ನವದೆಹಲಿ, 12 ಆಗಸ್ಟ್ (ಹಿ.ಸ.) :
ಆ್ಯಂಕರ್ : ಜಾಗತಿಕ ಮಾರುಕಟ್ಟೆಗಳಿಂದ ಇಂದು ಮಿಶ್ರ ಸಂಕೇತಗಳು ಬಂದಿವೆ. ಕಳೆದ ವಹಿವಾಟಿನಲ್ಲಿ ಯುಎಸ್ ಮಾರುಕಟ್ಟೆ ಕುಸಿತ ಕಂಡು, ಡೌ ಜೋನ್ಸ್ 200 ಅಂಕ, ಎಸ್ & ಪಿ 500 ಶೇ.0.25 ಮತ್ತು ನಾಸ್ಡಾಕ್ ಶೇ.0.30 ಇಳಿಕೆಯೊಂದಿಗೆ ಮುಕ್ತಾಯಗೊಂಡಿತು. ಆದರೆ, ಡೌ ಜೋನ್ಸ್ ಫ್ಯೂಚರ್ಸ್ ಇಂದು ಶೇ.0.17 ಏರಿಕೆ ಕಂಡು 44,049.20 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ.
ಯುರೋಪಿಯನ್ ಮಾರುಕಟ್ಟೆಯೂ ಮಿಶ್ರ ಧೋರಣೆ ತೋರಿದ್ದು, ಎಫ್ ಟಿಎಸ್ಸಿ ಶೇ.0.37 ಏರಿಕೆಯಾದರೆ, ಸಿಎಸಿ ಶೇ.0.58 ಮತ್ತು ಡಿಎಎಕ್ಸ ಶೇ.0.34 ಇಳಿಕೆ ಕಂಡಿವೆ.
ಏಷ್ಯಾದ 9 ಪ್ರಮುಖ ಮಾರುಕಟ್ಟೆಗಳಲ್ಲಿ 6 ಹಸಿರು ವಲಯದಲ್ಲಿದ್ದು, 2 ಕೆಂಪು ವಲಯದಲ್ಲಿವೆ. ನಿಕ್ಕಿ ಶೇ.2.74 ಏರಿಕೆ ಕಂಡು 42,966 ಅಂಕ ತಲುಪಿದರೆ, ಜಕಾರ್ತಾ ಕಾಂಪೋಸಿಟ್ ಶೇ.0.97 ಏರಿಕೆಯಾಗಿದೆ. ಹ್ಯಾಂಗ್‌ಸೆಂಗ್ ಶೇ.0.14 ಮತ್ತು ಸ್ಟ್ರೈಟ್ಸ್ ಟೈಮ್ಸ್ ಶೇ.0.39 ಇಳಿಕೆ ಕಂಡಿವೆ. GIFT ನಿಫ್ಟಿ ಶೇ.0.25 ಏರಿಕೆಯೊಂದಿಗೆ 24,636 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa