾನ ಮಾಡಿದ್ದರು.

ಕ್ರೀಡಾ ಕಾರ್ಯದರ್ಶಿ ಹುದ್ದೆಗೆ ರಾಜೀವ್ ಶುಕ್ಲಾ, ಸಂಸ್ಕೃತಿ ಕಾರ್ಯದರ್ಶಿ ಹುದ್ದೆಗೆ ತಿರುಚಿ ಶಿವ ಹಾಗೂ ಖಜಾಂಚಿ ಹುದ್ದೆಗೆ ಜಿತೇಂದ್ರ ರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande