ದಕ್ಷಿಣ ಕೊರಿಯಾದ ಮಾಜಿ ಪ್ರಥಮ ಮಹಿಳೆ ಕಿಮ್ ಕಿಯೋನ್-ಹೀ ಬಂಧನ
ಸಿಯೋಲ್, 13 ಆಗಸ್ಟ್ (ಹಿ.ಸ.) : ಆ್ಯಂಕರ್ : ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ಯೂನ್ ಸುಕ್ ಯಿಯೋಲ್ ಅವರ ಪತ್ನಿ ಮತ್ತು ಮಾಜಿ ಪ್ರಥಮ ಮಹಿಳೆ ಕಿಮ್ ಕಿಯೋನ್-ಹೀ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಿಯೋಲ್ ಕೇಂದ್ರ ಜಿಲ್ಲಾ ನ್ಯಾಯಾಲಯವು, ಪುರಾವೆಗಳನ್ನು ತಿರುಚುವ ಶಂಕೆ ಹಾಗೂ ಹಲವು ಪ್ರಕರಣಗಳಿಗೆ ಸಂಬಂಧ
Arrest


ಸಿಯೋಲ್, 13 ಆಗಸ್ಟ್ (ಹಿ.ಸ.) :

ಆ್ಯಂಕರ್ : ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ಯೂನ್ ಸುಕ್ ಯಿಯೋಲ್ ಅವರ ಪತ್ನಿ ಮತ್ತು ಮಾಜಿ ಪ್ರಥಮ ಮಹಿಳೆ ಕಿಮ್ ಕಿಯೋನ್-ಹೀ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸಿಯೋಲ್ ಕೇಂದ್ರ ಜಿಲ್ಲಾ ನ್ಯಾಯಾಲಯವು, ಪುರಾವೆಗಳನ್ನು ತಿರುಚುವ ಶಂಕೆ ಹಾಗೂ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶೇಷ ಪ್ರಾಸಿಕ್ಯೂಟರ್ ತಂಡದ ಮನವಿಯ ಮೇರೆಗೆ ಬಂಧನ ಆದೇಶ ಹೊರಡಿಸಿತು.

ಕಿಮ್ ಅವರು ಆಮದು ಕಾರು ಡೀಲರ್ ಡಾಯ್ಚ್ ಮೋಟಾರ್ಸ್‌ನ ಷೇರು ಬೆಲೆ ತಿರುಚಿದ ಪ್ರಕರಣ, ಲಂಚ ಸ್ವೀಕರಿಸಿದ ಆರೋಪ ಹಾಗೂ 2022ರ ಉಪಚುನಾವಣೆಯ ಮೇಲೆ ಪ್ರಭಾವ ಬೀರಲು ಯತ್ನಿಸಿದ ಪ್ರಕರಣಗಳಲ್ಲಿ ತನಿಖೆ ಎದುರಿಸುತ್ತಿದ್ದರು.

ವಿಚಾರಣೆಗೆ ಹಾಜರಾದ ಕಿಮ್, ಎಲ್ಲಾ ಆರೋಪಗಳನ್ನು ನಿರಾಕರಿಸಿದರು. ಸುಮಾರು ನಾಲ್ಕು ಗಂಟೆಗಳ ವಿಚಾರಣೆ ಬಳಿಕ, ವಕೀಲರ ವಾದ ಮತ್ತು 848 ಪುಟಗಳ ಸಾಕ್ಷ್ಯ ವರದಿಯನ್ನು ಪರಿಶೀಲಿಸಿದ ನ್ಯಾಯಾಲಯವು, ಸಾಕ್ಷ್ಯ ನಾಶದ ಸಾಧ್ಯತೆಯನ್ನು ಉಲ್ಲೇಖಿಸಿ ನಂತರ ಬಂಧನಕ್ಕೆ ಅನುಮತಿ ನೀಡಿತು.

ನ್ಯಾಯಾಲಯದಿಂದ ಹೊರಬಂದ ತಕ್ಷಣವೇ ಕಿಮ್ ಅವರನ್ನು ವಶಕ್ಕೆ ಪಡೆದು, ಪಶ್ಚಿಮ ಸಿಯೋಲ್‌ನ ಗುರೋ-ಗು ಪ್ರದೇಶದಲ್ಲಿರುವ ಸಿಯೋಲ್ ದಕ್ಷಿಣ ಬಂಧನ ಕೇಂದ್ರಕ್ಕೆ ಕರೆದೊಯ್ದರು. ನ್ಯಾಯಾಲಯದ ವಿಚಾರಣೆಯ ಬಳಿಕ ಕಸ್ಟಡಿಗೆ ತೆಗೆದುಕೊಳ್ಳಲ್ಪಟ್ಟ ಪ್ರಥಮ ಮಹಿಳೆ ಕಿಮ್ ಅವರು ಮೊದಲಿಗರಾಗಿದ್ದಾರೆ.

ಪ್ರಸ್ತುತ, ಕಿಮ್ ಅವರ ಪತಿ ಮತ್ತು ಮಾಜಿ ಅಧ್ಯಕ್ಷ ಯೂನ್ ಸುಕ್ ಯಿಯೋಲ್ ಅವರನ್ನು ಜಿಯೊಂಗ್ಗಿ ಪ್ರಾಂತ್ಯದ ಉಯಿವಾಂಗ್‌ನಲ್ಲಿರುವ ಸಿಯೋಲ್ ಬಂಧನ ಕೇಂದ್ರದಲ್ಲಿ ಇರಿಸಲಾಗಿದ್ದು, ದಕ್ಷಿಣ ಕೊರಿಯಾದ ಇತಿಹಾಸದಲ್ಲಿ ಮಾಜಿ ಅಧ್ಯಕ್ಷ ಹಾಗೂ ಅವರ ಪತ್ನಿ ಇಬ್ಬರೂ ಒಟ್ಟಿಗೆ ಬಂಧನದಲ್ಲಿರುವುದು ಇದೇ ಮೊದಲು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande