ನರಗುಂದ ಪಟ್ಟಣದಲ್ಲಿ ಯುವಕನ ಭೀಕರ ಕೊಲೆ
ಗದಗ, 13 ಆಗಸ್ಟ್ (ಹಿ.ಸ.) ಆ್ಯಂಕರ್:- ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಭೀಕರ ಕೊಲೆಯಾಗಿದೆ. 21 ವರ್ಷದ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಇರಿದು ಹತ್ಯೆ ಮಾಡಿದ್ದಾರೆ. ಮೃತನನ್ನು ಬಸವರಾಜ್ ಮಮ್ಮಟಗೇರಿ ಎಂದು ಗುರುತಿಸಲಾಗಿದ್ದು, ಆತ ಊಟ ಮಾಡಲು ಪಟ್ಟಣದ ಒಂದು ಹೊಟೇಲ್‌ಗೆ ತೆರಳಿದ್ದ ವೇಳೆ
ಪೋಟೋ


ಗದಗ, 13 ಆಗಸ್ಟ್ (ಹಿ.ಸ.)

ಆ್ಯಂಕರ್:- ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಭೀಕರ ಕೊಲೆಯಾಗಿದೆ. 21 ವರ್ಷದ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಇರಿದು ಹತ್ಯೆ ಮಾಡಿದ್ದಾರೆ.

ಮೃತನನ್ನು ಬಸವರಾಜ್ ಮಮ್ಮಟಗೇರಿ ಎಂದು ಗುರುತಿಸಲಾಗಿದ್ದು, ಆತ ಊಟ ಮಾಡಲು ಪಟ್ಟಣದ ಒಂದು ಹೊಟೇಲ್‌ಗೆ ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಸಾಕ್ಷಿದಾರರ ಪ್ರಕಾರ, ಬೈಕ್‌ನಲ್ಲಿ ಬಂದ ನಾಲ್ವರು ಅಪರಿಚಿತ ದುಷ್ಕರ್ಮಿಗಳು ಮಾರಾಕಾಸ್ತ್ರದಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಘಟನೆ ನಡೆದ ಕೂಡಲೇ ನರಗುಂದ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಹತ್ಯೆಯ ಕಾರಣ ಇನ್ನೂ ತಿಳಿದುಬಾರದಿದ್ದು, ವೈಷಮ್ಯ ಅಥವಾ ಹಳೆಯ ದ್ವೇಷ ಹಿನ್ನೆಲೆ ಸಾಧ್ಯತೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೊಲೀಸರು ಅಪರಾಧಿಗಳಿಗೆ ಶೋಧ ಕಾರ್ಯ ನಡೆಸುತ್ತಿದ್ದು, ಆರೋಪಿಗಳನ್ನು ಬೇಗ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande