ನವದೆಹಲಿ, 12 ಆಗಸ್ಟ್ (ಹಿ.ಸ.) :
ಆ್ಯಂಕರ್ : ಭಾರತದ ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ, ಕೇಂದ್ರ ಸಚಿವ ಸಂಪುಟ ನಾಲ್ಕು ಹೊಸ ಸೆಮಿಕಂಡಕ್ಟರ್ ಯೋಜನೆಗಳಿಗೆ ಮಂಗಳವಾರ ಹಸಿರು ನಿಶಾನೆ ತೋರಿಸಿದೆ. ಒಡಿಶಾ, ಪಂಜಾಬ್ ಮತ್ತು ಆಂಧ್ರ ಪ್ರದೇಶಗಳಲ್ಲಿ ₹4,600 ಕೋಟಿ ಹೂಡಿಕೆಯೊಂದಿಗೆ ಈ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ನಂತರ, ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಮಾಹಿತಿ ನೀಡಿದರು. ಈ ಯೋಜನೆಗಳು 2,034 ನುರಿತ ವೃತ್ತಿಪರರಿಗೆ ನೇರ ಉದ್ಯೋಗ ನೀಡಲಿದ್ದು, ಅನೇಕ ಪರೋಕ್ಷ ಉದ್ಯೋಗಗಳಿಗೂ ಅವಕಾಶ ಕಲ್ಪಿಸಲಿದೆ ಎಂದರು.
ಇದರೊಂದಿಗೆ ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಗೆ ಅನುಮೋದಿತ ಯೋಜನೆಗಳ ಸಂಖ್ಯೆ 10ಕ್ಕೆ ಏರಿದೆ. ಆರು ರಾಜ್ಯಗಳಲ್ಲಿ ಒಟ್ಟು ₹1.60 ಲಕ್ಷ ಕೋಟಿ ಹೂಡಿಕೆ ಮಾಡಲಾಗುತ್ತಿದ್ದು, ದೇಶದ ಎಲೆಕ್ಟ್ರಾನಿಕ್ ಉತ್ಪಾದನಾ ಆರ್ಥಿಕತೆಯನ್ನು ಬಲಪಡಿಸುವ ಗುರಿ ಹೊಂದಲಾಗಿದೆ.
ಹೊಸ ಯೋಜನೆಗಳಲ್ಲಿ, ಒಡಿಶಾದಲ್ಲಿ ಸಿಸೆಮ್, ಪಂಜಾಬ್‌ನಲ್ಲಿ ಕಾಂಟಿನೆಂಟಲ್ ಡಿವೈಸಸ್ ಇಂಡಿಯಾ ಪ್ರೈ. ಲಿ. ಆಂಧ್ರಪ್ರದೇಶದಲ್ಲಿ 3D ಗ್ಲಾಸ್ ಸೊಲ್ಯೂಷನ್ಸ್ ಇಂಕ್ ಮತ್ತು ಅಡ್ವಾನ್ಸ್ಡ್ ಸಿಸ್ಟಮ್ ಇನ್ ಪ್ಯಾಕೇಜ್ ಟೆಕ್ನಾಲಜೀಸ್ ಘಟಕಗಳು ಸ್ಥಾಪನೆಯಾಗಲಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa