ನವದೆಹಲಿ, 11 ಆಗಸ್ಟ್ (ಹಿ.ಸ.) :
ಆ್ಯಂಕರ್ : ಗದ್ದಲದ ನಡುವೆ ರಾಜ್ಯ ಸಭೆ ವ್ಯಾಪಾರಿ ಸಾಗಾಟ ಮಸೂದೆ 2025 ಅನ್ನು ಧ್ವನಿ ಮತದ ಮೂಲಕ ಅಂಗೀಕರಿಸಿದೆ. ಆಗಸ್ಟ್ 6ರಂದು ಲೋಕ ಸಭೆಯಲ್ಲಿ ಈ ಮಸೂದೆಗೆ ಒಪ್ಪಿಗೆ ನೀಡಿತ್ತು.
ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ಮಂಡಿಸಿದ ಈ ಮಸೂದೆ 1958ರ ಕಾಯ್ದೆಯನ್ನು ಬದಲಾಯಿಸಿ, ಹಡಗುಗಳ ಮಾಲೀಕತ್ವಕ್ಕೆ ಹೊಸ ಅರ್ಹತಾ ಮಾನದಂಡ ಮತ್ತು ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಅವಕಾಶ ವಿಸ್ತರಿಸುತ್ತದೆ.
ಮಸೂದೆ ಕುರಿತ ಚರ್ಚೆಯ ವೇಳೆ ಬಿಹಾರ ಎಸ್ಐಆರ್ ಮತ್ತು ಮಣಿಪುರ ವಿಚಾರಗಳಲ್ಲಿ ಪ್ರತಿ ಪಕ್ಷದ ಗದ್ದಲದಿಂದ ಕಲಾಪ ಸ್ಥಗಿತವಾಯಿತು.
ಪ್ರತಿ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಲು ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಪ್ರತಿ ಪಕ್ಷದ ಸದಸ್ಯರು ಕಲಾಪ ಬಹಿಷ್ಕರಿಸಿದರು. ನಂತರ ಕಲಾಪವನ್ನು ಮಂಗಳವಾರ ಬೆಳಿಗ್ಗೆ 11 ಗಂಟೆಯವರೆಗೆ ಮುಂದೂಡಲಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa