ಬೆಂಗಳೂರು, 12 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕನ್ನಡ, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾದ ಸು ಫ್ರಂ ಸೋ ಸಿನಿಮಾ ಬಿಡುಗಡೆಯಾಗಿ 18 ದಿನಗಳಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ನಿರ್ಮಿಸುತ್ತಿದೆ.
ಪ್ರೇಕ್ಷಕರಿಂದ ಸಿಕ್ಕಿರುವ ಉತ್ತಮ ಪ್ರತಿಕ್ರಿಯೆಯ ಬೆನ್ನಲ್ಲೇ ಚಿತ್ರವು ನಿರಂತರ ಸಂಗ್ರಹ ದಾಖಲಿಸುತ್ತಿದೆ.
ಕನ್ನಡ, ತೆಲುಗು ಹಾಗೂ ಮಲಯಾಳಂ ಮೂರು ಭಾಷೆಗಳ ಒಟ್ಟಾರೆ 18 ದಿನಗಳಲ್ಲಿ ಗಳಿಕೆ ಸುಮಾರು ₹53.80 ಕೋಟಿ ತಲುಪಿದೆ ಎಂದು ವರದಿಗಳು ತಿಳಿಸಿವೆ.
ಇದರಲ್ಲೂ ಕರ್ನಾಟಕ ಹಾಗೂ ಆಂಧ್ರ–ತೆಲಂಗಾಣ ಪ್ರದೇಶಗಳಲ್ಲಿ ಬೃಹತ್ ಮಟ್ಟದ ಸಂಗ್ರಹ ಕಂಡುಬಂದಿದೆ. ಕೇರಳದಲ್ಲಿಯೂ ಚಿತ್ರ ನಿರಂತರ ಪ್ರದರ್ಶನ ಕಾಣುತ್ತಿದೆ.
ಕಥೆ, ಅಭಿನಯ ಮತ್ತು ತಾಂತ್ರಿಕ ಅಂಶಗಳ ಮೆಚ್ಚುಗೆ ಚಿತ್ರದ ಯಶಸ್ಸಿಗೆ ಕಾರಣವಾಗಿದೆ ಎಂದು ವಿತರಣಾ ವಲಯವು ಹೇಳಿದೆ.
ಮುಂದಿನ ವಾರಾಂತ್ಯದಲ್ಲಿಯೂ ಚಿತ್ರ ಗಳಿಕೆ ಮಾಡುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa