ನವದೆಹಲಿ, 12 ಆಗಸ್ಟ್ (ಹಿ.ಸ.) :
ಆ್ಯಂಕರ್ : ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಹೊತ್ತ ರವೀಂದ್ರನಾಥ ಟ್ಯಾಗೋರ್ ಅವರ ಪ್ರಸಿದ್ಧ ಚಂಡಾಲಿಕಾ ನಾಟಕವನ್ನು ನೃತ್ಯ ರೂಪದಲ್ಲಿ ಭವ್ಯವಾಗಿ ಪ್ರದರ್ಶಿಸಲಾಯಿತು. ಕಥಕ್ ಸೇರಿದಂತೆ ಹಲವು ನೃತ್ಯ ಪ್ರಕಾರಗಳ ಅದ್ಭುತ ಸಂಯೋಜನೆಯು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದ ಸಹಯೋಗದಲ್ಲಿ ಕಥಕ್ ಧರೋಹರ್ ಸಂಸ್ಥೆ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಸಂಸ್ಥೆಯ ಸ್ಥಾಪಕ ಹಾಗೂ ನಿರ್ದೇಶಕ ಸದಾನಂದ ವಿಶ್ವಾಸ್ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೇಂದ್ರದ ನಿರ್ದೇಶಕ ಆಕಾಶ್ ಪಾಟೀಲ್, ಕಥಕ್ ಧರೋಹರ್ ಅಧ್ಯಕ್ಷ ಪ್ರವೀಣ್ ಶರ್ಮಾ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರವೀಣ್ ಶರ್ಮಾ ಇದು ನಮ್ಮ ಸಂಸ್ಥೆಯ 14ನೇ ವಾರ್ಷಿಕೋತ್ಸವ. ಟ್ಯಾಗೋರ್ ಅವರನ್ನು ನೆನಪಿಸಿಕೊಳ್ಳಲು ಚಂಡಾಲಿಕಾಗಿಂತ ಉತ್ತಮ ಕೃತಿ ಇಲ್ಲ. ಇದು ಭಾರತದ ಅದ್ಭುತ ಸಾಹಿತ್ಯ ಪರಂಪರೆ ಮತ್ತು ಇತಿಹಾಸವನ್ನು ಎತ್ತಿ ತೋರಿಸುತ್ತದೆ, ಎಂದರು.
ಚಂಡಾಲಿಕಾ ಕಥೆಯು ಕೆಳಜಾತಿಯ ಹುಡುಗಿ ಪ್ರಕೃತಿ ಮತ್ತು ಬೌದ್ಧ ಸನ್ಯಾಸಿ ಆನಂದ್ ನಡುವಿನ ಸಂಬಂಧವನ್ನು ಆಧರಿಸಿದೆ. ಬಾವಿಯಿಂದ ನೀರು ತುಂಬುವ ವೇಳೆ ಪ್ರಕೃತಿ ಮತ್ತು ಆನಂದ್ ಮುಖಾಮುಖಿಯಾಗುತ್ತಾರೆ. ಮೇಲ್ಜಾತಿಯ ಜನರು ಅಸ್ಪೃಶ್ಯರಿಂದ ನೀರು ಸ್ವೀಕರಿಸದ ಕಾಲದಲ್ಲಿ, ಆನಂದ್ ಅವರ ನಡವಳಿಕೆ ಪ್ರಕೃತಿಯನ್ನು ಆಘಾತಗೊಳಿಸುತ್ತದೆ. ಆನಂದ್ ಮೇಲೆ ಪ್ರೀತಿಗೆ ಒಳಗಾದ ಪ್ರಕೃತಿ, ತಾಯಿಯ ನೆರವಿನಿಂದ ಅವನನ್ನು ಮನೆಗೆ ಕರೆಯಲು ಮಂತ್ರ ಪ್ರಯೋಗ ಮಾಡಿಸುತ್ತಾಳೆ. ಇದರ ಪರಿಣಾಮವಾಗಿ ಕಥೆಯಲ್ಲಿ ವೈಯಕ್ತಿಕ ಭಾವನೆ ಮತ್ತು ಸಾಮಾಜಿಕ ಅಸಮಾನತೆ ನಡುವಿನ ಸಂಘರ್ಷ ಚಿತ್ರೀಕರಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa