ಗಾಜಾ ಮೇಲೆ ಇಸ್ರೇಲ್ ದಾಳಿ : ಇಬ್ಬರು ಪತ್ರಕರ್ತರು ಸೇರಿ ಐವರ ಸಾವು
ಟೆಲ್‌ ಅವಿವ್, 11 ಆಗಸ್ಟ್ (ಹಿ.ಸ.) : ಆ್ಯಂಕರ್ : ಗಾಜಾದ ಅಲ್-ಶಿಫಾ ಆಸ್ಪತ್ರೆ ಸಮೀಪ ಇಸ್ರೇಲ್ ನಡೆಸಿದ ಇತ್ತೀಚಿನ ವೈಮಾನಿಕ ದಾಳಿಯಲ್ಲಿ ಇಬ್ಬರು ಅಲ್-ಜಜೀರಾ ಪತ್ರಕರ್ತರು ಸೇರಿದಂತೆ ಐದು ಮಂದಿ ಮೃತಪಟ್ಟಿದ್ದಾರೆ. ಸಾವನ್ನಪ್ಪಿದವರಲ್ಲಿ ಪ್ಯಾಲೇಸ್ಟಿನಿಯನ್ ಮೂಲದ ಪತ್ರಕರ್ತ ಅನಾಸ್ ಅಲ್-ಶರೀಫ್ ಪ್ರಮುಖರು.
Gaja


ಟೆಲ್‌ ಅವಿವ್, 11 ಆಗಸ್ಟ್ (ಹಿ.ಸ.) :

ಆ್ಯಂಕರ್ : ಗಾಜಾದ ಅಲ್-ಶಿಫಾ ಆಸ್ಪತ್ರೆ ಸಮೀಪ ಇಸ್ರೇಲ್ ನಡೆಸಿದ ಇತ್ತೀಚಿನ ವೈಮಾನಿಕ ದಾಳಿಯಲ್ಲಿ ಇಬ್ಬರು ಅಲ್-ಜಜೀರಾ ಪತ್ರಕರ್ತರು ಸೇರಿದಂತೆ ಐದು ಮಂದಿ ಮೃತಪಟ್ಟಿದ್ದಾರೆ. ಸಾವನ್ನಪ್ಪಿದವರಲ್ಲಿ ಪ್ಯಾಲೇಸ್ಟಿನಿಯನ್ ಮೂಲದ ಪತ್ರಕರ್ತ ಅನಾಸ್ ಅಲ್-ಶರೀಫ್ ಪ್ರಮುಖರು.

ದಾಳಿಯ ಬಳಿಕ ಇಸ್ರೇಲ್ ರಕ್ಷಣಾ ಪಡೆಗಳು ಪ್ರಕಟಣೆ ನೀಡಿ, ಅನಾಸ್ ಅಲ್-ಶರೀಫ್ ಹಮಾಸ್ ಭಯೋತ್ಪಾದಕ ಘಟಕದ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದನು ಮತ್ತು ಇಸ್ರೇಲಿ ನಾಗರಿಕರು ಹಾಗೂ ಸೈನಿಕರ ಮೇಲೆ ರಾಕೆಟ್ ದಾಳಿಯಲ್ಲಿ ನೇರ ಪಾತ್ರವಹಿಸಿದ್ದನು ಎಂದು ಆರೋಪಿಸಿದೆ.

ದಿ ಜೆರುಸಲೇಮ್ ಪೋಸ್ಟ್ ಪ್ರಕಾರ, ದಾಳಿಯಲ್ಲಿ ಇನ್ನೊಬ್ಬ ಅಲ್-ಜಜೀರಾ ಪತ್ರಕರ್ತನೂ ಮೃತಪಟ್ಟಿದ್ದು, ಇತರ ಮೂವರು ನಾಗರಿಕರು ಮೃತಪಟ್ಟಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande